ಕೃಷಿಗೆ, ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಗೋ ಸಂರಕ್ಷಣೆಯ ಕೆಲಸ ಹಲವು ಕಡೆ ಸದ್ದಿಲ್ಲದೆ ನಡೆಯುತ್ತಿದೆ. ಇಂದು ಗೋವನ್ನು ಹಾಲಿಗಿಂತಲೂ ಇತರ ಉತ್ಪನ್ನಗಳ ಕಾರಣದಿಂದ ಸಾಕಬೇಕಾಗಿದೆ. ಹಾಲು ಉತ್ಪಾದನೆಗಿಂತಲೂ ಮಣ್ಣಿನ ಸಂರಕ್ಷಣೆಯ ಕಾರಣದಿಂದ ಸೆಗಣಿ, ಗೋಮೂತ್ರ ಬಳಕೆ ಬಗ್ಗೆ ಜಾಗೃತಿ ಆಗಬೇಕಿದೆ. ಇದಕ್ಕಾಗಿ ಗೋವಿನ ಉತ್ಪನ್ನ ತಯಾರಕ ಕೃಷಿಕರ ಹಾಗೂ ಗವ್ಯ ಉತ್ಪನ್ನಗಳ ಪರಿಚಯ ಅಭಿಯಾನ “ಗೋಸುರಭಿ” ಯನ್ನು ರೂರಲ್ ಮಿರರ್ ಡಿಜಿಟಲ್ ಮಿಡಿಯಾ ನಡೆಸುತ್ತಿದೆ.
ಗೋವನ್ನು ಹಾಲಿಗಾಗಿ ಮಾತ್ರಾ ಸಾಕುತ್ತಿಲ್ಲ ಎನ್ನುವ ಹಲವು ಕೃಷಿಕರು ಇದ್ದಾರೆ. ಹಾಲಿನ ಹೊರತಾಗಿ ಅನೇಕ ಗವ್ಯ ಉತ್ಪನ್ನಗಳು ತಯಾರಾಗುತ್ತಿದೆ. ಗವ್ಯ ಉತ್ಪನ್ನದಿಂದ ಕ್ಯಾನ್ಸರ್ ರೋಗ ನಿಯಂತ್ರಣ ಬಂದಿದೆ ಎನ್ನುತ್ತಾರೆ ಒಬ್ಬರು ವೈದ್ಯರು, ಗವ್ಯ ಉತ್ಪನ್ನದಿಂದ ಹಲವು ಸೌಂದರ್ಯವರ್ಧಕ ತಯಾರು ಮಾಡಬಹುದು ಎನ್ನುತ್ತಾರೆ ಇನ್ನೊಬ್ಬರು ವೈದ್ಯರು. ಗವ್ಯ ಉತ್ಪನ್ನದ ಮೂಲಕ ಕೃಷಿಯಲ್ಲಿ ಕೀಟಗಳ ನಿಯಂತ್ರಣ, ಮಣ್ಣಿನ ಗುಣಮಟ್ಟ ಹೆಚ್ಚು ಮಾಡಬಹುದು ಎನ್ನುತ್ತಾರೆ ಕೃಷಿಕರು…. ಇದೆಲ್ಲಾ ನಿರಂತರವಾಗಿ ದಿ ರೂರಲ್ ಮಿರರ್.ಕಾಂ ಡಿಜಿಟಲ್ ಮೀಡಿಯಾ ಪ್ರಕಟಿಸುತ್ತದೆ… ಸದ್ಯದಲ್ಲೇ ನಿರೀಕ್ಷಿಸಿ… ಗೋವಿನ ಮೇಲಿನ ಅಭಿಮಾನದ ಅಭಿಯಾನ ಇದು…
ಹಾಲಿನ ಹೊರತಾಗಿ ಗೋವಿನ ಉತ್ಪನ್ನಗಳನ್ನು ತಯಾರಿಸುವ ಕೃಷಿಕರು,ಉದ್ಯಮಿಗಳು ಇದ್ದರೆ ನಮಗೆ ಮಾಹಿತಿ ನೀಡಿ. ನಮ್ಮ ಸಂಪರ್ಕ : 9449125447
ಗೋಸುರಭಿ | ಗೋವಿನ ಉತ್ಪನ್ನ ತಯಾರಕ ಕೃಷಿಕರ ಪರಿಚಯ | ಗವ್ಯ ಉತ್ಪನ್ನಗಳ ಪರಿಚಯ ಅಭಿಯಾನ |