Advertisement
ಅನುಕ್ರಮ

ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು

Share

ಮಾನವನ ಜೀವನವು ನೂರಾರು ಹಂಬಲಗಳಿಂದ ಕೂಡಿದೆ. ಹಂಬಲವಿಲ್ಲದ ಜೀವಮಾನವಿಲ್ಲ. ಆದರೆ ಆ ಹಂಬಲಗಳ ಸ್ವರೂಪವೇ ವ್ಯಕ್ತಿಯ ಗುಣ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯನ್ನು ನಿರ್ಧರಿಸುತ್ತದೆ. ಶಾಸ್ತ್ರಗಳಲ್ಲಿ ಹೇಳುವಂತೆ – ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ ಎಂಬ ಹಂತಗಳನ್ನು ಮನಸ್ಸು ದಾಟುತ್ತದೆ. ಈ ಹಂತಗಳ ವ್ಯತ್ಯಾಸ ತಿಳಿದುಕೊಂಡರೆ ಜೀವನದಲ್ಲಿ ಸಮನ್ವಯವನ್ನು ಸಾಧಿಸಬಹುದು.

ಬಯಕೆ ಎಂದರೆ ಜೀವಿಯ ಸ್ವಾಭಾವಿಕ ತೃಪ್ತಿಹಂಬಲ. ಮಗು ಆಟಿಕೆ ಬಯಸುವುದು, ವಿದ್ಯಾರ್ಥಿ ಉತ್ತಮ ಅಂಕ ಬಯಸುವುದು, ಪೋಷಕರು ಮಕ್ಕಳ ಭವಿಷ್ಯ ಬಯಸುವುದು – ಇವು ಬಯಕೆಯ ನೈಸರ್ಗಿಕ ರೂಪಗಳು.

“ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಸ್ಪೃಹಃ…” ಎಂಬ  ಭಗವದ್ಗೀತೆ (೨.೭೧) ಉಕ್ತಿಯಂತೆ

ಎಲ್ಲ ಬಯಕೆಗಳನ್ನು ಮೀರಿ ನಿರಾಸಕ್ತಿಯಿಂದ ಬದುಕುವವನಿಗೇ ಶಾಂತಿ ದೊರೆಯುತ್ತದೆ.ಇಲ್ಲಿ ಅರ್ಥವೇನೆಂದರೆ – ಬಯಕೆ ತಪ್ಪಲ್ಲ; ಆದರೆ ಬಯಕೆಯನ್ನು ನಿಯಂತ್ರಣದಲ್ಲಿಟ್ಟಾಗ ಅದು ಮಾನವನ ಪ್ರಗತಿಗೆ ದಾರಿ, ನಿಯಂತ್ರಣ ತಪ್ಪಿದಾಗ ಅದು ಕಾಮಕ್ಕೆ ಕಾರಣ.

ಬಯಕೆಯ ಮಿತಿ ಮೀರಿದ ತೀವ್ರತೆಯನ್ನು ಕಾಮ ಎಂಬುದಾಕಿ ಕರೆಯುತ್ತಾರೆ.ಕಾಮ ಎಂದರೆ ಅತೃಪ್ತ ಹಂಬಲ. ಇದು ಸಾಮಾನ್ಯವಾಗಿ ದೇಹಕೇಂದ್ರಿತ, ಸ್ವಾರ್ಥಪರ.ಆಧುನಿಕ ಕಾಲದಲ್ಲಿ  ಅನೇಕರು ಸಂಬಂಧವನ್ನು ‘ಪ್ರೀತಿ’ ಎಂದು ಹೆಸರಿಸಿಕೊಳ್ಳುತ್ತಾರೆ, ಆದರೆ ಅದು ನಿಜವಾಗಿ ದೇಹಕೇಂದ್ರಿತ ‘ಕಾಮ’. ಇಂತಹ ಸಂಬಂಧಗಳು ಬೇಗನೆ ಮುರಿದು ಬಿಡುತ್ತವೆ, ಏಕೆಂದರೆ ಅವು ಸ್ವಾರ್ಥದ ಮೇಲೆ ನಿಂತಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ‘ಟ್ರೆಂಡ್’ ಆದ ತಾತ್ಕಾಲಿಕ ಆಕರ್ಷಣೆಗಳನ್ನು “ಲವ್ ಸ್ಟೋರಿ” ಎಂದು ಪ್ರಚಾರ ಮಾಡುವುದೂ ಇದೇ ರೀತಿಯ ತಪ್ಪು ಕಲ್ಪನೆ.

ಇದಕ್ಕೆಲ್ಲ ಕಾರಣ  ತಾತ್ಕಾಲಿಕ ಸೆಳೆತ ,ಅದುವೇ ಆಕರ್ಷಣೆ.ಆಕರ್ಷಣೆ ಎಂದರೆ ಬಾಹ್ಯ ರೂಪ ಅಥವಾ ಗುಣಗಳಿಂದ ಮನಸ್ಸು ಸೆಳೆಯಲ್ಪಡುವುದು.“ಪರಾಂಚಿ ಖಾನಿ ವ್ಯತೃಣತ್ ಸ್ವಯಂಭೂಃ…” ಎಂಬ ಕಠೋಪನಿಷತ್ (೧.೨.೧) ನ ನುಡಿಯಂತೆ ಸೃಷ್ಟಿಕರ್ತನು ಇಂದ್ರಿಯಗಳನ್ನು ಹೊರಮುಖವಾಗಿಯೇ ರಚಿಸಿದ್ದರಿಂದ ಜೀವಿ ಹೊರಗಿನ ಆಕರ್ಷಣೆಯಲ್ಲಿ ಸಿಕ್ಕಿಕೊಳ್ಳುತ್ತಾನೆ.

ಆಧುನಿಕ ಬದುಕಿನಲ್ಲಿ ಆಕರ್ಷಣೆಯ ಪ್ರಭಾವ ಇನ್ನೂ ಹೆಚ್ಚಾಗಿದೆ. ಜಾಹೀರಾತುಗಳು, ಸಾಮಾಜಿಕ ಮಾಧ್ಯಮಗಳು, ಚಲನಚಿತ್ರಗಳು – ಎಲ್ಲವೂ ನಮ್ಮ ಕಣ್ಣು, ಕಿವಿ, ಮನಸ್ಸನ್ನು ಸೆಳೆಯುತ್ತವೆ. ಒಂದು ಸೆಲ್ಫಿ, ಒಂದು ವಿಡಿಯೋ ಮೂಲಕ ತಾತ್ಕಾಲಿಕ ಆಕರ್ಷಣೆ ಹುಟ್ಟುತ್ತದೆ. ಆದರೆ ಇದು ದೀರ್ಘಕಾಲೀನ ಬಾಂಧವ್ಯ ಕೊಡಲಾರದು.

ಈ   ಕಾರಣದಿಂದ  ನಿಸ್ವಾರ್ಥ ಹೃದಯದ ಬಂಧ ಪ್ರೀತಿ ಎಂಬುದು ಬೇಕಾಗಿದೆ.ಪ್ರೀತಿ ಎಂದರೆ ಸ್ವಾರ್ಥವಿಲ್ಲದ ಹೃದಯದ ಪ್ರತಿಫಲ. ಇಲ್ಲಿ “ನನಗೆ ಬೇಕು” ಎನ್ನುವ ಮನೋಭಾವ ಕಡಿಮೆಯಾಗುತ್ತದೆ; ಬದಲಾಗಿ “ಅವನು/ಅವಳು ಸಂತೋಷವಾಗಿರಲಿ” ಎನ್ನುವ ಹೃದಯ ಬಲವಾಗುತ್ತದೆ.

ಇದನ್ನೇ  ಭಗವದ್ಗೀತೆ (12.13–14) ಯಲ್ಲಿ ಹೇಳಿರುವಂತೆ,

“ಅದ್ವೇಷ್ಠಾ ಸರ್ವಭೂತಾನಾಂ ಮಿತ್ರಃ ಕರುಣ ಏವ ಚ…”

ಯಾರು ಎಲ್ಲರಿಗೂ ಮಿತ್ರ, ಕರುಣೆಯಿಂದ ನಡೆಯುತ್ತಾರೆ, ಅಹಂಕಾರವಿಲ್ಲದೆ ಬದುಕುತ್ತಾರೆ – ಅವರೇ ನಿಜವಾದ ಪ್ರೀತಿಯ ಪ್ರತಿರೂಪ.

ಆಧುನಿಕ ಬದುಕಿನಲ್ಲಿ ಪೋಷಕರು ಮಕ್ಕಳಿಗಾಗಿ ಮಾಡುವ ತ್ಯಾಗ, ಸ್ನೇಹಿತನು ಸ್ನೇಹಿತನ ಕಷ್ಟದಲ್ಲಿ ನಿಲ್ಲುವುದು, ಪತಿಪತ್ನಿಯರು ಪರಸ್ಪರ ಸ್ವಾರ್ಥವಿಲ್ಲದೆ ಬದುಕುವುದು  ಇವು ಪ್ರೀತಿಯ ನಿಜವಾದ ಉದಾಹರಣೆಗಳು.

ಪ್ರೇಮವು ದೇಹ-ಮನಸ್ಸಿನ ಮಿತಿಯನ್ನು ಮೀರಿ ಆತ್ಮದಿಂದ ಆತ್ಮಕ್ಕೆ ಹರಿಯುವ ಅನುಭವ. ಇದು ದಿವ್ಯಾನುಭವ.

ದೇವರನ್ನು ಪ್ರೇಮದಿಂದ ಬಯಸುವವನಿಗೆ ದೇವರೇ ತನ್ನನ್ನು ವ್ಯಕ್ತಗೊಳಿಸುತ್ತಾನೆ.ಗೋಪಿಯರ ಕೃಷ್ಣಭಕ್ತಿ, ಮೀರೆಬಾಯಿಯ ದಿವ್ಯಾನುಭವ  ಇವುಗಳು  ಪ್ರೇಮದ ಶುದ್ಧತೆಯನ್ನು ಹೇಳುತ್ತದೆ.

ಇಂದಿನ ಬದುಕಿನಲ್ಲಿ ನಿಸ್ವಾರ್ಥ ಸೇವಾ ಮನೋಭಾವ, ಮಾನವೀಯ ಕಾಳಜಿ, ಧರ್ಮದ ಶ್ರದ್ಧೆ  ಇವುಗಳಲ್ಲೂ ಪ್ರೇಮದ ದಿವ್ಯ ಕಿರಣವಿದೆ.

ಆದರೆ ಆಧುನಿಕ ಸಮಾಜದಲ್ಲಿ “ಪ್ರೀತಿ” ಎಂಬ ಪದವನ್ನು ಅತಿಯಾಗಿ, ಕೆಲವೊಮ್ಮೆ ತಪ್ಪಾಗಿ ಬಳಸಲಾಗುತ್ತಿದೆ. ಚಾಟ್, ಮೆಸೇಜ್, ಫೋಟೋ ಹಂಚಿಕೊಂಡ ತಕ್ಷಣ “ಲವ್” ಎಂಬ ಹೆಸರು ನೀಡುವುದು; ಫ್ಯಾಷನ್, ಹಣ, ಖ್ಯಾತಿ, ರೂಪಕ್ಕೆ ಮಾತ್ರ ಸೀಮಿತವಾಗಿರುವ ಸಂಬಂಧಗಳು  ಇವು ನಿಜವಾದ ಪ್ರೀತಿ ಅಲ್ಲ. ಇವು ಕೃತಕ ಆಕರ್ಷಣೆ ಮತ್ತು ದೇಹಕೇಂದ್ರಿತ ಕಾಮದ ಆವರಣ.ಇಂತಹ ಕೃತಕ ಸಂಬಂಧಗಳು ದೀರ್ಘಕಾಲಕ್ಕೆ ನೋವು, ನಿರಾಶೆ, ಏಕಾಂತವನ್ನು ಮಾತ್ರ ಕೊಡುತ್ತವೆ.

ಜೀವನದಲ್ಲಿ ಬಯಕೆ ತಪ್ಪಲ್ಲ, ಆದರೆ ಅದು ಕಾಮವಾಗಿ ಮಾರ್ಪಡುವುದನ್ನು ಎಚ್ಚರಿಸಬೇಕು. ಆಕರ್ಷಣೆ ಸಹಜ, ಆದರೆ ಅದರ ಮಿತಿಯನ್ನು ತಿಳಿದುಕೊಳ್ಳಬೇಕು. ಪ್ರೀತಿ ಎಂದರೆ ನಿಸ್ವಾರ್ಥ, ತ್ಯಾಗ, ಕರುಣೆ  ಇದನ್ನು ಜೀವನದ ಕೇಂದ್ರವಾಗಿಸಬೇಕು. ಪ್ರೇಮ ಎಂದರೆ ಮಾನವಾತೀತ, ದಿವ್ಯ ಅನುಭವ – ಅದನ್ನು ಭಕ್ತಿಯಿಂದ, ಸೇವೆಯಿಂದ ಅನುಭವಿಸಬೇಕು.

ಹೀಗಾಗಿ, ಜೀವನದಲ್ಲಿ ಬಯಕೆಯಿಂದ ಪ್ರೀತಿಯತ್ತ, ಪ್ರೀತಿಯಿಂದ ಪ್ರೇಮದತ್ತ ನಾವು ಸಾಗಿದಾಗ ಮಾತ್ರ ಜೀವನದ ಸಾರ್ಥಕತೆ ದೊರೆಯುತ್ತದೆ. ಕೃತಕ ಆಕರ್ಷಣೆಗಳನ್ನು ಬಿಟ್ಟು, ನಿಸ್ವಾರ್ಥ ಪ್ರೀತಿ ಮತ್ತು ದಿವ್ಯ ಪ್ರೇಮವನ್ನು ಬೆಳೆಸಿದರೆ ಮಾತ್ರ ಮಾನವನು ಸಂಪೂರ್ಣನಾಗುತ್ತಾನೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

This opinion article explains the philosophical progression of human emotions from desire and attraction to selfless love and divine prem, drawing insights from Bhagavad Gita and Upanishadic wisdom, emphasizing inner balance and spiritual growth.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

₹5 ಕೂಲಿಯಿಂದ ₹15 ಕೋಟಿ ಕೃಷಿ ಉದ್ಯಮದವರೆಗೆ…! ಈಗ ಆಕ್ಸ್‌ಫರ್ಡ್‌ AI ಸಮ್ಮೇಳನದಲ್ಲಿ ಭಾರತೀಯ ರೈತನ ಭಾಷಣ..!

₹5 ಕೂಲಿಯಿಂದ ಆರಂಭಿಸಿದ ರೈತ ಈಗ ಆಕ್ಸ್‌ಫರ್ಡ್‌ AI ಸಮ್ಮೇಳನದ ವೇದಿಕೆಗೆ. ಪೌಲ್ಟ್ರಿ…

2 hours ago

ಆಲಿಕಲ್ಲು ಮಳೆಯಿಂದ ಬೆಳೆ ರಕ್ಷಣೆ | ರೈತರಿಗೆ ‘ಆಂಟಿ-ಹೈಲ್ ನೆಟ್’ ಹೊಸ ತಂತ್ರಜ್ಞಾನ

ಆಲಿಕಲ್ಲು ಮಳೆಯಂತಹ ತೀವ್ರ ಹವಾಮಾನದಿಂದ ಬೆಳೆ ರಕ್ಷಿಸಲು ಆಂಟಿ-ಹೈಲ್ ನೆಟ್‌ ಪ್ರಮುಖ ತಂತ್ರಜ್ಞಾನವಾಗಿ…

2 hours ago

ಮಾರ್ಚ್‌ನಲ್ಲಿ ಹವಾಮಾನ ತಿರುವು | 25 ರಾಜ್ಯಗಳಿಗೆ ಮಳೆ-ಗುಡುಗು ಎಚ್ಚರಿಕೆ, ಗಾಳಿಯೂ ಸಾಧ್ಯತೆ..!

ದೇಶಾದ್ಯಂತ ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬರುತ್ತಿದ್ದು, ಅನೇಕ ರಾಜ್ಯಗಳಲ್ಲಿ ಮಳೆ, ಗುಡುಗು ಹಾಗೂ…

2 hours ago

ಹವಾಮಾನ ವರದಿ | 20-03-2026 | ಕರಾವಳಿ–ಮಲೆನಾಡಿಗೆ ಮಳೆ ಸೂಚನೆ..! | ರಾಜ್ಯದಲ್ಲಿ ಯಾವ ದಿನದಿಂದ ಮಳೆ ಚುರುಕು..?

ರಾಜ್ಯದಲ್ಲಿ ಸಧ್ಯಕ್ಕೆ ಮಳೆ ಕಡಿಮೆಯಾಗಿದ್ದು ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದೆ. ಇಂದು…

10 hours ago

ಅಡಿಕೆ ಮಾರುಕಟ್ಟೆ | ಗುಣಮಟ್ಟದ ಅಡಿಕೆಗೆ ಬೇಡಿಕೆ….!

ಉತ್ತಮ ಗುಣಮಟ್ಟದ ಅಡಿಕೆಗಳಿಗೆ ₹530 ದರ ಸ್ಥಿರವಾಗಿದ್ದು ಹೊಸ ಅಡಿಕೆಗೆ ಸ್ಪಷ್ಟ ಬೇಡಿಕೆ…

12 hours ago

ಕಾಳುಮೆಣಸು ಕೃಷಿಯಲ್ಲಿ ಟೆಕ್ ಕ್ರಾಂತಿ | ಟಿಶ್ಯೂ ಕಲ್ಚರ್‌ ವಿಧಾನದಿಂದ ಇಳುವರಿ ಹೆಚ್ಚಳ – ಕೃಷಿ ಸಚಿವರ ಭೇಟಿ

ಹೊಸ ತಂತ್ರಜ್ಞಾನಗಳಿಂದ ಕಾಳುಮೆಣಸು ಕೃಷಿಯಲ್ಲಿ ಇಳುವರಿ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಕಂಡುಬಂದಿದ್ದು,…

15 hours ago