Advertisement
ಸುದ್ದಿಗಳು

ನಗರದ ಉದ್ಯೋಗ ತ್ಯಜಿಸಿ ಹಳ್ಳಿಯಲ್ಲಿ ಉದ್ಯಮ | ಎತ್ತಿನ ಗಾಣದ ಎಣ್ಣೆಯಿಂದ ಯಶಸ್ಸು

Share

ಇಂದು ಬಹುತೇಕ ಯುವಕರು ನಗರಗಳತ್ತ ಮುಖಮಾಡುತ್ತಿರುವ ಕಾಲಘಟ್ಟದಲ್ಲಿ, ಕೈತುಂಬಾ ಸಂಬಳ ನೀಡುತ್ತಿದ್ದ ಉದ್ಯೋಗವನ್ನು ತ್ಯಜಿಸಿ ಹಳ್ಳಿಗೆ ಮರಳಿ, ಪರಂಪರೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಯಶಸ್ವಿ ಉದ್ಯಮ ಕಟ್ಟಿದ ಕಥೆ ಅಪರೂಪ. ಅಂತಹ ಅಪರೂಪದ ಯುವಕರು ಮೈಸೂರು ಜಿಲ್ಲೆಯ ನವೀನ್, ಮಹೇಶ್, ಯೋಗೇಶ್ ಮತ್ತು ಅನಿಲ್.

ನಗರ ಜೀವನದ ಭದ್ರ ಉದ್ಯೋಗವನ್ನು ಬಿಟ್ಟು, ತಮ್ಮ ಊರಿನಲ್ಲೇ ದೊರಕುವ ಸಾವಯವ ಕಚ್ಚಾ ಪದಾರ್ಥಗಳನ್ನು ಬಳಸಿ, ಎತ್ತಿನ ಗಾಣದ ಮೂಲಕ ಎಣ್ಣೆ ತೆಗೆಯುವ ‘ದೇಸಿರಿ ನ್ಯಾಚುರಲ್’ ಎಂಬ ಉದ್ಯಮವನ್ನು ಈ ಯುವ ತಂಡ 2017ರಲ್ಲಿ ಆರಂಭಿಸಿತು. ಆರಂಭದಲ್ಲಿ ಇದು ಒಂದು ಸಣ್ಣ ಪ್ರಯತ್ನವಾಗಿದ್ದರೂ, ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ.

ಎಲೆಕ್ಟ್ರಿಕ್ ಯಂತ್ರಗಳ ಜಮಾನೆಯಲ್ಲಿ ಮರೆಯಾದ ಎತ್ತಿನ ಗಾಣ ಪದ್ಧತಿಯನ್ನು ಪುನರುಜ್ಜೀವನಗೊಳಿಸುವುದು ಇವರ ಮುಖ್ಯ ಗುರಿಯಾಗಿತ್ತು. ರಾಸಾಯನಿಕರಹಿತ, ಶುದ್ಧ ಹಾಗೂ ಪೌಷ್ಟಿಕ ಎಣ್ಣೆ ತಯಾರಿಸಬೇಕು ಎಂಬ ಸಂಕಲ್ಪದಿಂದ ಈ ಉದ್ಯಮಕ್ಕೆ ಕೈ ಹಾಕಿದರು. ಆರಂಭದಲ್ಲಿ ಕೆಲವೇ ಎತ್ತಿನ ಗಾಣಗಳಿಂದ ಕಾರ್ಯಾರಂಭ ಮಾಡಿದರೂ, ಗುಣಮಟ್ಟದ ಕಾರಣದಿಂದ ಗ್ರಾಹಕರ ವಿಶ್ವಾಸ ಹೆಚ್ಚುತ್ತಾ ಹೋಯಿತು.

ಇಂದು ದೇಸಿರಿ ನ್ಯಾಚುರಲ್ ಸಂಸ್ಥೆಯಲ್ಲಿ 16ರಿಂದ 17 ಎತ್ತಿನ ಗಾಣಗಳ ಮೂಲಕ ಎಣ್ಣೆ ಉತ್ಪಾದನೆ ನಡೆಯುತ್ತಿದೆ. ಎಳ್ಳು, ಕಡಲೆ, ಸಾಸಿವೆ, ತೆಂಗಿನಕಾಯಿ ಸೇರಿದಂತೆ ಸುಮಾರು 10 ವಿಧದ ಎತ್ತಿನ ಗಾಣದ ಎಣ್ಣೆಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ತಿಂಗಳಿಗೆ ಸರಾಸರಿ 8,000 ರಿಂದ 10,000 ಲೀಟರ್‌ಗಳಷ್ಟು ಎಣ್ಣೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ.

ಗುಣಮಟ್ಟವೇ ಇವರ ಬ್ರಾಂಡ್‌ ಆಗಿದೆ. ಇದರ ಪರಿಣಾಮವಾಗಿ ದೇಸಿರಿ ನ್ಯಾಚುರಲ್ ಇಂದು ದೇಶಾದ್ಯಂತ ಸುಮಾರು 20,000ಕ್ಕೂ ಹೆಚ್ಚು ನಿಷ್ಠಾವಂತ ಗ್ರಾಹಕರನ್ನು ಹೊಂದಿದೆ. ಕೇವಲ ಕರ್ನಾಟಕದಲ್ಲೇ ಅಲ್ಲದೆ, ಭಾರತದ ಎರಡು ರಾಜ್ಯಗಳಿಗೆ ಹಾಗೂ ಎಂಟು ವಿಭಿನ್ನ ದೇಶಗಳಿಗೆ ನೇರವಾಗಿ ಎತ್ತಿನ ಗಾಣದ ಎಣ್ಣೆಗಳನ್ನು ರಫ್ತು ಮಾಡಲಾಗುತ್ತಿದೆ. ಹಳ್ಳಿ ಮೂಲದ ಉದ್ಯಮವೊಂದು ಜಾಗತಿಕ ಮಾರುಕಟ್ಟೆ ತಲುಪಿರುವುದು ವಿಶೇಷ ಸಾಧನೆ.

ಈ ಉದ್ಯಮದ ಮೂಲಕ ಇಂದು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಾಗಿದೆ. ರೈತರಿಂದ ನೇರವಾಗಿ ಕಚ್ಚಾ ಪದಾರ್ಥಗಳನ್ನು ಖರೀದಿಸುವ ಮೂಲಕ ಗ್ರಾಮೀಣ ಆರ್ಥಿಕತೆಯಿಗೂ ಬಲ ತುಂಬುತ್ತಿದ್ದಾರೆ.

ಪರಂಪರೆಯ ಜ್ಞಾನ, ಸಾವಯವ ಕೃಷಿ ಮತ್ತು ಯುವ ಉದ್ಯಮಶೀಲತೆ ಒಂದಾದರೆ ಯಾವ ಮಟ್ಟದ ಯಶಸ್ಸು ಸಾಧ್ಯ ಎಂಬುದಕ್ಕೆ ದೇಸಿರಿ ನ್ಯಾಚುರಲ್ ಜೀವಂತ ಉದಾಹರಣೆ. “ಹಳ್ಳಿಯಲ್ಲೇ ಉಳಿದುಕೊಂಡು ಕೂಡ ಗೌರವಯುತ ಜೀವನ ನಡೆಸಬಹುದು” ಎಂಬ ಸಂದೇಶವನ್ನು ಈ ನಾಲ್ವರು ಯುವಕರು ಸಮಾಜಕ್ಕೆ ನೀಡುತ್ತಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

3 hours ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

7 hours ago

ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು

2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…

12 hours ago

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?

ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…

1 day ago

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

1 day ago

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ…

2 days ago