Advertisement
ಕೆಲ ತಿಂಗಳ ಹಿಂದೆ ಗೋಬಿ, ಕಬಾಬ್‌ಗೆ ಬಳಸುವ ಕಲರ್‌ಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಇವೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆ ಕಲರ್ ಬಳಕೆಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಇತ್ತೀಚಿಗೆ ಪಾನಿಪುರಿಯಲ್ಲೂ ಹಾನಿಕಾರಕ ಅಂಶ ಇರೋದನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದರು. ಇದೀಗ ತರಕಾರಿಗಳ ಗುಣಮಟ್ಟ ಪರಿಶೀಲಿಸಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ. ತರಕಾರಿಗಳನ್ನು ಟೆಸ್ಟ್ ಮಾಡುವ ಉದ್ದೇಶದಿಂದ ಬೆಂಗಳೂರಿನ 300ಕ್ಕೂ ಹೆಚ್ಚು ಪ್ರದೇಶಗಳಿಂದ ತರಕಾರಿಗಳನ್ನು ಸಂಗ್ರಹ ಮಾಡಿದ್ದಾರೆ.
Advertisement
ತರಕಾರಿಯಲ್ಲಿರುವ ಹಾನಿಕಾರಕ ಅಂಶಗಳು:
- ತರಕಾರಿ ಗಿಡಗಳಿಗೆ ಔಷಧಿ ಸಿಂಪಡಣೆ
- ಔಷಧಿ ಸಿಂಪಡಣೆ ಮಾಡುವುದರಿಂದ ಸುರಕ್ಷತೆ ಇಲ್ಲ
- ಕಬ್ಬಿಣದ ಅಂಶಗಳು ಪತ್ತೆ
- ಔಷಧಿ ಸಿಂಪಡಣೆ ಮಾಡಿರುವ ತರಕಾರಿ ತಿಂದರೆ ಆರೋಗ್ಯದ ಮೇಲೆ ಪರಿಣಾಮ
- ಸುರಕ್ಷತೆ ಇಲ್ಲದೇ ಇರುವ ಆಹಾರ ಸ್ಲೋಪಾಯಿಸನ್‌ಗೆ ಸಮ
ಒಟ್ಟಾರೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಆಹಾರ ಮತ್ತು ಸುರಕ್ಷತಾ ಇಲಾಖೆ ಕ್ವಾಲಿಟಿ ಚೆಕ್ ಮಾಡುತ್ತಿದ್ದು ಯಾವೆಲ್ಲಾ ಹಾನಿಕಾರಕ ಅಂಶ ಇವೆ ಎಂದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಒಂದು ವೇಳೆ ಹಾನಿಕಾರಕ ಅಂಶಗಳು ಪತ್ತೆಯಾದರೆ ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ.
Advertisement
– ಅಂತರ್ಜಾಲ ಮಾಹಿತಿ
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement