ಜೇನುನೊಣಗಳಿಂದ ನಿಮ್ಮ ಹತ್ತಿರದ ಪರಿಸರ ಮಾಲಿನ್ಯ ಪತ್ತೆ…! | ಜೇನುತುಪ್ಪದ ಮೂಲಕ ಪರಿಸರ ಮಾಲಿನ್ಯದ ಸುಳಿವು..! |

December 10, 2024
11:12 PM
ಪ್ರಾದೇಶಿಕ ಪರಿಸರ ಮಾಲಿನ್ಯದ ಮಾದರಿಗಳನ್ನು ಪತ್ತೆ ಮಾಡಲು ಜೇನುಹುಳ ಹಾಗೂ ಜೇನುತುಪ್ಪ ಉತ್ತಮ ದಾರಿಗಳಾಗಿವೆ. ಈ ಬಗ್ಗೆ ಯುನೈಟೆಡ್  ಸ್ಟೇಟ್ಸ್ ನ  ತುಲೇನ್ ವಿಶ್ವವಿದ್ಯಾನಿಲಯ ಅಧ್ಯಯನ ನಡೆಸಿದೆ.

ಜೇನುಹುಳ ಹಾಗೂ ಜೇನುತುಪ್ಪವು ನಿಮ್ಮ ಹತ್ತಿರದ ಪರಿಸರ ಮಾಲಿನ್ಯದ ಸುಳಿವನ್ನು ನೀಡುತ್ತದೆ ಎಂದು  ಯುನೈಟೆಡ್  ಸ್ಟೇಟ್ಸ್ ನ  ತುಲೇನ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನ ಹೇಳಿದೆ.…..ಮುಂದೆ ಓದಿ….

ಯುನೈಟೆಡ್ ಸ್ಟೇಟ್ಸ್ನಾದ್ಯಂತ 260 ಜೇನುತುಪ್ಪದ ಮಾದರಿಗಳ ಅಧ್ಯಯನದಲ್ಲಿ ವಿಷಕಾರಿ ಲೋಹ ಇರುವುದು ಪತ್ತೆಯಾಗಿದೆ ಹಾಗೂ ಪ್ರಾದೇಶಿಕ ವ್ಯತ್ಯಾಸಗಳಲ್ಲಿ ಈ ವಿಷಕಾರಿ ಅಂಶಗಳಲ್ಲೂ ಬದಲಾವಣೆ ಕಂಡಿದೆ. ಇದು ಪರಿಸರ ಮಾಲಿನ್ಯವನ್ನು ಎತ್ತಿ ತೋರಿಸುವ ಅಂಶವಾಗಿದೆ ಎಂದು ವರದಿ ಹೇಳಿದೆ. ಸಾಮಾನ್ಯವಾಗಿ ಜೇನುತುಪ್ಪದಲ್ಲಿ ಸ್ಥಳೀಯ ಪರಿಸರದ ಅಂಶದ ಪ್ರಭಾವ ಇರುತ್ತದೆ. ಜೇನಿನ ರುಚಿ, ಅದರ  ಸಿಹಿ ಹಾಗೂ ಸುವಾಸನೆಯು ಆಯಾ ಪ್ರದೇಶದ ಹತ್ತಿರದ ಹೂವುಗಳ ಕಾರಣದಿಂದ ನಿರ್ಧಾರವಾಗುತ್ತದೆ. ಆದರೆ, ತುಲೇನ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನವು ಜೇನುತುಪ್ಪವು ಹತ್ತಿರದ ಮಾಲಿನ್ಯದ ಒಂದು ನೋಟವನ್ನು ಕೂಡಾ ನೀಡುತ್ತದೆ ಎಂದು ಕಂಡುಹಿಡಿದಿದೆ.

ಪರಿಸರ ಮಾಲಿನ್ಯದ ಬಗ್ಗೆ ನಡೆಸಿರುವ ಅಧ್ಯಯನದಲ್ಲಿ ಆರು ವಿಷಕಾರಿ ಲೋಹಗಳ ಅಂಶಗಳು ಯುನೈಟೆಡ್ ಸ್ಟೇಟ್ಸ್ ನ  48 ರಾಜ್ಯಗಳಿಂದ 260 ಜೇನು ಮಾದರಿಗಳಿಂದ ಬೆಳಕಿಗೆ ಬಂದಿದೆ. ಆರ್ಸೆನಿಕ್, ಸೀಸ, ಕ್ಯಾಡ್ಮಿಯಮ್, ನಿಕಲ್, ಕ್ರೋಮಿಯಂ ಮತ್ತು ಕೋಬಾಲ್ಟ್ ಅಂಶಗಳು ಹೆಚ್ಚಾಗಿ ಕಂಡುಬಂದಿದೆ ಎಂದು ವರದಿ ಹೇಳಿದೆ. ಆದರೆ ಯಾವುದೇ ಜೇನುತುಪ್ಪವು ವಿಷಕಾರಿ ಲೋಹಗಳ ಅಸುರಕ್ಷಿತ ಮಟ್ಟವನ್ನು ತೋರಿಸಲಿಲ್ಲ.

ಸಂಶೋಧಕರು ವಿಷಕಾರಿ ಲೋಹದ ಅಂಶಗಳಲ್ಲಿ ಪ್ರಾದೇಶಿಕ ವ್ಯತ್ಯಾಸಗಳನ್ನು ಕಂಡುಕೊಂಡಿದ್ದಾರೆ. ಪೆಸಿಫಿಕ್ ವಾಯುವ್ಯ  ರಾಜ್ಯಗಳ ಸಮೂಹದಿಂದ ಜೇನುಗಳಲ್ಲಿ ಅತ್ಯಧಿಕ ಆರ್ಸೆನಿಕ್ ಮಟ್ಟಗಳು ಕಂಡುಬಂದಿವೆ. ಲೂಯಿಸಿಯಾನ ಮತ್ತು ಮಿಸ್ಸಿಸ್ಸಿಪ್ಪಿ ಸೇರಿದಂತೆ ಆಗ್ನೇಯದಲ್ಲಿ ಕೋಬಾಲ್ಟ್ ಮಟ್ಟ ಅಧಿಕವಾಗಿತ್ತು. ಹೀಗಾಗಿ ಜೇನುತುಪ್ಪವು ಸ್ಥಳೀಯವಾದ ಪರಿಸರ ಮಾಲಿನ್ಯದ ಪ್ರಭಾವವನ್ನು ಎತ್ತಿ ತೋರಿಸುತ್ತದೆ.

ಜೇನುನೊಣಗಳು ಆಹಾರ ಹುಡುಕುವಾಗ ಗಾಳಿ, ನೀರು ಮತ್ತು ಸಸ್ಯಗಳಿಂದ ಮಾಲಿನ್ಯಕಾರಕಗಳನ್ನೂ ಸಂಗ್ರಹಿಸುತ್ತದೆ. ಈ ಮಾಲಿನ್ಯಕಾರಕಗಳು ಜೇನುತುಪ್ಪದಲ್ಲಿ ಉಳಿದುಕೊಳ್ಳುತ್ತದೆ. ಇದು ಆಯಾ ಪ್ರದೇಶದ ಪರಿಸರ ಮಾಲಿನ್ಯದ ಚಿತ್ರಣವನ್ನು ನಮಗೆ ನೀಡುತ್ತದೆ ಎನ್ನುತ್ತಾರೆ  ತುಲೆನ್‌ ವಿಶ್ವವಿದ್ಯಾಲಯದ ಸಿಲಿಯಾ  ಪರಿಸರ ಆರೋಗ್ಯ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಟೆವೊಡ್ರೊಸ್ ಗೊಡೆಬೊ. ಜೇನುತುಪ್ಪದಲ್ಲಿ ಕಂಡುಬರುವ ಮಾಲಿನ್ಯವನ್ನು ಅವುಗಳ ಮೂಲಗಳೊಂದಿಗೆ ಇನ್ನಷ್ಟು  ಅಧ್ಯಯನದ ಅಗತ್ಯವಿದೆ. ಏಕೆಂದರೆ ಜೇನುನೊಣಗಳ ಮೂಲಕ ಜೇನುತುಪ್ಪದಲ್ಲಿ ಈ ಅಂಶ ಕಂಡುಬರುವುದಕ್ಕಿಂತ ಹೆಚ್ಚಿನ ಲೋಹಗಳನ್ನು ಪರಿಸರವು ಹೊಂದಿರಬಹುದು ಎನ್ನುತ್ತಾರೆ.

Advertisement

ಪ್ರಾದೇಶಿಕ ಮಾಲಿನ್ಯದ ಮಾದರಿಗಳನ್ನು  ಪತ್ತೆ ಮಾಡಲು ಜೇನುಹುಳ ಹಾಗೂ ಜೇನುತುಪ್ಪ ಉತ್ತಮ ಮಾದರಿಗಳಾಗಿವೆ. ಆದರೆ ಪರಿಸರದಲ್ಲಿ ಯಾವ ಮಾಲಿನ್ಯಕಾರಕಗಳು ಇರುತ್ತವೆ ಮತ್ತು ಅವು ಆಯಾ ಪ್ರದೇಶದ ಸಮುದಾಯದ ಜನರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಎಂಬುದರ ಬಗ್ಗೆ ಹೆಚ್ಚು ಮಾಹಿತಿಯನ್ನು ಜೇನುನೊಣಗಳಿಂದ ನಾವು ಇನ್ನೂ ಬಹಳಷ್ಟು ಕಲಿಯಬಹುದು ಎನ್ನುತ್ತದೆ ವರದಿಗಳು.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?
January 11, 2026
2:11 PM
by: ಸಾಯಿಶೇಖರ್ ಕರಿಕಳ
ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror