ಪಡಿತರ ಅಕ್ಕಿ ಒಂದಷ್ಟು ಬಡ ಕುಟುಂಬಗಳ ಹೊಟ್ಟೆ ತುಂಬಿಸೋದು ಹೌದು. ಆದ್ರೆ ಪಡಿತರ ಪಾಲಿಗೆ ಸಿಗುವ ಅಕ್ಕಿಯ ಗುಣಮಟ್ಟದ ಬಗ್ಗೆ ಒಂದಲ್ಲ ಒಂದು ದೂರುಗಳು ಬರುತ್ತಲೇ ಇರುತ್ತವೆ. ಇದೀಗ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡುವ ಅಕ್ಕಿಯಲ್ಲಿ ಯೂರಿಯಾ ಪತ್ತೆಯಾಗಿರುವ ಘಟನೆ ತಾಲ್ಲೂಕಿನ ಅಮೃತೂರಿನ ರೇಣುಕಾ ನ್ಯಾಯಬೆಲೆ ಅಂಗಡಿಯಲ್ಲಿ ಬೆಳಕಿಗೆ ಬಂದಿದೆ.
ಪಡಿತರದಾರರು ಅಕ್ಕಿಯನ್ನು ಮನೆಗೆ ತೆಗೆದುಕೊಂಡು ಹೋಗಿ ನಂತರ ಅನ್ನ ಮಾಡಲು ಅಕ್ಕಿ ತೊಳೆಯಲು ಹೋದಾಗ ಯೂರಿಯಾ ಇರುವುದು ಪತ್ತೆಯಾಗಿದೆ. ಪಡಿತರದಾರರು ತಕ್ಷಣ ಈ ವಿಚಾರವನ್ನು ನ್ಯಾಯ ಬೆಲೆ ಅಂಗಡಿ ಮಾಲೀಕರ ಗಮನಕ್ಕೆ ತಂದಿದ್ದಾರೆ.
ಎಚ್ಚೆತ್ತುಕೊಂಡ ನ್ಯಾಯ ಬೆಲೆ ಅಂಗಡಿ ಮಾಲೀಕರು ಅಕ್ಕಿ ವಿತರಣೆಯನ್ನು ಸ್ಥಗಿತಗೊಸಿ ಕುಣಿಗಲ್ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel