ದೇವಚಳ್ಳ ಗ್ರಾಮದ ಹೊನ್ನೆಮೂಲೆ ಮಾವಿನಗೊಡ್ಲು ರಸ್ತೆಯಲ್ಲಿ ನೂತನ ಕಾಂಕ್ರೀಟೀಕರಣಗೊಂಡ ಕಾಮಗಾರಿಯು ಉದ್ಘಾಟನೆಗೊಂಡಿತು. ಗ್ರಾ ಪಂ ಸದಸ್ಯ ಶೈಲೇಶ್ ಅಂಬೆಕಲ್ಲು ಮತ್ತು ಊರಿನವರ ಉಪಸ್ಥಿತಿಯಲ್ಲಿ ಬಳಕೆಗೆ ಅನುವು ಮಾಡಲಾಯಿತು.
Advertisement
ಸ್ಥಳೀಯರಾದ ಹೊನ್ನಪ್ಪ ಗೌಡ ಹೊನ್ನೆಮೂಲೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕೆ ಚಾಲನೆ ನೀಡಿದರು, ಶೇಷಮ್ಮ ಹೊನ್ನೆಮೂಲೆ ರಿಬ್ಬನ್ ತುಂಡರಿಸಿದರು. ಲಿಂಗಪ್ಪ ಗೌಡ ಮಾವಿನಗೊಡ್ಲು ತೆಂಗಿನಕಾಯಿ ಒಡೆಯವ ಮೂಲಕ ರಸ್ತೆಯನ್ನು ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಡಲಾಯಿತು.
Advertisement
ಗ್ರಾ ಪಂ ಸದಸ್ಯ ಶೈಲೇಶ್ ಅಂಬೆಕಲ್ಲು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೋಹಿತ್ ಮಾವಿನಗೊಡ್ಲು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ನಾರಾಯಣ ಗೌಡ ಮಾವಿನಗೊಡ್ಲು, ಬಾಲಕೃಷ್ಣ ಹೊನ್ನೆಮೂಲೆ, ಗಂಗಾಧರ ಮಾವಿನಗೊಡ್ಲು, ರಾಧಾಕೃಷ್ಣ ಮಾವಿನಗೊಡ್ಲು, ಉಮೇಶ್ ಹೊನ್ನೆಮೂಲೆ, ಹಾಗೂ ಹೊನ್ನೆಮೂಲೆ ಮಾವಿನಗೊಡ್ಲು ಪರಿಸರದ ರಸ್ತೆಯ ಫಲಾನುಭವಿಗಳೆಲ್ಲರೂ ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement