Advertisement
ವೈರಲ್ ಸುದ್ದಿ

ದೇವಚಳ್ಳ | ಮೂಲಭೂತ ಹಕ್ಕಿಗಾಗಿ ಕಚೇರಿಗೆ ಅಲೆದಾಡಿದ ಯುವಕನಿಗೆ ಸಿಗದ ಸೌಲಭ್ಯ | ಸೀಎಂಗೆ ಮನವಿ ಮಾಡಿರುವ ವಿಡಿಯೋ ವೈರಲ್‌ |

Share
News Flash
| ದೇವಚಳ್ಳ ಗ್ರಾಮದ ಎಲಿಮಲೆಯ ಯುವಕ ಶರತ್ ಕುಮಾರ್‌ ಅವರಿಂದ ಮುಖ್ಯಮಂತ್ರಿಗಳಿಗೆ ಮನವಿ | ವಿಡಿಯೋ ವೈರಲ್‌ | ಮೂಲಭೂತ ಅವಶ್ಯಕತೆಗೆ ಸ್ಥಳೀಯ ಪಂಚಾಯತ್‌ ಅಲೆದಾಡಿಸಿದೆ ಎನ್ನುವುದು  ಯುವಕನ ವಿಷಾದ |

ಸುಳ್ಯದಲ್ಲಿ  ಮತ್ತೊಂದು ವಿಡಿಯೋ ವೈರಲ್‌ ಆಗಿದೆ. ಎರಡು ವಾರಗಳ ಹಿಂದೆ ಸುಳ್ಯ ನಗರದ ಕಸದ ಬಗ್ಗೆ ಚಿತ್ರನಟ, ಸಾಮಾಜಿಕ ಕಾರ್ಯಕರ್ತ ಅನಿರುದ್ಧ ಅವರು ಮಾಡಿರುವ ವಿಡಿಯೋ ವೈರಲ್‌ ಆಗಿತ್ತು. ಇಡೀ ರಾಜ್ಯಾದ್ಯಂತ ಚರ್ಚೆಯೂ ಆಗಿತ್ತು. ಇದೀಗ ದೇವಚಳ್ಳ ಗ್ರಾಮದ ಯುವಕನೊಬ್ಬ ಕಚೇರಿಗೆ ಅಲೆದು ಅಲೆದು ಯಾವುದೇ ಫಲ ಸಿಗದೆ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಡಿರುವ ಮನವಿಯ ವಿಡಿಯೋ ಕೂಡಾ ವೈರಲ್‌ ಆಗಿದೆ. 

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಅಂಬೆಕಲ್ಲು ನಿವಾಸಿ ಶರತ್‌ ಕುಮಾರ್‌ ಅವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಕಳೆದ ಕೆಲವು ಸಮಯದ ಹಿಂದೆ ಮಕ್ಕಳಿಗೆ ಶಿಕ್ಷಣ ಹಾಗೂ ಕೃಷಿಯ ಉದ್ದೇಶದಿಂದ ಊರಿಗೆ ಮರಳಿದ್ದರು. ಎಲಿಮಲೆ ಬಳಿ ನಿವೇಶನ ಖರೀದಿ ಮಾಡಿದ್ದರು. ಹಲವು ಬಾರಿ ಅಲೆದಾಟದ ಬಳಿಕ ನಿವೇಶನ ಕನ್ವರ್ಶನ್‌ ಮಾಡಿಸಿಕೊಂಡಿದ್ದರು. ಅದಾದ ಬಳಿಕ ಅಲ್ಲಿಯೇ ವಾಸ ಇದ್ದು 9/11 ಗೆ ಪಡೆಯಲು ಅಲೆದಾಟ ಮಾಡುತ್ತಲೇ ಇದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್‌ ಗೆ ಹಲವು ಬಾರಿ  ಹೋದರೂ ನಿವೇಶನ 9/11  ಹಾಗೂ ಮನೆ ನಂಬರ್‌ ದೊರೆತಿಲ್ಲ. ಇದರಿಂದಾಗಿ ಮನೆ ಪೂರ್ಣಗೊಳಿಸಲು ಬೇಕಾದ ಬ್ಯಾಂಕ್‌ ಸಾಲ ಮಾಡಲೂ ಸಾಧ್ಯವಾಗಿಲ್ಲ. ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಕೂಡಾ ಸಾಧ್ಯವಾಗಿಲ್ಲ. ಹೀಗಾಗಿ ವ್ಯವಸ್ಥೆಯ ಬಗ್ಗೆ ರೋಸಿ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಅವರ ಗಮನ ಸೆಳೆಯಲು ಮನವಿ ಮಾಡಿದ್ದರು. ಇದೀಗ ಈ ವಿಡಿಯೋ ಸಾಕಷ್ಟು ವೈರಲ್‌ ಆಗಿದೆ. ಹಲವು ಮಂದಿ ಶರತ್‌ ಕುಮಾರ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇಂತಹ ಸಮಸ್ಯೆ ಕೃಷಿ ಹಾಗೂ ಗ್ರಾಮೀಣ ಭಾಗವನ್ನು ನೆಚ್ಚಿ ಬಂದಿರುವ ನನ್ನಂತಹವರಿಗೆ, ಸಮಾಜದಲ್ಲಿನ ಬಡವರಿಗೆ ಬಾರದೇ ಇರಲಿ ಎಂದು  ಮನವಿ ಮಾಡಿದ್ದಾರೆ ಶರತ್‌ ಕುಮಾರ್.‌

ಸುಳ್ಯದಲ್ಲಿ  ಕಳೆದ ವಾರ ಕಸದ ಬಗ್ಗೆಯೂ ಇದೇ ಮಾದರಿಯ ಚರ್ಚೆಯಾಗಿತ್ತು. ಸುಳ್ಯದ ಸುಪ್ರೀತ್‌ ಮೋಂಟಡ್ಕ ಅವರು ಚಿತ್ರನಟ ಅನಿರುದ್ಧ ಅವರ ಗಮನಕ್ಕೆ ಸುಳ್ಯದ ಕಸದ ಬಗ್ಗೆ ಗಮನಕ್ಕೆ ತಂದಿದ್ದರು. ಈ ಬಗ್ಗೆ ಅನಿರುದ್ಧ ಅವರು ಸಾಮಾಜಿಕ ಕಾಳಜಿಯ ಹಿನ್ನೆಲೆಯಲ್ಲಿ ವಿಡಿಯೋ ಮಾಡಿ ಗಮನ ಸೆಳೆದಿದ್ದರು. ಆ ವಿಡಿಯೋ ಕೂಡಾ ವೈರಲ್‌ ಆಗಿತ್ತು.

ಸುಳ್ಯದಲ್ಲಿ ಇಲಾಖೆಗಳಿಂದ ತೊಡಗಿ ಹಲವು ಮೂಲಭೂತ ಸಮಸ್ಯೆಗಳಿಗೆ ಮುಕ್ತಿ ಸಿಗದೇ ಇರುವುದು ಇದೀಗ ಜನರೇ ಅಸಹನೆ ವ್ಯಕ್ತಪಡಿಸುವಂತಾಗಿದೆ. ಸುಳ್ಯದ ಹಲವು ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ  ಆಗಾಗ ಚರ್ಚೆಯಾಗುತ್ತಿದೆ. ಆದರೂ ಪರಿಹಾರ ಮಾತ್ರಾ ಕಾಣುತ್ತಿಲ್ಲ.

ಗ್ರಾಮೀಣ ಭಾಗ, ಕೃಷಿಯ ಕಡೆಗೆ ಆಸಕ್ತರಾಗಿ , ಮಕ್ಕಳ ಶಿಕ್ಷಣದ ಕಡೆಗೂ ಗಮನಹರಿಸಿ ಊರಿಗೆ ಮರಳಿರುವ ಯುವಕನೊಬ್ಬ ಸಂಕಷ್ಟ ಪಡುವಂತಾಗಿದೆ. ಆತ್ಮನಿರ್ಭರ ಹೆಸರಿನಲ್ಲಿ ಯುವಕರು ಹಳ್ಳಿಯಲ್ಲಿ ನೆಲೆಯೂರಲು ಬೇಕಾದ ವ್ಯವಸ್ಥೆ ಮಾಡಿಸಲಾಗುತ್ತದೆ ಎನ್ನುವ ಯಾರೊಬ್ಬರೂ ಶರತ್‌ ಅವರ ಸಮಸ್ಯೆ ನಿವಾರಣೆಗೆ ಮುಂದಾಗದೇ ಇರುವುದು  ದೌರ್ಭಾಗ್ಯ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?

ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…

7 hours ago

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

15 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

16 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

16 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

1 day ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

1 day ago