ಗ್ರಾಮೀಣ ರಸ್ತೆ ಅವ್ಯವಸ್ಥೆ | ರಸ್ತೆ ದುರಸ್ತಿಗೆ ಆಗ್ರಹ | ಗ್ರಾಮಸ್ಥರಿಂದ ಪ್ರತಿಭಟನೆ | ಸುಳ್ಯದಲ್ಲಿ ಇನ್ನೊಂದು ಮತದಾನ ಬಹಿಷ್ಕಾರದ ಎಚ್ಚರಿಕೆ…! |

September 25, 2022
11:11 PM

ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಟಪ್ಪಾಲುಕಟ್ಟೆ ಪೂದೆ ದೇವರಕಾನ ಮುರುಳ್ಯ  ಸಂಪರ್ಕಿಸುವ  ಅನೇಕ  ಸಮಯಗಳಿಂದ  ಹದಗೆಟ್ಟಿದ್ದು ವಾಹನಸಂಚಾರಕ್ಕೆ ತೀರಾ ಸಮಸ್ಯೆಯಾಗುತ್ತಿದೆ. ಹೀಗಾಗಿ ತಕ್ಷಣವೇ ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ರಸ್ತೆ ದುರಸ್ತಿಯಾಗದೇ ಇದ್ದರೆ ಮುಂದಿನ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದರು.

ಸುಳ್ಯ ತಾಲೂಕಿನಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ವಿವಿದಡೆ ಹೋರಾಟಗಳು ನಡೆಯುತ್ತಲೇ ಇದೆ. ಇದೀಗ ಟಪ್ಪಾಲುಕಟ್ಟೆ ಪೂದೆ ದೇವರಕಾನ ಮುರುಳ್ಯ ರಸ್ತೆಯ ಅಭಿವೃದ್ಧಿಯೂ ಸೇರಿಕೊಂಡಿದೆ. ದುರಸ್ಥಿಪಡಿಸಬೇಕೆಂದು ಆಗ್ರಹಿಸಿ  ಗ್ರಾಮಸ್ಥರು  ಪ್ರತಿಭಟನೆ ನಡೆಸಿದರು. ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ.ರಾಮಚಂದ್ರ ಭಟ್ ಮಾತನಾಡಿ ಹಲವು ವರ್ಷಗಳ ಹಿಂದೆ ಡಾಮರೀಕರಣವಾದ ರಸ್ತೆಯಲ್ಲಿ ಜಲ್ಲಿ ಡಾಮರು ಎದ್ದು ಹೋಗಿ ಈಗ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ನಡೆದಾಡಲು ಕೂಡ ಆಗುವುದಿಲ್ಲ.ಕೆಲವು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿಯಾಗಿದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅಸಮಾಧಾನ ತೋಡಿಕೊಂಡರು.

ಪೂದೆ ದೇವಸ್ಥಾನದ ಅಧ್ಯಕ್ಷ ಪದ್ಮನಾಭ ಪೂದೆ ಮಾತನಾಡಿ, ಅವಳಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ಕಾಮಗಾರಿ ಕೂಡ ಭರದಿಂದ ಸಾಗುತ್ತಿದ್ದು ರಸ್ತೆ ಸರಿ ಇಲ್ಲದೆ ದೇವಸ್ಥಾನಕ್ಕೆ ಜಲ್ಲಿಮರಳು ಸೇರಿದಂತೆ ವಸ್ತು ಸಾಗಾಟಕ್ಕೆ ಕಷ್ಟವಾಗಿದೆ ಎಂದರು.

ಗ್ರಾಮಸ್ಥರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಈ ರಸ್ತೆ ಬಾಳಿಲ ಮತ್ತು ಮುರುಳ್ಯ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು ಎರಡು ಪಂಚಾಯತ್ ನವರು ಸೇರಿ ನಮ್ಮ ರಸ್ತೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ನೂರಾರು ನಾಗರಿಕರು ಸೇರಿದ್ದು ಕೂಡಲೇ ರಸ್ತೆ ದುರಸ್ಥಿಪಡಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಾವಯವ ಕೃಷಿ ಇಂದಿನ ಅವಶ್ಯಕತೆ : ‘ಭಾರತದ ಗ್ರೀನ್ ಹೀರೋ’ ಆರ್.ಕೆ. ನಾಯರ್
January 12, 2026
7:17 AM
by: ದ ರೂರಲ್ ಮಿರರ್.ಕಾಂ
ಬ್ರಹ್ಮಾವರ ಸರ್ಕಾರಿ ಡಿಪ್ಲೋಮಾ ಕೃಷಿ ಕಾಲೇಜು ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧಾರ
January 12, 2026
7:14 AM
by: ದ ರೂರಲ್ ಮಿರರ್.ಕಾಂ
ಸೌರ ಪಂಪ್‌ಗಳ ಬಳಕೆಯಿಂದ ರೈತರ ಆದಾಯ ದ್ವಿಗುಣ
January 12, 2026
7:11 AM
by: ದ ರೂರಲ್ ಮಿರರ್.ಕಾಂ
ಬಟಾಟೆಯಂತೆ ಅಡಿಕೆಗೆ ವಿಕಿರಣ ಬಳಕೆ ಸಾಧ್ಯವೇ? ಹೇಗೆ ಬಳಸಬಹುದು?
January 12, 2026
7:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror