ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ದೇವಸ್ಯದಲ್ಲಿ ನಡೆಯಿತು. ಹರಕೆಯ ಈ ಒತ್ತೆಕೋಲದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಶ್ರೀ ದೈವದ ಅಪೂರ್ವ ಸೇವೆಯನ್ನು ವೀಕ್ಷಿಸಿದರು.
#ಒತ್ತೆಕೋಲ #ottekola #ಸುಳ್ಯ #sullia ಸುಳ್ಯ ತಾಲೂಕಿನ ದೇವಸ್ಯದಲ್ಲಿ ನಡೆದ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ pic.twitter.com/SwG7Qf7pzP
Advertisement— theruralmirror (@ruralmirror) April 21, 2022
ಗುತ್ತಿಗಾರಿನ ದೇವಸ್ಯ ಡಾ.ಮಹಾಲಿಂಗೇಶ್ವರ ಭಟ್ ಹಾಗೂ ಡಾ.ರಾಮಕೃಷ್ಣ ಭಟ್ ಇವರ ಕುಟುಂಬದ ಸೇವೆಯ ಪ್ರಯುಕ್ತ ದೇವಸ್ಯದಲ್ಲಿ ನಡೆದ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಬುಧವಾರ ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶದ ಮೂಲಕ ಕಾರ್ಯಕ್ರಮ ಆರಂಭಗೊಂಡು ಶ್ರೀ ದೈವದ ಕುಳ್ಚಾಟ, ದೈವದ ಅಗ್ನಿಪ್ರವೇಶ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀ ದೈವದ ವಿವಿಧ ಅಪೂರ್ವ ನರ್ತನ, ಸೇವೆಯನ್ನು ವೀಕ್ಷಿಸಿದರು.
ಇದೇ ವೇಳೆ ಸ್ಥಳೀಯ ಕಲಾವಿದರಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಿತು.
This slideshow requires JavaScript.