ಜೈವಿಕ ಇಂಧನಗಳು, ವಿದ್ಯುತ್ ವಾಹನಗಳು ಮತ್ತು ನವೀಕರಿಸಬಹುದಾದ ಇಂಧನಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಸಾರಿಗೆ ವಲಯವು ಸುಸ್ಥಿರ ಮೂಲಸೌಕರ್ಯದತ್ತ ಸಾಗುತ್ತಿದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಪಾಂಚಜನ್ಯ ಇನ್ಫ್ರಾ ಸಂಗಮ 2025 ಅನ್ನು ಉದ್ದೇಶಿಸಿ ಅವರು, ಪರಿಸರ ಸಂರಕ್ಷಣೆಯೊಂದಿಗೆ ತ್ವರಿತ ಅಭಿವೃದ್ಧಿಯನ್ನು ಸಮತೋಲನಗೊಳಿಸುವ ಅಗತ್ಯ ಇದೆ ಎಂದು ತಿಳಿಸಿದರು. ಭಾರತೀಯ ಆಟೋಮೊಬೈಲ್ ಉದ್ಯಮದ ಗಾತ್ರವು 22 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಜಪಾನ್ ಅನ್ನು ಹಿಂದಿಕ್ಕಿ ಚೈನಾ ಮತ್ತು ಅಮೆರಿಕ ನಂತರ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ. ಈ ಉದ್ಯಮವು ಸುಮಾರು ನಾಲ್ಕು ಕೋಟಿ ಜನರಿಗೆ ಉದ್ಯೋಗಗಳನ್ನು ಒದಗಿಸಿದೆ ಎಂದರು. ಜೈವಿಕ ಇಂಧನಕ್ಕೆ ಒತ್ತು ನೀಡುವುದರಿಂದ ದೆಹಲಿಯ ಮಾಲಿನ್ಯವನ್ನು ನಿಭಾಯಿಸಲು ಮತ್ತು ರೈತರಿಗೆ ಆದಾಯವನ್ನು ಒದಗಿಸಲು ಸಹಾಯ ಮಾಡುತ್ತದೆ. ಇಂತಹ ಉಪಕ್ರಮಗಳು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ. ಅಲ್ಲದೇ, ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..

