ದಲಾಲ್ ಸ್ಟ್ರೀಟ್‌ನಲ್ಲಿ ದೇವಯಾನಿ ಇಂಟರ್ನ್ಯಾಷನಲ್ (DIL) ಮತ್ತು ಸಫೈರ್ ಫುಡ್ಸ್ (SFIL) ವಿಲೀನಗೊಳ್ಳುವ ಮೂಲಕ ಭಾರತದ ಅತಿದೊಡ್ಡ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ (QSR) ಚೈನ್ ರಚಿಸಲಿದೆ. ಎರಡೂ ಸಂಸ್ಥೆಗಳು ಗುರುವಾರ ತಮ್ಮ ಕಾರ್ಯಾಚರಣೆಗಳನ್ನು ವಿಲೀನಗೊಳಿಸಿ ಭಾರತದ ಅತಿದೊಡ್ಡ ಏಕ ತ್ವರಿತ ಸೇವಾ ರೆಸ್ಟೋರೆಂಟ್ ಸರಪಳಿಯನ್ನು ರಚಿಸುವುದಾಗಿ ಘೋಷಿಸಿವೆ. ಈ ಎರಡೂ ಕಂಪನಿಗಳ ವಿಲೀನವು ಭಾರತದ ಫಾಸ್ಟ್-ಫುಡ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ. ಈ ಒಪ್ಪಂದವು ದೇಶದಲ್ಲಿ ಕೆಎಫ್ ಸಿ ಮ್ತು ಪಿಜ್ಜಾಹಟ್ ಔಟ್ ಲೆಟ್ ಗಳ ಎರಡು ಪ್ರಮುಖ ನಿರ್ಮಾಹರನ್ನು ಒಟ್ಟುಗೂಡಿಸುತ್ತದೆ ಮತ್ತು ಭಾರತದಲ್ಲಿ ಫಾಸ್ಟ್ ಫುಡ್ ಜಾಗವನ್ನು ಮರುರೂಪಿಸುವ ನಿರೀಕ್ಷೆಯಿದೆ.
ದೇವಯಾನಿ ಇಂಟರ್ನ್ಯಾಷನಲ್ ಷೇರುಗಳು ಬೆಳಿಗ್ಗೆ 5.37 ರೂ ಅಥವಾ 3.64% ರಷ್ಟು ಏರಿಕೆಯಾಗಿ 152.80 ರೂಗಳಲ್ಲಿ ವಹಿವಾಟು ನಡೆಸುತ್ತಿದ್ದವು. ಇದಕ್ಕೆ ವ್ಯತಿರಿಕ್ತವಾಗಿ, ಸಫೈರ್ ಫುಡ್ಸ್ ಇಂಡಿಯಾ ಷೇರುಗಳು 253.95 ರೂಗಳಲ್ಲಿ ವಹಿವಾಟು ನಡೆಸುತ್ತಿದ್ದು, ಹೂಡಿಕೆದಾರರು 8.75 ರೂ ಅಥವಾ 3.33% ರಷ್ಟು ಇಳಿಕೆ ಕಂಡಿವೆ.
ಭಾರತದಲ್ಲಿ ಕೆಎಫ್ ಸಿ ಮತ್ತು ಪಿಜ್ಜಾ ಜಹಟ್ ರೆಸ್ಟೋರೆಂಟ್ ಗಳನ್ನು ನಿರ್ವಹಿಸುವ ದೇವಯಾನಿ ಇಂಟರ್ ನ್ಯಾಷನಲ್ ಮತ್ತು ಸಫೈರ್ ಫುಡ್ಸ್, ವಿಲೀನಗೊಂಡು ಒಂದೇ ಪಟ್ಟಿ ಮಾಡಲಾದ ಘಟಕವನ್ನು ರೂಪಿಸುವುದಾಗ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿವೆ. ಈ ವಿಲೀನವು ಏಪ್ರಿಲ್ 1 ರಿಂದ ಜಾರಿಗೆ ಬರಲಿದ್ದು, ನಿಯಂತ್ರಕ ಮತ್ತು ಷೇರುದಾರರ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.
(Source: ET)




