Opinion

ಮುಂಜಾನೆಯ ಹಿತಾನುಭವ ನೀಡುವ ಧನು ಪೂಜೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸ್ನೇಹ ಶಾಲೆಯ ಸೂರ್ಯಾಲಯದ ಮುಕ್ತಪರಿಸರದಲ್ಲಿ ಡಿಸೆಂಬರ್ 15 ರಿಂದ ನಿರಂತರವಾಗಿ ಬೆಳಿಗ್ಗೆ 5.30 ರಿಂದ ಧನು ಪೂಜೆ ನಡೆಯುತ್ತಿದೆ. ಇದು ಪತ್ರಂ, ಪುಷ್ಪಂ, ಫಲಂ ತೋಯಂ ಎಂಬ ನಿಸರ್ಗದ ವಸ್ತುಗಳನ್ನೇ ಆರಾಧನೆಗೆ ಉಪಯೋಗಿಸಿ ಮಾಡುವ ಸರಳ ಪೂಜೆ. ಗ್ರಹಗಳಿಗೆ ಪ್ರದಕ್ಷಿಣೆ, ಸೂರ್ಯನಮಸ್ಕಾರ, ಸರಳ ಯೋಗಾಸನಗಳು, ಸೂರ್ಯಾಷ್ಟಕ, ಅಥರ್ವಶೀರ್ಷ, ರಾಮರಕ್ಷಾ ಹೇಳಿ ಮಂಗಳಾರತಿ ಮಾಡಿದಲ್ಲಿಗೆ ಪೂಜೆ ಸಮಾಪ್ತವಾಗುತ್ತದೆ. ಈ ಆರಾಧನೆಯು ಇದೇ ಜನವರಿ 14 ಮಕರ ಸಂಕ್ರಮಣದ ಆಚರಣೆಯೊಂದಿಗೆ ಮುಕ್ತಾಯವಾಗಲಿದೆ. ಆಸಕ್ತರು ಬೆಳಿಗ್ಗೆ 5.30 ಕ್ಕೇ ಬಂದರೆ 6.15 ರೊಳಗೆ ಹಿಂದಿರುಗಬಹುದು. ಯೋಗಾಸನಗಳನ್ನು ಮಾಡುವವರಿಗೆ ಸೂರ್ಯಾಲಯವು ತೆರೆದಿರುತ್ತದೆ. ಆಸಕ್ತರಿಗೆ ಸ್ವಾಗತವಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ ಯುವಕ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವ ಕಲಾವಿದ ಮಿಥುನ್ ಕುಮಾರ್ ಸೋನ…

1 hour ago

ಮುಂದಿನ 7 ದಿನಗಳಲ್ಲಿ ರಾಜ್ಯ ಹಲವೆಡೆ ಸಾಧಾರಣ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ಮುಂದಿನ 7 ದಿನಗಳವರೆಗೆ ಕರಾವಳಿಯ ದಕ್ಷಿಣ ಕನ್ನಡ,  ಉಡುಪಿ, ಉತ್ತರಕನ್ನಡ, ಉತ್ತರ ಒಳನಾಡಿನ…

1 hour ago

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆನ್ ಲೈನ್ ಮೂಲಕ ಅವಕಾಶ

ಪ್ರಸ್ತುತ 2024-25 ನೇ ಸಾಲಿನಿಂದ ಸ್ಕ್ಯಾನ್ ಪ್ರತಿ, ಮರು ಎಣಿಕೆಗೆ ಮತ್ತು ಮರು…

2 hours ago

2026 ರ ವೇಳೆಗೆ ಭಾರತ ಸಂಪೂರ್ಣ ನಕ್ಸಲ್ ಮುಕ್ತ | ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ

2026 ರ ವೇಳೆಗೆ ಭಾರತವನ್ನು ನಕ್ಸಲ್ ಮುಕ್ತ ಗೊಳಿಸಲಾಗುವುದು ಎಂದು ಕೇಂದ್ರ ಸಚಿವ…

2 hours ago

ಭಕ್ತರಿಗಾಗಿ ತೆರೆದ ಕೇದಾರನಾಥ ದ್ವಾರ | ಮೊದಲ ದಿನ ಸುಮಾರು 10 ಸಾವಿರ ಜನರಿಂದ ದೇವರ ದರ್ಶನ

ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ವೇದ ಮಂತ್ರಗಳ ಪಠಣ…

11 hours ago