ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಧನ್ವಂತರಿ ಜಯಂತಿಯ ಪ್ರಯುಕ್ತ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಧನ್ವಂತರಿ ಜಯಂತಿ ಆಚರಿಸಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪುತ್ತೂರು ಜಿಲ್ಲೆಯ ಆರೋಗ್ಯ ಭಾರತೀ ವತಿಯಿಂದ ಧನ್ವಂತರಿ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಶೈಲೇಶ್ ಚಿಲ್ತಡ್ಕ ಉಪನ್ಯಾಸ ನೀಡಿದರು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ ಕೆ ಬೆಳ್ಯಪ್ಪ ಗೌಡ ಉಪಸ್ಥಿತರಿದ್ದರು. ಆರೋಗ್ಯ ಭಾರತೀ ಸಂಘಟನೆಯ ಗಣೇಶ್ ಮೌವ್ವಾರು ಕಾರ್ಯಕ್ರಮ ಸಂಘಟಿಸಿದರು. ಇದೇ ಸಂದರ್ಭ ಮುರಳಿಕೃಷ್ಣ ಭಟ್ ನೇತೃತ್ವದಲ್ಲಿ ಡಾ.ಮಹೇಶ್ ವಳಲಂಬೆ ಧನ್ವಂತರಿ ಪೂಜೆ ನಡೆಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel