ದೇಲಂಪಾಡಿಯಲ್ಲಿ ʼಧರ್ಮಸಿಂಧು’ ಪ್ರತಿಷ್ಠಾನ ಉದ್ಘಾಟನೆ |

September 15, 2021
10:29 PM

ದೇಲಂಪಾಡಿ: ಗಡಿನಾಡ ಗ್ರಾಮೀಣ ಭಾಗದಲ್ಲಿ ‘ಧರ್ಮಸಿಂಧು’ ಪ್ರತಿಷ್ಠಾನ  ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರ ಆಶಿರ್ವಚನದೊಂದಿಗೆ ಶ್ರೀ ರಾಮ ಭಜನಾ ಮಂದಿರ ದೇಲಂಪಾಡಿಯಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವು ಸುಮಂಗಲೆಯರಿಂದ ಗೋಪೂಜೆಯಿಂದ ಪ್ರಾರಂಭವಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಿವರಾಮ ಕಲ್ಲೂರಾಯ ವಹಿಸಿದ್ದರು. ರವಿಕುಮಾರ್ ಬಂದ್ಯಡ್ಕ ಉಪಸ್ಥಿತರಿದ್ದರು. ಈ ಸಂದರ್ಭ 2021ರ ಕೇರಳ ರಾಜ್ಯ ಅಧ್ಯಾಪಕ ಪುರಸ್ಕೃತರಾದ ನಾರಾಯಣ ಮಾಸ್ಟರ್ ದೇಲಂಪಾಡಿ ಇವರನ್ನು ಅಭಿನಂದಿಸಲಾಯಿತು.

ಧರ್ಮಸಿಂಧು ಪ್ರತಿಷ್ಠಾನದ ಅಧ್ಯಕ್ಷರಾಗಿ ಪದ್ಮನಾಭ ರಾವ್ ಮಯ್ಯಾಳ,ಉಪಾಧ್ಯಕ್ಷರಾಗಿ ಗಣೇಶ್ ದೇಲಂಪಾಡಿ, ಕಾರ್ಯದರ್ಶಿ ಅಜಿತ್ ಮೆಣಸಿನಕಾನ, ಜತೆ ಕಾರ್ಯದರ್ಶಿ ವಿಕ್ರಾಂತ್ ಮಯ್ಯಾಳ, ಖಜಾಂಜಿ ಧನಂಜಯ ಬೆಳ್ಳಿಪ್ಪಾಡಿ, ಸಂಚಾಲಕರಾಗಿ ಚಂದ್ರಶೇಖರ ನೂಜಿಬೆಟ್ಟು, ನಿರ್ದೇಶಕರಾಗಿ ವಸಂತ ಅಡ್ಡಂತ್ತಡ್ಕ, ಬಾಲಕೃಷ್ಣ  ಮಯ್ಯಾಳ, ಸಂಪತ್ ಊಜಂಪಾಡಿ, ಕೌಶಿಕ್ ಬೆಳ್ಳಿಪ್ಪಾಡಿ, ಅಭಿಷೇಕ್ ದೇಲಂಪಾಡಿ ಆಯ್ಕೆಯಾಗಿದ್ದಾರೆ.

ವಿಕ್ರಾಂತ್ ಮಯ್ಯಾಳ ಸ್ವಾಗತಿಸಿ,  ಪದ್ಮನಾಭ ಮಯ್ಯಾಳ ಪ್ರಾಸ್ತಾವಿಕ ಮಾತನಾಡಿ ಪ್ರತಿಷ್ಠಾನದ ಮುಂದಿನ ಯೋಜನೆ ಮುಷ್ಠಿ ಬಿಕ್ಷಾಭಿಯಾನ ಲಕ್ಷವೃಕ್ಷ ಅಭಿಯಾನ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ಧನಂಜಯ ಬೆಳ್ಳಿಪ್ಪಾಡಿ ವಂದಿಸಿದರು. ಚಂದ್ರಶೇಖರ ನೂಜಿಬೆಟ್ಟು ನಿರೂಪಿಸಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 20.05.2026 | ಮೇ 26 ಬಳಿಕ ಕರ್ನಾಟಕಕ್ಕೆ ಮುಂಗಾರು ಎಂಟ್ರಿ ಸಾಧ್ಯತೆ| ಕರಾವಳಿಯಲ್ಲಿ ಮಳೆ ಕುಂಠಿತ, ಉತ್ತರ ಭಾರತಕ್ಕೆ ಮಳೆ ಸೂಚನೆ
May 20, 2026
2:50 PM
by: ಸಾಯಿಶೇಖರ್ ಕರಿಕಳ
ಉತ್ತರ ಭಾರತ ಉರಿಯುತ್ತಿದೆ – ಮೇ 25ರವರೆಗೆ ತೀವ್ರ ಬಿಸಿಗಾಳಿ ಎಚ್ಚರಿಕೆ
May 20, 2026
7:18 AM
by: ಮಿರರ್‌ ಡೆಸ್ಕ್
ರಾಸಾಯನಿಕ ಗೊಬ್ಬರ ಕೊರತೆ ಭೀತಿ‌ ; ಸಾವಯವ ಕೃಷಿಯತ್ತ ಗಮನಹರಿಸಲು ರೈತರಿಗೆ ಕೇಂದ್ರ ಸಚಿವರ ಕರೆ
May 20, 2026
7:15 AM
by: ದ ರೂರಲ್ ಮಿರರ್.ಕಾಂ
ಮೋಹಿತ್‌ ನಗರ್‌ ಅಡಿಕೆ ಗಿಡ ಏಕೆ ರೈತರ ಫೇವರಿಟ್‌..? ಹೆಚ್ಚು ಇಳುವರಿ, ವೇಗದ ಬೆಳವಣಿಗೆ ಇದರ ವಿಶೇಷತೆ..!
May 19, 2026
11:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror