ಸುದ್ದಿಗಳು

#ಗಾಂಧಿವಿಚಾರವೇದಿಕೆ | “ವಿಪರೀತವಾದ” ಯಾವತ್ತೂ ಅಪಾಯವೇ ಎಂದಿದ್ದರು ಅರವಿಂದ ಮಹರ್ಷಿಗಳು | ಧೀರೇನ್‌ ಪರಮಲೆ ಉಪನ್ಯಾಸ |

Share

ಯಾವುದೇ ವಿಚಾರಗಳ ವಿಪರೀತವಾದ ಆದರೆ ಅದರಿಂದಲೇ ಹಾನಿಯಾಗುತ್ತದೆ ಎನ್ನುವುದನ್ನು  ಮಹರ್ಷಿ ಅರವಿಂದರು ಹೇಳಿದ್ದರು. ಅದು ಧರ್ಮ, ಜಾತಿ, ಸಾಮಾಜಿಕ ಚಳುವಳಿ ಯಾವುದೇ ಆದರೂ ವಿಪರೀತವಾದರೆ ಒಂದು ದಿನ ಅದರಿಂದಲೇ ಹೊಡೆತ, ಅದರಿಂದಲೇ ನಾಶ ನಿಶ್ಚಿತ ಎನ್ನುವುದನ್ನು  ಮಹರ್ಷಿಗಳು ಹೇಳಿದ್ದರು. ಅದು ಸತ್ಯವೂ ಆಗುತ್ತಿದೆ ಎಂದು  ಲೀಡರ್‌ ಎಕ್ಸಲೆನ್ಸ್‌ ಸೊಲ್ಯುಶನ್‌ನ ಮುಖ್ಯಅಧಿಕಾರಿ, ಧಾರ್ಮಿಕ ಚಿಂತಕ ಧೀರೇನ್‌ ಪರಮಲೆ ಹೇಳಿದರು.

Advertisement

ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ವತಿಯಿಂದ ಪಂಜದ ಜಾಕೆ ಪದ್ಮನಾಭ ಗೌಡ ಅವರ ಮನೆಯ ವಠಾರದಲ್ಲಿ ನಡೆದ “ಮಾಸದ ಸಂವಾದ” ಕಾರ್ಯಕ್ರಮದಲ್ಲಿ “ಶ್ರೀ ಅರವಿಂದ ದರ್ಶನ” ಉಪನ್ಯಾಸ ಕಾರ್ಯಕ್ರಮ ಹಾಗೂ ಸಂವಾದ ಕಾರ್ಯಕ್ರಮದಲ್ಲಿ  ಮಾತನಾಡಿದರು. ಯಾವತ್ತೂ ಗೊತ್ತಿಲ್ಲ ಎನ್ನುವುದೇ ಜ್ಞಾನದ ಬಾಗಿಲು ತೆರೆಯುವುದು, ಗೊತ್ತಿದೆ ಎನ್ನುವುದು ಜ್ಞಾನದ ಬಾಗಿಲು ಹಾಕಿದಂತೆಯೇ. ಯಾವುದೇ ಸಂಗತಿಗಳು ನನಗೆ ಗೊತ್ತಿದೆ ಎಂದರೆ ಅದರಾಚೆಗಿನ ಸಂಗತಿಗಳು ತಿಳಿಯಲು ಸಾಧ್ಯವಾಗುವುದಿಲ್ಲ ಎಂದ ಅವರು ಸೇವೆ ಎನ್ನುವುದರ ಬಗ್ಗೆ ಅರವಿಂದರು ಬಹಳ ಎಚ್ಚರಿಕೆಯನ್ನು ಹೇಳಿದ್ದಾರೆ, ಸೇವೆ ಯಾವತ್ತೂ ಅವಕಾಶವೇ ಹೊರತು ಅಧಿಕಾರವಲ್ಲ ಎನ್ನುವುದು ತಿಳಿಯಬೇಕು.

ಯಾವತ್ತೂ ಒಂದು ಯುಗದ ಅಂತ್ಯದ ಮೊದಲು ಇಡೀ ವ್ಯವಸ್ಥೆ ಕಲುಷಿತವಾಗುತ್ತದೆ, ಸುಳ್ಳುಗಳೇ ವಿಜೃಂಭಿಸುತ್ತದೆ, ಎಲ್ಲೂ ದಿಕ್ಕಿಲ್ಲ ಎಂದೆನಿಸುತ್ತದೆ, ಆ ಕಲುಷಿತವಾದ ವಾತಾವರಣದಲ್ಲಿ ಬೆಳಕೊಂದು ಹರಿಯುತ್ತದೆ, ಅದು ಬದಲಾವಣೆಯಾಗುತ್ತದೆ, ಅಲ್ಲಿ ಪ್ಯೂರಿಟಿ ಲಭ್ಯವಾಗುತ್ತದೆ. ಇದು ಪರಿಸರವೂ ಹೇಳಿದೆ, ಅರವಿಂದರು ಇದನ್ನು  ಅಂದು ದಾಖಲಿಸಿದ್ದರು, ಇಂದು ಆ ಯುಗ ಹತ್ತಿರವಾಗುತ್ತಿದೆ. ಬದಲಾವಣೆ ದಾರಿಗಳು ಯಾವತ್ತೂ ನಿಧಾನವೇ ಆಗಿರುತ್ತದೆ ಆದರೆ ಪರಿಣಾಮಕಾರಿಯಾಗಿರುತ್ತದೆ ಎಂದು ಧೀರೇನ್‌ ಹೇಳಿದರು.

ಜಗದ ಪರಿವರ್ತನೆ ಎಂದರೆ ನನ್ನ ಪರಿವರ್ತನೆ. ನಾನು ಪರಿವರ್ತನೆಯಾದರೆ ಇಡೀ ಜಗವೇ ಬದಲಾಗುತ್ತದೆ. ಅದು ಒಳ್ಳೆಯ ಬದಲಾವಣೆಯಾಗಿದ್ದರೆ ಪರಿಸರವೂ ಒಳ್ಳೆಯದಾಗುತ್ತದೆ. ನಾನೇ ಎನ್ನುವುದು ಸುಳ್ಳಾದರೆ ಇಡೀ ಜಗವೇ ಸುಳ್ಳಾಗುತ್ತದೆ. ಹೀಗಾಗಿ ಜಗತ್ತು ಬದಲಾವಣೆ ಮಾಡುವ ಕನಸಲ್ಲ, ಮೊದಲು ನಾನು ಬದಲಾಗುವ ಕನಸು, ನಾನು ಸತ್ಯವಾಗುವ ಕನಸು ಜಾಗೃತವಾಗಬೇಕು ಎಂದ ಧೀರೇನ್‌ ಪರಮಲೆ, ಬದಲಾವಣೆಯ ಪ್ರಯತ್ನ ನಿರಂತರ, ಯಾವತ್ತೂ ಸಂಧಿಕಾಲದಲ್ಲಿ ಗೊಂದಲ ಇರುವುದು  ಹಿಂದೆಯೂ ಕಂಡುಬಂದಿದೆ. ಆ ಗೊಂದಲಗಳಿಂದ ಒಂದು ಬ್ರೇಕ್‌ ಡೌನ್‌ ಆಗಬೇಕಾಗುತ್ತದೆ ನಂತರವೇ ಹೊಸ ಯುಗ ಪ್ರಾರಂಭ ಇಂತಹ ಅನೇಕ ಸಂಗತಿಗಳನ್ನು  ಅರವಿಂದ ಮಹರ್ಷಿಗಳು ತಾನು ಅನುಭವಿಸಿ ಬರೆದಿದ್ದಾರೆ ಎಂದು  ಹೇಳಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ವಿಧಾನಪರಿಷತ್‌ ಮಾಜಿ ಸದಸ್ಯ , ಗಾಂಧಿ ವಿಚಾರ ವೇದಿಕೆಯ ಮಾತೃಸಮಿತಿ ಉಪಾಧ್ಯಕ್ಷ ವಿನಯಚಂದ್ರ ಕಿಲಂಗೋಡಿ ಮಾತನಾಡಿ, ಅರವಿಂದ ಮಹರ್ಷಿಗಳ ಚಿಂತನೆಗಳು ಸಮಾಜಕ್ಕೆ ಹೊಸದಿಕ್ಕು ನೀಡಿತ್ತು. ಅರವಿಂದರು ಅಂತರ್ಯುಗದ ಬಗ್ಗೆ ಹೇಳಿದ್ದರು. ಸತ್ಯಯುಗದ ಪರಿವರ್ತನೆ, ಸಾಕ್ಷಾತ್ಕಾರದ ಬಗ್ಗೆ ಅರವಿಂದರು ತಿಳಿಸಿದ್ದರು ಎಂದರು.

ವೇದಿಕೆಯಲ್ಲಿ  ಮಾತೃಸಮಿತಿ ಉಪಾಧ್ಯಕ್ಷ ಅಚ್ಚುತ ಮಲ್ಕಜೆ , ರಫೀಕ್‌ ಐವತ್ತೊಕ್ಲು, ಧರ್ಮಪಾಲ ಗೌಡ ಜಾಕೆ ಉಪಸ್ಥಿತರಿದ್ದರು.

ಇದೇ ಸಂದರ್ಭ ಸೇವಾ ಕಾರ್ಯಗಳಿಗಾಗಿ ರಜಿತ್‌ ಭಟ್‌ ಪಂಜ ದಂಪತಿಗಳು ಹಾಗೂ ಯುವತೇಜಸ್ಸು ಟ್ರಸ್ಟ್‌ಗೆ ಕೃತಜ್ಞತೆ ಸಲ್ಲಿಸಲಾಯಿತು. ಗಾಂಧಿ ವಿಚಾರ ವೇದಿಕೆಯ ಪಂಜ ವಲಯ ಅಧ್ಯಕ್ಷರನ್ನಾಗಿ ಭೀಶ್ಮಕ್‌ ಜಾಕೆ ಅವರನ್ನು ಘೋಷಣೆ ಮಾಡಲಾಯಿತು.  ಗಾಂಧಿ ವಿಚಾರ ವೇದಿಕೆಯ ಉದ್ದೇಶ ಹಾಗೂ ಸಂಘಟನೆಯ ಬಗ್ಗೆ ಅರವಿಂದ ಚೊಕ್ಕಾಡಿ ಮಾಹಿತಿ ನೀಡಿದರು.

ಧರ್ಮಪಾಲ ಗೌಡ ಜಾಕೆ ಸ್ವಾಗತಿಸಿ , ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ಪ್ರಸ್ತಾವನೆಗೈದರು. ಗಾಂಧಿ ವಿಚಾರ ವೇದಿಕೆಯ ಮಾತೃಸಮಿತಿ ಉಪಾಧ್ಯಕ್ಷ  ರಫೀಕ್‌ ಐವತ್ತೊಕ್ಲು ವಂದಿಸಿದರು. ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ನಿರೂಪಿಸಿದರು. ಉಪನ್ಯಾಸದ ವಿಡಿಯೋ ಇಲ್ಲಿದೆ…..

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 12-04-2025 | ಅಲ್ಲಲ್ಲಿ ಗುಡುಗಿನೊಂದಿಗೆ ಸಾಮಾನ್ಯ ಮಳೆ ಸಾಧ್ಯತೆ | ಎ.13 ರಿಂದ ಮಳೆಯ ಪ್ರಮಾಣ ಕಡಿಮೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶ ಸೇರಿದಂತೆ ಅಲ್ಲಲ್ಲಿ…

2 hours ago

ಕುರುವಾವ್ ಕರುಪ್ ಆಜ್ಞೆಯಂತೆ ಅಗ್ನಿ ಸೇವೆ ಮಾಡುವ ಮಹಾವಿಷ್ಣುಮೂರ್ತಿ

ತುಳುನಾಡಿನ ವಿವಿದೆಡೆ ವಿಷ್ಣುಮೂರ್ತಿ ದೈವದ ನೇಮ, ಒತ್ತೆಕೋಲ ನಡೆಯುತ್ತದೆ. ಈ ಆಚರಣೆಯ ಹಿಂದಿರುವ…

3 hours ago

ಪಟ್ಟೆ ವಿದ್ಯಾ ಸಂಸ್ಥೆಗಳು ಬಡಗನ್ನೂರು ಇನ್ನು ದ್ವಾರಕಾ ಪ್ರತಿಷ್ಠಾನ ಪುತ್ತೂರಿಗೆ ಸೇರ್ಪಡೆ

ಪಟ್ಟೆ ವಿದ್ಯಾ ಸಮಿತಿ (ರಿ)ಯಿಂದ ನಡೆಸಲ್ಪಡುವ ಪ್ರತಿಭಾ ಪ್ರೌಢ ಶಾಲೆ ಪಟ್ಟೆ ಹಾಗೂ…

4 hours ago

ಮುಳಿಯ – ಹೊಸ ಲೋಗೋ- ಅನಾವರಣ | ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್

ಪುತ್ತೂರು ಮೂಲದ 81+ ವರ್ಷ ಪರಂಪರೆಯ ಮುಳಿಯ ಜ್ಯುವೆಲ್ಸ್ ಇನ್ನು ಮುಂದೆ ಹೊಸ…

4 hours ago

ಹೊಸರುಚಿ | ಗುಜ್ಜೆ ಶೇಂಗಾ ಮಸಾಲಾ ಪಲ್ಯ

ಗುಜ್ಜೆ ಶೇಂಗಾ ಮಸಾಲಾ ಪಲ್ಯಕ್ಕೆ ಬೇಕಾಗುವ ವಸ್ತುಗಳು ಹಾಗೂ ಮಾಡುವ ವಿಧಾನ :…

8 hours ago

4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ವಿಸ್ತರಿಸಲು ಕಾಫಿ ಮಂಡಳಿ ಯೋಜನೆ

ಅಡಿಕೆ ಮರದ ಜೊತೆಗೂ ಕಾಫಿ ಬೆಳೆ ಅನುಕೂಲಕರವಾಗಿದೆ. ಹೀಗಾಗಿ ಅಡಿಕೆ ಬೆಳೆಗಾರರು ಉಪ…

8 hours ago