ಯುಪಿಎಸ್ ಸಿ ನಲ್ಲಿ ಭವಿಷ್ಯದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗಾಗಿ ‘ಧೀ ಅಕಾಡೆಮಿ’ ಆರಂಭ

June 12, 2022
1:21 PM

ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯುಪಿಎಸ್ ಸಿ ನಲ್ಲಿ ಭವ್ಯ ಭವಿಷ್ಯದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗಾಗಿಯೇ ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿ ನೂತನವಾಗಿ ‘ಧೀ ಅಕಾಡೆಮಿ’ಯನ್ನು ತೆರೆಯಲಾಗಿದೆ. ರಾಜ್ಯದ ಯುಪಿಎಸ್ ಸಿ ಅಭ್ಯರ್ಥಿಗಳಿಗೆಲ್ಲರಿಗೂ ಕಡಿಮೆ ವೆಚ್ಚದಲ್ಲಿ ತರಬೇತಿ ಪಡೆಯುವುದಕ್ಕೆಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಇಂತಹದ್ದೊಂದು ಸುವರ್ಣಾವಕಾಶ ಒದಗಿಸಲಾಗುತ್ತಿದೆ.

Advertisement
Advertisement
Advertisement
Advertisement

ದಿಲ್ಲಿಯ ತಜ್ಞರಿಂದ ತರಬೇತಿ: ಭವಿಷ್ಯದ ಯುಪಿಎಸ್ ಸಿ ಆಕಾಂಕ್ಷಿಗಳಿಗೆ ತರಬೇತಿ ನೀಡುವುದಕ್ಕಾಗಿಯೇ ದಿಲ್ಲಿಯಿಂದ ಅನುಭವಿ ಸಂಪನ್ಮೂಲ ವ್ಯಕ್ತಿಗಳ ತಂಡ ಬೆಂಗಳೂರಿಗೆ ಆಗಮಿಸಲಿದೆ. ಜತೆಗೆ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳ ತಂಡವೂ ಅತಿಥಿ ಉಪನ್ಯಾಸಕರಾಗಿ ಬಂದು ಅಭ್ಯರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲಿದ್ದಾರೆ. ಧೀ ಅಕಾಡೆಮಿಗೆ ಈಗಾಗಲೇ ನೋಂದಾವಣಿ ಪ್ರಕ್ರಿಯೆಗಳು ಆರಂಭವಾಗಿದೆ. ಪ್ರತಿ ವಿಷಯಗಳಿಗೂ ಪ್ರತ್ಯೇಕ ಪರಿಣಿತರ ತಂಡದಿಂದ ಕೋಚಿಂಗ್ ದೊರೆಯಲಿದೆ. ಸರಳ, ಸ್ಪಷ್ಟ ಭಾಷೆಯಲ್ಲಿ ಅಭ್ಯರ್ಥಿಗಳಿಗೆ ಪಾಠ ಮಾಡಲಿದ್ದಾರೆ. ಇಂಗ್ಲಿಷ್ ಭಾಷಾ ಕೌಶಲ್ಯ ಹೆಚ್ಚಿಸುವುದು, ವ್ಯಕ್ತಿತ್ವ ವಿಕಸನ, ಪರೀಕ್ಷೆ ತಯಾರಿಗೆ ಬೇಕಾದ ಪೂರಕ ಚಟುವಟಿಕೆ, ಒತ್ತಡ ನಿರ್ವಹಣೆ ಮಾಡುವ ಕ್ಲಾಸ್ ಗಳನ್ನು ಇಲ್ಲಿ ವಿಶೇಷವಾಗಿ ನೀಡಲಾಗುತ್ತದೆ. ಯೋಗ, ಧ್ಯಾನ ತರಬೇತಿಗಳನ್ನು ನೀಡುವ ಮೂಲಕ ಅಭ್ಯರ್ಥಿಗಳ ಮಾನಸಿಕ ಮಟ್ಟವನ್ನು ಗಟ್ಟಿಗೊಳಿಸಲಾಗುತ್ತದೆ ಎಂದು ಸಂಸ್ಥೆ ನಿರ್ದೇಶಕಿ ಕಾವ್ಯಾ ಅನಂತ್ ತಿಳಿಸಿದ್ದಾರೆ.

Advertisement

ಯಾರೆಲ್ಲ ಅರ್ಜಿ ಸಲ್ಲಿಸಬಹುದು? : ಪದವಿ ಪಡೆದವರು, ಅಂತಿಮ ಪದವಿಯಲ್ಲಿ ಅಭ್ಯಾಸ ನಡೆಸುತ್ತಿರುವವರು ಹಾಗೂ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ www.dhiacademy.in ವೆಬ್ ಸೈಟ್ ಅನ್ನು ಸಂಪರ್ಕಿಸಬಹುದಾಗಿದೆ ಅಥವಾ 9844868662 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಆಮದು ಮೇಲೆ ನಿಗಾ ವಹಿಸಲು ಸಚಿವರಿಗೆ ಮನವಿ ಮಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ 
February 6, 2025
11:33 PM
by: ದ ರೂರಲ್ ಮಿರರ್.ಕಾಂ
ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |
February 6, 2025
7:40 AM
by: The Rural Mirror ಸುದ್ದಿಜಾಲ
ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ
February 6, 2025
7:33 AM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ
February 5, 2025
6:45 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror