ಮಧುಮೇಹ ರೋಗವಲ್ಲ….ಅಪಾವಸ್ಥೆಯೂ ಅಲ್ಲ

March 22, 2024
11:01 PM

ಮಧುಮೇಹವನ್ನು (diabetics)ಮೆಟ್ಟಿ ನಿಲ್ಲಬಹುದು. ಆದರೆ ಅದಕ್ಕೆ ಬೇಕಾದ್ದು ತಿಳುವಳಿಕೆ. ಮಧುಮೇಹ ಎಂದರೆ ಏನು ಮತ್ತು ಅದರ ಸ್ವರೂಪ ಏನು ಎಂದು ಗೊತ್ತಿದ್ದರೆ ಮಧುಮೇಹ ರೋಗವೂ(decease) ಅಲ್ಲ; ಅಪಾವಸ್ಥೆಯೂ ಅಲ್ಲ. ಬದಲಾಗಿ ಮಧುಮೇಹ ಎಂಬುದು ಆರೋಗ್ಯದೆಡೆಗೆ ಪ್ರಯಾಣಿಸುವಂತೆ ನಿಸರ್ಗವು ದೇಹದ(body) ಮುಖಾಂತರ ನಮಗೆ ಕೊಡುವ ಪರಮ ದೈವಿಕ ಸಂದೇಶವಾಗಿರುತ್ತದೆ.

Advertisement
Advertisement

ಆ  ಸಂದೇಶವು ನಮಗೆ ಕೊಡುವ ಸೂಚನೆಗಳೆಂದರೆ:

  • ನಿಮ್ಮ ಉಸಿರಾಟದ ಲಯವನ್ನು ಸರಿಪಡಿಸಿಕೊಳ್ಳಿ.  ಹೃದಯವು ದ್ವೇಷ, ದುರಾಸೆ, ಹತಾಶೆ, ಖಿನ್ನತೆ, ಭಯ ಇತ್ಯಾದಿ ಭಾವನೆಗಳಿಂದ ಕೆರಳುತ್ತದೆ; ಆದ್ದರಿಂದ ಹೃದಯವನ್ನು ಅರಳಿಸುವಂತ ಪ್ರೀತಿಯ ಭಾವನೆಗಳನ್ನು ತುಂಬಿಕೊಳ್ಳಿ.
  • ಕಿಡ್ನಿ ನಿಮ್ಮ ಪೌರುಷದ ಭಾವನೆಗಳ ಪ್ರತೀಕ. ನರಸತ್ತವರಾಗಿ ಜೀವಂತ ಹೆಣಗಳಾಗಿ ಬದುಕಬೇಡಿ. ಶೂರರಾಗಿ. ರಣಹೇಡಿಗಳಾಗಬೇಡಿ.
  • ಚೆನ್ನಾಗಿ ನೆಮ್ಮದಿಯ ನಿದ್ದೆ ಮಾಡಿ.
  • ಮಿತಾಹಾರಿಗಳಾಗಿ
  • ಸಾವಯವ ನೈಸರ್ಗಿಕ (ಸಾಧ್ಯವಾದಷ್ಟೂ) ಹಸಿ ಆಹಾರದ ಸೇವನೆ ಮಾಡಿ.
  • ಹಸಿವು ಮತ್ತು ಖಾಲಿ ಹೊಟ್ಟೆ ಎರಡೂ ಬೇರೆ ಬೇರೆ ವಿಷಯಗಳು. ಆದ್ದರಿಂದ ಖಾಲಿ ಹೊಟ್ಟೆಯಲ್ಲಿರುವುದು ಒಳ್ಳೆಯದು.
  • ನಿಮ್ಮ ಮಾನವೀಯ ಸಂಬಂಧಗಳನ್ನು ಸರಿಪಡಿಸಿಕೊಳ್ಳಿ.
  • ಚಟುವಟಿಕೆಯ ಜೀವನ ನಡೆಸಿ; ಆಲಸಿಗಳಾಗಬೇಡಿ.
  • ಪ್ರಕೃತಿಗೆ ದೂರವಾಗಿ ಬದುಕಬೇಡಿ.
  • ದುರಹಂಕಾರಿಗಳಾಗಿ ಮನುಷ್ಯರಿಂದ ದೂರವಾಗಿ ಬದುಕಬೇಡಿ.
  • ಆರೋಗ್ಯವನ್ನು ಹಣದಿಂದ ಕೊಂಡು ಕೊಳ್ಳಬಹುದು ಎಂಬ ಭ್ರಾಂತಿಯನ್ನು ಬಿಡಿ. –
  • ಅಸಹಜ ರಾಸಾಯನಿಕಗಳಿಂದ, ಅಸಹಜ ಜೀವನಶೈಲಿಯಿಂದ ನಿಮ್ಮ ಯಕೃತ್ತನ್ನು ಹಾಳು ಮಾಡಿಕೊಳ್ಳಬೇಡಿ.
  • ನಿಮ್ಮ ದೇಹದ ಜೀವಕೋಶಗಳಿಗೆ ಬೇಕಾದುದನ್ನು ತಿನ್ನಿ; ನಿಮ್ಮ ನಾಲಿಗೆಗೆ ಬೇಕಾದುದನ್ನಲ್ಲ. ಹೀಗೆ ನೂರಾರು ದೈವಿಕ ಸಂದೇಶಗಳ ಒಟ್ಟು ಸ್ವರೂಪವೇ ಮಧುಮೇಹ.
  • ಈ  ಸಂದೇಶಗಳ ವಿರುದ್ಧವಾಗಿ ನಡೆದು ಆರೋಗ್ಯವನ್ನು ಕೊಂಡುಕೊಳ್ಳುತ್ತೇನೆ ಎಂಬ ದುರಹಂಕಾರ ದುರ್ಗತಿಯಲ್ಲಿ ಅಂತ್ಯವಾಗುತ್ತದೆ. ದೈವಿಕ ಸಂದೇಶಗಳಿಗೆ ವಿರುದ್ಧವಾಗಿ ನಡೆಯುವ ವ್ಯಕ್ತಿ ಲಕ್ಷಾಂತರ ಕೋಟಿ ರೂಪಾಯಿ ಔಷಧಗಳ ಗುಡಾರದಲ್ಲಿ ಇದ್ದರೂ, ಸಾವಿರ multi-speciality ಆಸ್ಪತ್ರೆಗಳ ಒಳಗೇ ಖಾಯಂ ಬೆಡ್ ನೋಂದಣಿ ಮಾಡಿಸಿದ್ದರೂ ಆರೋಗ್ಯವನ್ನು ಕೊಂಡುಕೊಳ್ಳಲಾರ ಅಥವಾ ಗಳಿಸಲಾರ.
  • ಪ್ರಕೃತಿಗೆ ನಿಕಟವಾಗಿದ್ದು (ನಿಸರ್ಗ) ಅದರ ನಿಯಮಗಳಿಗೆ ಅನುಗುಣವಾಗಿ ಬದುಕು ಎಂಬುದು ದೈವಿಕ ನಿಯಮ. ಆದರೆ ಅದಕ್ಕೆ ವಿರುದ್ಧವಾಗಿ ಬದುಕುತ್ತೇನೆಂದರೆ ವೈದ್ಯಕೀಯ ವಿಜ್ಞಾನ ಬೆಳೆಯುತ್ತದೆ. ಏಕೆಂದರೆ ಹೊಸ ರೋಗಗಳ ಪಟ್ಟಿ ಬೆಳೆಯುತ್ತದೆ.
  • ಬೇಯಿಸದೆ ತಿನ್ನುವುದು ಪ್ರಕೃತಿಯ ನಿಯಮ. ಹಾಗಾಗಿ ಮನುಷ್ಯನನ್ನು ಹೊರತು ಪಡಿಸಿ ಯಾವ ಪ್ರಾಣಿಯೂ ಆಹಾರವನ್ನು ಬೇಯಿಸಿ ಸೇವಿಸುವುದಿಲ್ಲ ಹಸಿಯಾಗಿಯೇ ಸೇವಿಸುತ್ತವೆ.
  • ನಿಸರ್ಗದಲ್ಲಿ ಇರದ ರಾಸಾಯನಿಕಗಳಾದ ಡಿಡಿಟಿ, ಎಂಡೊಸಲ್ಫಾನ್ ಇತ್ಯಾದಿ ಲಕ್ಷಾಂತರ ಅನೈಸರ್ಗಿಕ ಕೃತಕ ರಾಸಾಯನಿಕಗಳನ್ನು ಆಹಾರವಾಗಿ ಸೇವಿಸುವುದು ದೈವಿಕ ನಿಯಮಕ್ಕೆ ವಿರುದ್ಧ. –
  • ಈ ನಿಯಮಗಳ ಪಾಲನೆಗೆ ವಿರುದ್ಧವಾಗಿ ನಡೆದುಕೊಂಡಾಗ ಬರುವ ದೈವಿಕ ಸಂದೇಶವೇ ಮಧುಮೇಹ. ನೀನು ಸರಿಯಾಗಿ ನಡೆದುಕೋ, ದೇಹವನ್ನು ಮತ್ತು ಮನಸ್ಸನ್ನು ಅತಿಯಾದ ಒತ್ತಡಕ್ಕೆ ಒಳಪಡಿಸಬೇಡ ಎಂಬ ಕಳಕಳಿ ಆ ದೈವಿಕ ಸಂದೇಶದ ಹಿಂದಿರುತ್ತದೆ. –

ಆದ್ದರಿಂದ ಮಧುಮೇಹ ಎಂಬುದು ಒಂದು ದೈವಿಕ ಸಂದೇಶವಾಗಿರುವುದರಿಂದ ಹೆದರದೆ “ಓ ದೇವರೇ, ನಿನ್ನ ಸಂದೇಶವನ್ನು ನಾನು ಪಾಲಿಸುತ್ತೇನೆ. ನನ್ನನ್ನು ಕಾಪಾಡು!” ಎಂಬ ಪ್ರಾರ್ಥನೆಯೊಡನೆ ನೈಸರ್ಗಿಕ ಜೀವನ ಎಂಬ ದೈವಿಕ ಸಂದೇಶದ ಪಾಲನೆಗೆ ತೊಡಗಬೇಕು ನನ್ನ ಪ್ರಕಾರ ಮಧುಮೇಹದಲ್ಲಿ ಐದು ವಿಧ. ಅದರಲ್ಲಿ ಶುಗರ್ ಒಂದು. ವ್ಯಕ್ತಿಯ ದೇಹದಲ್ಲಿ ನಂಜು ಹೆಚ್ಚಾದರೆ ರಕ್ತ ಕಣಗಳು ವಿಷಯುಕ್ತವಾಗಿ ನಾರ್ಮಲ್ ವ್ಯಕ್ತಿಗಿಂತ ರಕ್ತ ಸ್ವಲ್ಪ ದಪ್ಪ ವಾಗಿರುತ್ತದೆ. ಪ್ಯಾಂಕ್ರಿಯಾಸ್ನ ಮೇಲೆ ಇರುವ ರಕ್ತನಾಳದಲ್ಲಿ ಹರಿಯುವ ರಕ್ತ ನಾಳ ಕೆಲಸ ನಿಲ್ಲಿಸಲು ಪ್ರಾರಂಭ ಮಾಡುತ್ತದೆ. ನಿಧಾನವಾಗಿ ಶುಗರ್ ಶುರುವಾಗುತ್ತದೆ. ನಂತರ ಸಕ್ಕರೆ ಬಳಕೆ ಇದನ್ನು ಇನೂ ಹದಗೆಡಿಸುತ್ತದೆ. ಮಾಂಸದ ಅಹಾರ, ತುಪ್ಪ, ಕೊಬ್ಬಿನ ಅಂಶ ಇವುಗಳು ಶುಗರನು ಬೇಗನೆ ಹೆಚ್ಚಿಸುತ್ತದೆ. ಮನಸ್ಸಿನ ಮಾತ್ಸರ್ಯ ಶುಗರ್ಗೆ ಒಂದು ಕಾರಣ .

ಹಿಂದೆಲ್ಲ ಇದಕ್ಕೆ ಅಷ್ಟು ಆಸ್ಪದವೇ ಇರಲಿಲ್ಲ. ಶ್ರಮದ ಜೀವನ ಇರುವುದರಲ್ಲಿ ತೃಪ್ತಿ ಇದೆಲ್ಲ ಶುಗರ್ ಬಾರದಿರಲು ಸುಲಭ ವಿಧಾನ. ಮದ್ದಾಲೆ ಮದ್ದರಸ ಶುದ್ಧಿಕರಣವಾದ ಅಶ್ವಗಂಧ, ಬಾವಂಚಿ, ವೀಳ್ಯದೆಲೆ, ಬೇವು, ಮಾವು, ತ್ರಿಫಲಾ, ಮಂಜಿಷ್ಠಾ, ಕುಟಕೀ, ಅಮೃತ ಸತ್ವ, ಬೇವು, ಚಂದನ, ದೇವದಾರು, ಅರಿಶಿಣ, ಮರದರಿಶಿಣ, ನೆಲನೆಲ್ಲಿ, ಕೆನ್ನಾರಿಗಡ್ಡೆ, ಸೋಮಲತಾ ನೇರಳೆ ಮಧುನಾಶಿನಿ ಬಿಲ್ವ ಕುಟಜ ಗೋಕ್ಷುರ ಏಕನಾಥ ಮುಂತಾದ ಅನೇಕ ಗಿಡ ಮೂಲಿಕೆ ಉಪಯೋಗಿಸಿ ತಯಾರಿಸಿದ ಮೆಡಿಸಿನ್ ಒಳ್ಳೆ ಫಲ ನೀಡುತ್ತದೆ. ಶುಗರ್ ಇದೆ ಎಂದು ತಿಳಿದ ತಕ್ಷಣವೇ ಒಂದು ಟ್ಯಾಬ್ಲೆಟ್ ತೆಗೆದು ಕೊಳ್ಳದೇ ನನ್ನಲ್ಲಿ ಬಂದರೆ ಆರು ತಿಂಗಳು ಮೆಡಿಸಿನ್ ಕೊಟ್ಟು ನಂತರ ನನ್ನ ಮೆಡಿಸಿನ್ ನಿಲ್ಲಿಸಿ. ನಿಮಗೆ ಜೀವನದ ಕೊನೆಯವರೆಗೂ ಮಾತ್ರೆ ಇಲ್ಲದೇ ಇರುವಂತೆಯೇ ವ್ಯವಸ್ಥೆ ಆಗುತ್ತದೆ. ಆದರೆ ಒಂದು ತಿಂಗಳು ಬೇರೆ ಯಾವುದೇ ಮೆಡಿಸಿನ್ ಸೇವನೆ ನಂತರ ನನ್ನಲ್ಲಿ ಬಂದರೆ ಗುಣಪಡಿಸಲು ತುಂಬಾನೇ ಸಮಯ ಬೇಕಾಗುತ್ತದೆ.

ಇದರಲ್ಲಿ ಕೆಲವು ಸುಲಭ ವಿಧಾನ: ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶುಗರ್ ಹತೋಟಿಗೆ ಬರುತ್ತದೆ. ನಂತರ ಮಾತ್ರೆ ನಿಲ್ಲಿಸಿ ಮೇಲೆ ಹೇಳಿದ ಮೆಡಿಸಿನ್ ಮುಂದುವರಿಸಿ ನಾಲ್ಕು ತಿಂಗಳಲ್ಲಿ ಸ್ವೀಟ್ ತಿಂದರೂ ಶುಗರ್ ಹತೋಟಿಯಲ್ಲಿ ಇಡಬಹುದು. ಕರಿಬೇವು ಒಂದು ಒಳ ಮುಷ್ಠಿ ಒಂದು ಚಮಚ ಕಹಿ ಜೀರಿಗೆ ಪುಡಿ ಮಿಕ್ಸಿ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಮೆಂತ್ಯ ಪುಡಿ ಒಂದು ಚಮಚ ಮೊಸರು ಅರ್ಧ ಕಪ್ ನಲ್ಲಿ ಸೇರಿಸಿ ಸೇವಿಸಿದರೂ ಶುಗರ್ ಹತೋಟಿಗೆ ಬರುತ್ತದೆ.

Advertisement
ಬರಹ :
 ಡಾ ಪ್ರದೀಪ್
,  ಮಾನ್ವಿ ಆಯುರ್ವೇದಿಕ್ ಆಸ್ಪತ್ರೆ ಬಾದಾಮಿ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ರಾಜ್ಯಸರ್ಕಾರ
May 21, 2025
10:38 PM
by: The Rural Mirror ಸುದ್ದಿಜಾಲ
ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಲು ಕ್ರಮ
May 21, 2025
10:31 PM
by: The Rural Mirror ಸುದ್ದಿಜಾಲ
ಮಳೆ ಹಿನ್ನೆಲೆ | ಅಪಾಯಕಾರಿ ಸ್ಥಳಗಳಲ್ಲಿ ನಿರಂತರ ನಿಗಾವಹಿಸಲು ದ ಕ ಜಿಲ್ಲಾಧಿಕಾರಿ ಸೂಚನೆ
May 21, 2025
10:25 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ ರಾಜ್ಯದಲ್ಲಿ ಮುಂದುವರಿದ ಮಳೆ | ಹಲವೆಡೆ ಪ್ರವಾಹ ಭೀತಿ
May 21, 2025
10:10 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group