ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಯಾವ ಪಕ್ಷಕ್ಕೂ ಬಹುಮತ ನೀಡಿಲ್ಲ.
ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಿಶ್ರಾಂತಿಗಾಗಿ ಸಿಂಗಾಪೂರಕ್ಕೆ ತೆರಳಿದ್ದಾರೆ. ಇದೀಗ ಅಲ್ಲಿಂದಲೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಕುಮಾರಸ್ವಾಮಿ ಮೈತಿ ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಂಗಾಪೂರರಲ್ಲಿದ್ರೂ ಗೆಲ್ಲುವ ಜೆಡಿಎಸ್ ಅಭ್ಯರ್ಥಿಗಳ ಜೊತೆಯಲ್ಲಿ ಕುಮಾರಸ್ವಾಮಿ ನಿರಂತರವಾಗಿ ಸಂಪರ್ಕದಲ್ಲಿದ್ದು, ರಾಜಕೀಯ ವಿದ್ಯಮಾನದ ಪ್ರತಿ ಮಾಹಿತಿಯನ್ನು ಆಪ್ತರಿಂದ ಪಡೆದುಕೊಳ್ಳುತ್ತಿದ್ದಾರಂತೆ.
ಮೈತ್ರಿ ಸಂದೇಶದ ಕೆಲವು ಷರತ್ತುಗಳ ಪಟ್ಟಿಯನ್ನು ಸಹ ಕುಮಾರಸ್ವಾಮಿ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಷರತ್ತು ಒಪ್ಪೋರ ಜೊತೆಯಲ್ಲಿ ಮಾತ್ರ ಮೈತ್ರಿಗೆ ಸಿದ್ಧ ಎಂದಿದ್ದಾರಂತೆ ಕುಮಾರಸ್ವಾಮಿ.
ಷರತ್ತು 1: 2018ರಲ್ಲಿ ಕಾಂಗ್ರೆಸ್ ಜೊತೆ ಸರ್ಕಾರ ರಚಿಸಿದಾಗ ಸಮನ್ವಯ ಸಮಿತಿ ರಚನೆ ಮಾಡಲಾಗಿತ್ತು. ಈ ಬಾರಿ ಆ ರೀತಿಯ ಸಮಿತಿ ರಚನೆ ಮಾಡಬಾರದು.
5
ಷರತ್ತು 2: ಜೆಡಿಎಸ್ ಭದ್ರಕೋಟೆಗಳಾಗಿರುವ ಹಾಸನ, ಮಂಡ್ಯ ಜಿಲ್ಲೆಗಳಿಂದ ದೂರ ಇರಬೇಕು.
ಷರತ್ತು 3: ಚರ್ಚೆ ಮಾಡದೇ ಯಾವುದೇ ನಿರ್ಧಾರಗಳನ್ನು ಯಾರೂ ಸಹ ತೆಗೆದುಕೊಳ್ಳುವಂತಿಲ್ಲ.
ಈಗಾಗಲೇ ಎರಡೂ ಪಕ್ಷಗಳ ಜೊತೆ ಸರ್ಕಾರ ರಚನೆ ಮಾಡಿ ಸಿಎಂ ಆಗಿ ಆಡಳಿತ ನಡೆಸಿರುವ ಕುಮಾರಸ್ವಾಮಿ ಮುಂದಿನ ನಡೆ ಏನು ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement