ಮೂತ್ರದ ಹರಳಿಗೆ ಪಥ್ಯ : ಮೂತ್ರದ ಹರಳು-ಕಲ್ಲು ಇದ್ದವರಿಗೆ ಆಹಾರ ನಿಯಮಗಳು ಏನು..?

February 17, 2024
6:29 PM

ಮೂತ್ರಪಿಂಡದ ಕಲ್ಲುಗಳ( kidney stones) ಸಂದರ್ಭದಲ್ಲಿ ಸರಿಯಾದ ಆಹಾರವು(Food) ತುಂಬಾ ಮುಖ್ಯವಾಗಿದೆ. ತಪ್ಪಾದ ಆಹಾರ ಸೇವನೆಯಿಂದ ಮೂತ್ರದಲ್ಲಿ ಯೂರಿಕ್ ಆಸಿಡ್(Uric Acid), ಕ್ಯಾಲ್ಸಿಯಂನಂತಹ(Calcium) ಕ್ಷಾರೀಯ ಅಂಶಗಳ ಪ್ರಮಾಣ ಹೆಚ್ಚಾಗುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗುತ್ತವೆ. ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಏನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂದು ಇಂದು ತಿಳಿಯೋಣ…

ಮೂತ್ರಪಿಂಡದ ಕಲ್ಲುಗಳಿದ್ದಲ್ಲಿ ಏನು ತಿನ್ನಬೇಕು-(ಪಥ್ಯ): ನೀವು ಮೂತ್ರಪಿಂಡದ ಕಾಯಿಲೆ ಹೊಂದಿದ್ದರೆ, ದಿನವಿಡೀ ಸಾಕಷ್ಟು ನೀರು (ಅಗತ್ಯಕ್ಕೆ ಅನುಗುಣವಾಗಿ) ಕುಡಿಯಿರಿ, ಇದು ಮೂತ್ರನಾಳದ ಮೂಲಕ ದೇಹದಿಂದ ಹಾನಿಕಾರಕ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಎಳೆನೀರು, ಕಬ್ಬಿನ ರಸ, ಹುರುಳಿ ಕಷಾಯ, ಸೂಪ್ ಉಪಯುಕ್ತವಾಗಿದೆ. ನೀವು ಮೂತ್ರಪಿಂಡದ ಕಲ್ಲುಗಳನ್ನು ಹೊಂದಿದ್ದರೆ, ನಿಮ್ಮ ಆಹಾರದಲ್ಲಿ ಹೆಚ್ಚಿನ ಫೈಬರ್ ಇರಬೇಕು. ಇದಕ್ಕಾಗಿ ಹಸಿರು ಸೊಪ್ಪು, ವಿವಿಧ ಹಣ್ಣುಗಳನ್ನು ಸೇರಿಸಬೇಕು. ಆಹಾರದಲ್ಲಿ ಹಸಿರು ತರಕಾರಿಗಳು, ಹಸಿರು ಬೀನ್ಸ್, ಎಲೆಕೋಸು, ಮೂಲಂಗಿ, ಗಜ್ಜರಿ, ಈರುಳ್ಳಿ, ಒಳಗೊಂಡಿರಬೇಕು. ಬಾಳೆಹಣ್ಣು, ದಾಳಿಂಬೆ, ಕಲ್ಲಂಗಡಿ, ದ್ರಾಕ್ಷಿ, ಕಿತ್ತಳೆ, ನೇರಳೆ ಮುಂತಾದ ಹಣ್ಣುಗಳನ್ನು ಸೇವಿಸಿ. ಬಾಳೆಹಣ್ಣುಗಳು, ಕರಬೂಜುಗಳು ಮತ್ತು ದ್ರಾಕ್ಷಿಗಳು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿವೆ, ಆದ್ದರಿಂದ ಅವು ಮೂತ್ರಪಿಂಡದ ಕಲ್ಲುಗಳಿಗೆ ವಿಶೇಷವಾಗಿ ಉಪಯುಕ್ತವಾಗಿವೆ. ದಾಳಿಂಬೆಯ ಉಪಯುಕ್ತ ಉತ್ಕರ್ಷಣ ನಿರೋಧಕಗಳು ದೇಹ ಮತ್ತು ಮೂತ್ರಪಿಂಡಗಳಿಂದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಮೂತ್ರಪಿಂಡದ ಹರಳು ಇರುವವರು ಏನು ತಿನ್ನಬಾರದು? (ಅಪಥ್ಯ): ಅಧಿಕ ಪ್ರೋಟೀನ್ ಯುಕ್ತ ಆಹಾರಗಳು, ಉಪ್ಪಿನ ಆಹಾರಗಳು ಮತ್ತು ಕ್ಯಾಲ್ಸಿಯಂ ಆಕ್ಸಲೇಟ್ ಆಹಾರಗಳು ಮೂತ್ರಪಿಂಡದ ಕಲ್ಲುಗಳಿಗೆ ವೃದ್ಧಿಸಲು ಸಹಾಯಕವಾಗುತ್ತವೆ. ಇದು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೆಚ್ಚಿಸಬಹುದು. ಮೂತ್ರಪಿಂಡದ ಕಲ್ಲುಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಹೊಂದಿರುವ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಆಲೂಗಡ್ಡೆ, ಬೀಟ್ಗೆಡ್ಡೆಗಳು, ಚಾಕೊಲೇಟ್, ಒಣಗಿದ ಹಣ್ಣುಗಳು, ಪಾಲಕ, ಸ್ಟ್ರಾಬೆರಿಗಳು, ಚಹಾ ಮತ್ತು ಗೋಧಿ ಹೊಟ್ಟುಗಳಲ್ಲಿ ಆಕ್ಸಲೇಟ್ ಅಧಿಕವಾಗಿರುತ್ತದೆ. ಅಲ್ಲದೆ, ಮೂತ್ರಪಿಂಡದ ಕಲ್ಲುಗಳ ಸಂದರ್ಭದಲ್ಲಿ, ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಿ. ಅದರಲ್ಲೂ ಉಪ್ಪಿನ ಪದಾರ್ಥಗಳಾದ ಹಪ್ಪಳ, ಉಪ್ಪಿನಕಾಯಿ, ವೇಫರ್‌ಗಳನ್ನು ತಿನ್ನುವುದನ್ನು ತಪ್ಪಿಸಿ. ಮೂತ್ರದ ಉಪ್ಪು ಹೆಚ್ಚಿದ್ದರೆ ಕ್ಯಾಲ್ಸಿಯಂನ ಕಲ್ಲುಗಳು ಬರುವ ಸಾಧ್ಯತೆ ಹೆಚ್ಚು. ಟೊಮೆಟೊ ಬೀಜಗಳು, ಬದನೆಕಾಯಿ, ಬೆಂಡೆಕಾಯಿ, ಬಟಾಣಿ, ಹೂಕೋಸು, ಆಲೂಗಡ್ಡೆ, ಎಲೆಕೋಸು ತಿನ್ನುವುದನ್ನು ತಪ್ಪಿಸಿ. ಹಾಗೆಯೇ ತಂಪು ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಿ. ಅಡಿಗೆ ಸೋಡಾ ಹೊಂದಿರುವ ಆಹಾರಗಳನ್ನು ಸಹ ತ್ಯಜಿಸಬೇಕು.

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Proper diet is very important in case of kidney stones. Kidney stones are caused due to increase of alkaline elements like uric acid, calcium in urine due to wrong food intake. Today let’s know what to eat and what not to eat if you have kidney stones…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ
March 5, 2026
11:44 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror