ಇತ್ತೀಚಿಗೆ ಆರೋಗ್ಯದಲ್ಲಿ ಬರುವ ತೊಂದರೆಗಳಲ್ಲಿ ಮೊಣಕಾಲು ನೋವು, ಬೆನ್ನು ನೋವು ಕಾಣಿಸಿಕೊಳ್ಳುತ್ತಿತ್ತು. ಇಂದು ಎಲ್ಲ ವಯಸ್ಸಿನವರಲ್ಲೂ, ಕ್ರೀಡಾಪಟುಗಳಲ್ಲೂ ಮೂಳೆಗಳ ಸಮಸ್ಯೆ ಕಾಣುತ್ತಿದೆ. ಮಹಿಳೆಯರಲ್ಲಿ ಹೆರಿಗೆ ನಂತರ ಇತಂಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಒಂದು ನಮಗುವಿನ ಜನ್ಮ ನೀಡಿದ ನಂತರ ಅವರಲ್ಲಿ ಕ್ಯಾಲ್ಸಿಯಂ ಕೊರತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ನೋಡಿದರೆ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಪ್ರೋಟೀನ್ ಕೊರತೆ.
ಎಲುಬುಗಳಿಗೆ ಬೇಕಾಗಿರುವ ಕ್ಯಾಲ್ಸಿಯಂ ಸಿಗದೇ ಹೋದರೆ ಒಂದಲ್ಲ ಒಂದು ಕೊರತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಂದು ಆಹಾರಗಳು ಮೊಣಕಾಲಿನ ಹಾಗೂ ಬೆನ್ನು ನೋವಿನ ಆರೋಗ್ಯ ಸುಧಾರಿಸಲು ನೆರವಾಗುತ್ತವೆ ಎನ್ನಲಾಗುತ್ತದೆ. ಅವುಗಳೆಂದರೆ:
ಮೀನು: ಬಂಗುಡೆ, ಭೂತಾಯಿಯಂತಹ ಕೊಬ್ಬಿನ ಮೀನುಗಳಲ್ಲಿ ಒಮೆಗಾ-3, ಕೊಬ್ಬಿನಾಮ್ಲಗಳು, ವಿಟಮಿನ್ ಡಿ ಸಮೃದ್ಧವಾಗಿದೆ. ಇದು ಉರಿಯೂತ ತಗ್ಗಿಸಲು, ಎಲುಬಿನ ಮೂಳೆಗಳನ್ನು ಬಲಪಡಿಸಲು ಸಹಾಕರಿಸುತ್ತದೆ.
ಹಸಿರೆಲೆ ತರಕಾರಿಗಳು: ಪಾಲಕ್, ಬ್ರೊಕೊಲಿಯಂತಹ ಹಸಿರೆಲೆ ತರಕಾರಿಗಳು ಕೂಡಾ ಉತ್ತಮವಾಗಿವೆ. ಇವುಗಳಲ್ಲಿ ಕ್ಯಾಲ್ಸಿಯಂ, ವಿಟಮಿನ್ ಕೆ, ಆಂಟಿಆಕ್ಸಿಡೆಂಟ್ಗಳಿದ್ದು, ಇವುಗಳು ಮೂಳೆಗಳಿಗೆ ಅಗತ್ಯ ಪೋಷಕಾಂಶಗಳಾಗಿವೆ.
ಡ್ರೈ ಪ್ರೂಟ್ಸ್: ನಟ್ಸ್ ಮತ್ತು ಬೀಜಗಳು ( ಅಗಸೆ ಬೀಜ, ಕುಂಬಳಕಾಯಿ,ಚಿಯಾ) ಇತ್ಯಾದಿಗಳಲ್ಲಿ ಒಮೆಗಾ-3 ಸೇರಿದಂತೆ ಆರೋಗ್ಯಕರ ಕೊಬ್ಬು, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್ಗಳನ್ನು ಪೂರೈಸಿ ಮೂಳೆ, ಕೀಲುಗಳ ಆರೋಗ್ಯ ಬೆಂಬಲಿಸಲು ನೆರವಾಗುತ್ತದೆ.
ಹಣ್ಣುಗಳು: ಹಣ್ಣುಗಳ ಸೇವನೆಯೂ ಉತ್ತಮ ಆರೋಗ್ಯ ಹೇಳಿಮಾಡಿಸಿದ್ದು, ಅದರಲ್ಲೂ ಕೀವಿ ಹಣ್ಣು, ಕಿತ್ತಳೆಗಳ ಸೇವನೆ ಅತೀ ಉತ್ತಮ ಏಕೆಂದರೆ ಇದರಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ ನೀಡಲು ಸಹಾಕಾರಿಸುತ್ತದೆ.
ದ್ವಿದಳ ದಾನ್ಯಗಳು: ಬೀನ್ಸ್, ಮಸೂರ, ಸೋಯಾ ಉತ್ಪನ್ನಗಳು ಕ್ಯಾಲ್ಸಿಯಂ ಪ್ರೋಟೀನ್, ಪೈಬರ್, ಮೆಗ್ನೀಸಿಯಮ್, ಸತುಗಳಂತಹ ಖನಿಜಗಳನ್ನು ಒದಗಿಸುತ್ತದೆ. ಇವೆಲ್ಲಾ ಮೂಳೆಗಳ ಆರೋಗ್ಯ ಬಲಪಡಿಸಲು ಸಹಾಯ ಮಾಡುತ್ತದೆ.
ಸೂಪ್‌ಗಳು: ಕಾಲಜನ್-ಭರಿತ ಸೂಪ್ ಗಳು ಮತ್ತು ಸ್ಟಾಕ್ ಗಳಂತಹ ಮೂಳೆಗಳನ್ನು ಕುದಿಸುವ ಮೂಲಕ ತಯಾರಿಸಲಾದ ಮೂಳೆ ಗಳನ್ನು ಕುದಿಸುವ ಮೂಲಕ ತಯಾರಿಸಲಾದ ಮೂಳೆ ಸಾರು, ಅಮೈನೋ ಆಮ್ಲಗಳು, ಕಾಲಜನ್, ಜೆಲಾಟಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇವೆಲ್ಲಾ ಮೂಳೆಗಳನ್ನು ಬಲಪಡಿಸುತ್ತದೆ.


