ಕಳೆದ ಎರಡು ವಾರಗಳ ಹಿಂದೆ, 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಮಾಡಿತ್ತು. ಇದೀಗ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ. ಇದರಲ್ಲಿ ಈಗ ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷರ ಆಯ್ಕೆ ಬಗ್ಗೆ ಅಸಮಾಧಾನಗಳು ಕೇಳಿಬಂದಿದೆ. ಈ ಬಗ್ಗೆ ಆಡಿಯೋ ವೈರಲ್ ಆಗಿದೆ.
20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ, ಇದರಂತೆ ಆಯ್ಕೆಯಾದವರ ಪಟ್ಟಿ ಇಲ್ಲಿದೆ.
- ಗುತ್ತಿಗನೂರು ವಿ, ಗೌಡ-ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮ
- ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ-ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ
- ಚಂಗಾವರ ಮಾರಣ್ಣ-ಕಾಡುಗೊಲ್ಲ ಅಭಿವೃದ್ದಿ ನಿಗಮ
- ದೇವೇಂದ್ರನಾಥ ಕೆ ನಾದ್-ಅಲೆಮಾರಿ/ಅರೆ ಅಲೆ ಮಾರಿ ಅಭಿವೃದ್ದಿ ನಿಗಮ
- ಕೆ.ಪಿ ವೆಂಕಟೇಶ್-ಕರ್ನಾಟಕ ಸಪಾಯಿ ಕರ್ಮಚಾರಿ ಅಭಿವೃದ್ದಿ ನಿಗಮ
- ಧರ್ಮಣ್ಣ ದೊಡ್ಡಮನಿ- ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ
- ರಘು ಕೌಟಿಲ್ಯ- ಮೈಸೂರು ಪೇಂಟ್ಸ್ ಅಂಡ್ ವಾರ್ನಿಶ್
- ಕೊಲ್ಲಾ ಶೇಶಗಿರಿ ರಾವು-ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ, ತುಂಗ ಭದ್ರ ಯೋಜನೆ ಮುನಿರಬಾದ್
- ಜಿ.ನಿಜಗುಣರಾಜು-ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ, ಕಾವೇರಿ ಜಲಾಯನ ಪ್ರದೇಶ ಮೈಸೂರು
- ಎಂ ಸರವಣ-ಅಲ್ಪಸಂಖ್ಯಾತರ ನಿಗಮ
- ಕೆ.ವಿ ನಾಗರಾಜ್- ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
- ಮಾರುತಿ-ಕರಕುಶಲ ಅಭಿವೃದ್ದಿ ನಿಗಮ
- ಎಂ ಎಸ್ ಕರಿಗೌಡ್ರ- ಮಾರ್ಕೆಟಿಂಗ್ ಕಮ್ಯೂನಿಕೇಶನ್ ಅಂಡ್ ಅಡ್ವಟ್ರೈಸಿಂಗ್ ಲಿಮಿಟೆಡ್
- ಎ.ವಿ ತೀರ್ಥರಾಮ- ಮೀನುಗಾರಿಕೆ ಅಭಿವೃದ್ದಿ ನಿಗಮ
- ಎನ್.ಎಂ ರವಿ ಕಾಳಪ್ಪ-ಕರ್ನಾಟಕ ಜೈವಿಕ ವೈವಿದ್ಯ ಮಂಡಳಿ
ಇದೀಗ ಮೀನುಗಾರಿಕೆ ಅಭಿವೃದ್ದಿ ನಿಗಮ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆಯಾಗಿದ್ದು ಮೊಗವೀರ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಆರೋಪ ಕೇಳಿಬಂದಿದೆ.ಈ ಬಗ್ಗೆ ಮೀನಗಾರಿಕಾ ಸಚಿವರಿಗೆ ಬಿಜೆಪಿ ಕಾರ್ಯಕರ್ತ ಎನ್ನಲಾದ ವ್ಯಕ್ತಿಯೊಬ್ಬರು ದೂರವಾಣಿ ಕರೆ ಮಾಡಿ ವಿಚಾರಿಸಿ ಅಸಮಾಧಾನ ವ್ಯಕ್ತಪಡಿಸಿರುವ ಆಡಿಯೋ ವೈರಲ್ ಆಗಿದೆ.ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಮೀನುಗಾರರಿಗೆ ನ್ಯಾಯ ಸಿಕ್ಕಿತ್ತು.ಆದರೆ ಬಿಜೆಪಿ ಪರವಾಗಿ ನಿಂತಿದ್ದ ಮೊಗವೀರರಿಗೆ ಅನ್ಯಾಯ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ.