ಟೊಮೆಟೋ ಬೆಲೆ ಗಗನಕ್ಕೇರಿ ಕುಳಿತಿದೆ. ದಿನದ ಸಾಂಬಾರಿಗೂ ಒಂದು ಟೊಮೆಟೋ #Tomato ಹಾಕಲು ಹಿಂದೆ ಮುಂದೆ ನೋಡುವಂತಾಗಿದೆ. ಅಂತದ್ದರಲ್ಲಿ ಮಾರುಕಟ್ಟೆಗೆ ಕಪ್ಪು ಟೊಮೆಟೋ, ಚಾಕಲೇಟ್ ಟೊಮೆಟೋ, ಹೀಗೆ ತರತರದ ಟೊಮೆಟೋ ಬಂದ್ರೆ ಅದನ್ನು ಕೊಳ್ಳುವವರಾರೋ..?. ಆದರೆ ಕೆಂಪು ಟೊಮೆಟೊ ಕೃಷಿ ಕೆಲವೊಮ್ಮೆ ಲಾಭ ನೀಡಿದ್ರೆ, ಇನ್ನೂ ಕೆಲವೊಮ್ಮೆ ಭೀಕರ ನಷ್ಟ ತರುತ್ತದೆ. ರೇಟ್ ಕಡಿಮೆಯಾದ್ರೆ ರೈತರು ಟೊಮೆಟೊಗಳನ್ನು ರಸ್ತೆಗೆ ಎಸೆದು ಬಿಡ್ತಾರೆ. ದಿನಬಳಕೆಯ ಕೆಂಪು ಟೊಮೆಟೋ ಪರಿಸ್ಥಿತಿ ಹೀಗಿರುವಾಗ ಈ ಕಪ್ಪು ಟೊಮೆಟೊ, ಚಾಕಲೇಟ್ ಟೊಮೆಟೋ ಕೊಳ್ಳುವವರಾರು ಅನ್ನೋದೆ ಪ್ರಶ್ನೆ. ಆದರೆ ಇದಕ್ಕೆ ಭಾರಿ ಬೇಡಿಕೆ ಇದೆಯಂತೆ, ಬೆಳೆದರೆ ಯಾವಾಗಲೂ ಲಾಭವನ್ನೇ ತಂದುಕೊಡುತ್ತೆ ಅಂತೆ…!
ಕಪ್ಪು ಬಣ್ಣದ ಟೊಮೆಟೊ, ಚಾಕಲೇಟ್ ಟೊಮೆಟೋ ಇರುತ್ತಾ ಅನ್ನೋ ಅನುಮಾನ ಅನೇಕರಿಗೆ ಇದೆ. ಇತ್ತೀಚೆಗೆ ತರಹೇವಾರಿ ಬಣ್ಣದ ಟೊಮೆಟೊಗಳನ್ನು ಬೆಳೆಯುವುದಕ್ಕೆ ರೈತರು ಮುಂದಾಗಿದ್ದಾರೆ.ಈಗಾಗಲೇ ಸಾವಿರಾರು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ನೀವೂ ಅಪರೂಪದ ಬೆಳೆಗಳನ್ನು ಬೆಳೆಯಲು ಬಯಸಿದರೆ ಕಪ್ಪು, ಚಾಕಲೇಟ್ ಟೊಮೆಟೊ ಉತ್ತಮ ಆಯ್ಕೆ. ಭಾರತದಲ್ಲಿ ಈ ಟೊಮೆಟೊಗಳಿಗೆ ಭಾರಿ ಬೇಡಿಕೆಯಿದೆಯಂತೆ. ಉತ್ಪಾದನೆ ತುಂಬಾ ಕಡಿಮೆಯಾಗಿದೆ. ಹಾಗಾಗಿ ಒಳ್ಳೆಯ ಬೆಲೆಗೆ ನೀವು ಈ ಟೊಮೆಟೊಗಳನ್ನು ಮಾರಾಟ ಮಾಡಬಹುದು. ರೈತರಿಗೆ ಹೆಚ್ಚಿನ ಲಾಭ ಸಿಗುತ್ತಿದೆ. ಅದಕ್ಕಾಗಿಯೇ ಈ ಬೆಳೆಯನ್ನು ಬೆಳೆಯುವುದು ಉತ್ತಮವೆಂದು ಪರಿಗಣಿಸಬಹುದು.
ಹೀಗಾಗಿ ಕೆಂಪು ಟೊಮೆಟೊ ಬಿಟ್ಟು ಉಳಿದ ಟೊಮೆಟೋಗಳನ್ನು ಮಾರುಕಟ್ಟೆಗೆ ಕೊಂಡೊಯ್ದರೆ ಜನ ತಕ್ಷಣ ಖರೀದಿಸುತ್ತಾರೆ. ಏಕೆಂದರೆ ಈ ಟೊಮೆಟೊ ಕ್ಯಾನ್ಸರ್ ತಡೆಗಟ್ಟುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಅವುಗಳನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಈ ಟೊಮೆಟೊ ಅನೇಕ ರೋಗಗಳನ್ನು ಸಹ ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಹೇಳಿದೆಯಂತೆ. ಕಪ್ಪು ಟೊಮೆಟೊಗಳು ತುಂಬಾ ಹುಳಿಯಾಗಿರುವುದಿಲ್ಲ, ತುಂಬಾ ಸಿಹಿಯಾಗಿರುವುದಿಲ್ಲ. ಸ್ವಲ್ಪ ಉಪ್ಪಾಗಿರುತ್ತದೆ. ತೂಕವನ್ನು ಕಡಿಮೆ ಮಾಡಲು, ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಈ ವಿಶೇಷ ಬಣ್ಣದ ಟೊಮೆಟೊಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕೆಂಪು ಟೊಮೆಟೊ ಬೆಳೆಯುವ ರೀತಿಯಲ್ಲಿಯೇ ಕಪ್ಪು ಟೊಮೆಟೊಗಳನ್ನು ಬೆಳೆಯಲಾಗುತ್ತದೆ. ಬಿಸಿ ವಾತಾವರಣ ಇರಬೇಕು. ಭಾರತೀಯ ಹವಾಮಾನವು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಮಣ್ಣಿನ PH ಮೌಲ್ಯವು 6 ರಿಂದ 7 ಆಗಿರಬೇಕು. ಈ ಟೊಮೆಟೊಗಳು ಸ್ವಲ್ಪ ತಡವಾಗಿ ಹಣ್ಣಾಗುತ್ತವೆ.
ಈ ಕಪ್ಪು ಕೃಷಿಯು ಇಂಗ್ಲೆಂಡ್ನಿಂದ ಪ್ರಾರಂಭವಾಯಿತು. ಅಲ್ಲಿ ಈ ಟೊಮೆಟೊಗಳನ್ನು ಇಂಡಿಗೊ ರೋಸ್ ಟೊಮೆಟೊ ಎಂದು ಕರೆಯಲಾಗುತ್ತದೆ. ಅಲ್ಲಿ ಅವುಗಳನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಕಪ್ಪು ಟೊಮೆಟೊ ಬೀಜಗಳನ್ನು ಜನವರಿಯಲ್ಲಿ ಬಿತ್ತಬೇಕು. ಮಾರ್ಚ್-ಏಪ್ರಿಲ್ ಸಮಯದಲ್ಲಿ ಇಳುವರಿ. ಈ ಬೆಳೆ ಬೆಳೆಯುವುದರೊಂದಿಗೆ ಎಲ್ಲ ಖರ್ಚು ಕಳೆದು ಹೆಕ್ಟೇರ್ ಗೆ 4ರಿಂದ 5 ಲಕ್ಷ ರೂ.ಗಳ ಲಾಭ ಬರಲಿದೆ ಎನ್ನುತ್ತಾರೆ ಕೃಷಿ ತಜ್ಞರು. ಪ್ಯಾಕಿಂಗ್ ಮತ್ತು ಬ್ರ್ಯಾಂಡಿಂಗ್ ಮೂಲಕ ಲಾಭ ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ. ನೀವು ಈ ಬೆಳೆಯನ್ನು ಬೆಳೆಯಲು ಬಯಸಿದರೆ ನಿಮ್ಮ ಹತ್ತಿರದ ಕೃಷಿ ಅಧಿಕಾರಿಗಳ ಸಲಹೆ ಮತ್ತು ಸಲಹೆಗಳನ್ನು ನೀವು ತೆಗೆದುಕೊಳ್ಳಬೇಕು.
ಈ ಚಾಕೊಲೇಟ್ ಟೊಮ್ಯಾಟೊಗಳು ಕಾಯಿ ಇದ್ದಾಗ ಹಸಿರು ಬಣ್ಣದಲ್ಲಿ ಕಾಣುತ್ತವೆ. ಆದರೆ ಮಾಗಿದಾಗ ಚಾಕೊಲೇಟ್ ಬಣ್ಣಕ್ಕೆ ತಿರುಗುತ್ತವೆ. ಪಶ್ಷಿಮ ಬಂಗಾಳದ ಮುಸ್ತಫಾನಗರದ ದಂಪತಿ ಪ್ರಥಮ ಬಾರಿಗೆ ಈ ಚಾಕಲೇಟ್ ಟೊಮ್ಯಾಟೊ ಕೃಷಿ ಮಾಡಿ ಮಾರಾಟಕ್ಕೆ ಇಟ್ಟಿದ್ದಾರೆ. ಚಾಕೋಲೇಟ್ ಟೊಮ್ಯಾಟೊ ಬೀಜವನ್ನು ಒಮ್ಮೆ ಬಿತ್ತಿದರೆ 4-5 ತಿಂಗಳಿಗೆ ಉತ್ತಮ ಬೆಳೆಯನ್ನು ಪಡೆಯಬಹುದು. ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಈ ಟೊಮ್ಯಾಟೊ ಬೀಜಗಳನ್ನು ಬಿತ್ತಿದರೆ, ಜೂನ್-ಜುಲೈನಲ್ಲಿ ಟೊಮ್ಯಾಟೊಗಳು ಕಟಾವಿಗೆ ಬರುತ್ತವೆ.
ಈ ಟೊಮ್ಯಾಟೊದಿಂದ ಚಟ್ನಿಯನ್ನು ತಯಾರಿಸಲಾಗುತ್ತದೆ. ಇವು ಇತರ ಟೊಮ್ಯಾಟೊಗಳಂತೆ ಹುಳಿಯಾಗಿರುವುದಿಲ್ಲ, ಆದರೆ ಸಿಹಿಯಾಗಿರುತ್ತವೆ. ಹಾಗಾಗಿ ತಿನ್ನಲು ತುಂಬಾ ರುಚಿಕರವಾಗಿವಾಹಿರುತ್ತದೆ.ಈ ಟೊಮ್ಯಾಟೊಗಳನ್ನು ಮಾರುಕಟ್ಟೆಯಲ್ಲಿ ಕೆಜಿಗೆ 80 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ಈ ಟೊಮ್ಯಾಟೊಗಳು ಮೂಲತಃ ಸೋಲಾನಮ್ ಲೈಕೋಪರ್ಸಿಕಮ್ ಜಾತಿಯಿಂದ ಬಂದವು. ಇವು ಕಾಯಿಯಾಗಿದ್ದಾಗ ಹಸಿರು ಮತ್ತು ಮಾಗಿದಾಗ ಚಾಕೊಲೇಟ್ ಬಣ್ಣವನ್ನು ಹೊಂದಿರುತ್ತವೆ. ಈ ಟೊಮೆಟೊ ಪ್ರಭೇದವು ಪಶ್ಚಿಮ ದಕ್ಷಿಣ ಅಮೆರಿಕಾ ಮತ್ತು ಮಧ್ಯ ಅಮೆರಿಕಕ್ಕೆ ಸ್ಥಳೀಯವಾಗಿದೆ. ಇದರ ಬಣ್ಣ ಚಾಕೊಲೇಟ್‌ನಂತೆ ಮತ್ತು ಅದರ ರುಚಿ ಚಾಕೊಲೇಟ್‌ನಂತೆಯೇ ಇರುತ್ತದೆ.
(ಕೃಪೆ: ಅಂತರ್ಜಾಲ)