Advertisement
ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ಸ್ವಚ್ಛತಾ ಕಾರ್ಯ | ಟ್ರಾಕ್ಟರ್‌ ತುಂಬಿದ ಬಟ್ಟೆ ರಾಶಿ..! |

Share

ದೇಶದ ಪ್ರಸಿದ್ಧ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ. ಈ ದೇವಸ್ಥಾನದ ಪವಿತ್ರ ನದಿ ಕುಮಾರಧಾರಾ. ಈ ಪವಿತ್ರ ನದಿಯಲ್ಲಿ ಸ್ನಾನ ಮಾಡುವ ಭಕ್ತಾದಿಗಳು ಸಾವಿರಾರು. ದಯವಿಟ್ಟು ಈ ಪವಿತ್ರ ನದಿಯನ್ನು ಮಲಿನ ಮಾಡಬೇಡಿ. ಬಟ್ಟೆ, ಪ್ಲಾಸ್ಟಿಕ್‌ ಈ ಪವಿತ್ರ ನದಿಗೆ ಎಸೆಯಬೇಡಿ. ಈಚೆಗೆ ನಡೆದ ಸ್ವಚ್ಛತಾ ಕಾರ್ಯದಲ್ಲಿ ಲೋಡುಗಟ್ಟಲೆ ಬಟ್ಟೆ, ಪ್ಲಾಸ್ಟಿಕ್‌ ನದಿಯಿಂದ ತೆಗಯಲಾಯಿತು.

Advertisement
Advertisement

ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ನದಿ ಸ್ನಾನಘಟ್ಟ ನದಿಯಲ್ಲಿ ಸಾವಿರಾರು ಸಂಖ್ಯೆಯ ಬಟ್ಟೆ , ಪ್ಲಾಸ್ಟಿಕ್ ನದಿಯಲ್ಲಿ ಬಿದ್ದಿದ್ದು ಇಡೀ ನದಿಯ ನೀರು ಮಲಿನ ಗೊಂಡಿರುವುದಲ್ಲದೆ ಪಕ್ಕದ ಹರಿಯುತ್ತಿರುವ ನದಿಯ ಭಾಗಗಳಲ್ಲಿ ಕೂಡ ವಸ್ತ್ರಗಳು ತೇಲಿಕೊಂಡು ಬಂದು ಇಕ್ಕೆಲಗಳಲ್ಲಿ ಶೇಖರಣೆ ಗೊಂಡಿರುತ್ತದೆ. ಇದನ್ನು ಮನಗಂಡ ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ರೀಜನ್ ನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸ್ವಚ್ಛತಾ ಕಾರ್ಯ ನಡೆಸಿದರು.

Advertisement

ನದಿಯಲ್ಲಿ ಸ್ನಾನ ಮಾಡುವ ಸ್ಥಳದ ತಳಭಾಗದಲ್ಲಿ ಬಿದ್ದಿದ್ದ ಸಾವಿರಾರು ಬಟ್ಟೆಗಳನ್ನ ಮೇಲಕ್ಕೆ ತಂದ ಸ್ವಯಂಸೇವಕರು ಟ್ರ್ಯಾಕ್ಟರ್ ನಲ್ಲಿ ಅದನ್ನು ತುಂಬಿಸಿ ಕೊಂಡೊಯ್ದರು. ಭಕ್ತಾದಿಗಳು ತೀರ್ಥ ಸ್ಥಾನ ಮಾಡುವ  ಸಂದರ್ಭದಲ್ಲಿ ದೇವಳದ ವತಿಯಿಂದ ಪ್ರತಿವರ್ಧಕದ ಮೂಲಕ ಎಚ್ಚರಿಸಲಾಗುತ್ತದೆ. ಆದರೆ ಭಕ್ತಾದಿಗಳು ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಸ್ವಚ್ಛತೆಗೆ ಸಹಕರಿಸಬೇಕು ಎಂದು ರವಿಕಕ್ಕೆಪದವು ಮನವಿ ಮಾಡಿದರು.

Advertisement

ಸ್ವಚ್ಛತೆ ಹಾಗೂ ನದಿಯ ಪಾವಿತ್ರ್ಯತೆ ಉಳಿಸಿಕೊಳ್ಳಲು ದೇವಳದ ವತಿಯಿಂದ ಕಠಿಣ ಕ್ರಮವನ್ನು ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಸ್ವಚ್ಛತಾ ಕಾರ್ಯಕ್ರಮದಲ್ಲಿ ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ನ ಸಂಸ್ಥಾಪಕ  ರವಿ ಕಕ್ಕೆ ಪದವು, ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ನಡುತೋಟ, ಸಮಾಜ ಸೇವಾ ಟ್ರಸ್ಟ್ ನ ಸದಸ್ಯರುಗಳು ಭಾಗವಹಿಸಿದ್ದರು.

Located in the lush greenery of the Western Ghats, the famous temple of Kukke Subrahmanya stands as a symbol of devotion and spirituality in our country. The temple is dedicated to Lord Subrahmanya, who is believed to be the son of Lord Shiva. The holy river Kumaradhara flows near the temple, adding to its sacred atmosphere. Pilgrims from all over the country visit this temple to seek blessings and offer their prayers. The serene surroundings and the spiritual aura of the temple make it a place of great significance for devotees.

Advertisement

It is imperative that we take immediate action to prevent the pollution of the Kumaradhara river in Kukke Subramanya. The sanctity of this river must be preserved for the well-being of the environment and the community. Pollution not only harms the aquatic life but also affects the livelihoods of those who depend on the river for various purposes. It is our responsibility to ensure the sustainable use of this natural resource for future generations. Let us work together to protect and conserve the Kumaradhara river, for the benefit of all.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ | ಗ್ರಾಮೀಣ ಭಾಗಕ್ಕೆ ಹೆಮ್ಮೆಯ ಗರಿ |

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕುತ್ಲೂರು ಗ್ರಾಮ ಪ್ರಾಕೃತಿಕ ಸೌ೦ದರ್ಯವನ್ನೇ ಹೊದ್ದು ಮಲಗಿದೆ. ಇಂತಹ…

7 hours ago

ಇಂಗುಗುಂಡಿ ನಿರ್ಮಿಸಿದ ಮಹಿಳಾ ತಂಡ | 6 ಮಂದಿ ಮಹಿಳೆಯರಿಂದ 236 ಕ್ಕೂ ಹೆಚ್ಚು ಇಂಗುಗುಂಡಿ |

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿಯ ಚಿಗುರು ಸಂಜೀವಿನಿ…

8 hours ago

ಜವಳಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ

ಕೃಷಿ ಕ್ಷೇತ್ರದ ನಂತರ ಜವಳಿ ಕ್ಷೇತ್ರದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಗೆ ಅವಕಾಶವಿದ್ದು,…

9 hours ago

ದೇವಾಲಯಗಳಲ್ಲಿ ನಂದಿನಿ ತುಪ್ಪ ಬಳಸಲು ನಿರ್ಧಾರ | ನಂದಿನಿ ತುಪ್ಪಕ್ಕೆ ಬೇಡಿಕೆ

ರಾಜ್ಯ ಮತ್ತು ಹೊರರಾಜ್ಯದ ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಂದಿನಿ…

9 hours ago

ಹವಾಮಾನ ವರದಿ | 27-09-2024 | ಸೆ. 29 ರಿಂದ ಗುಡುಗು ಸಹಿತ ಮಳೆ ನಿರೀಕ್ಷೆ |

28.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

15 hours ago