ರೈತರಿಗೆ 400 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಮತ್ತು ಯಂತ್ರೋಪಕರಣ ವಿತರಣೆ

April 22, 2025
6:22 AM

ರಾಜ್ಯದಲ್ಲಿ ಕಳೆದ ವರ್ಷ 25 ಸಾವಿರಕ್ಕೂ ಅಧಿಕ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಬೃಹತ್ ಮತ್ತು ಸಣ್ಣ ನೀರಾವರಿಗೆ 25 ಸಾವಿರ ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗುತ್ತಿದೆ. ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ರೈತರಿಗೆ 400 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಮತ್ತು ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಕೃಷಿಭಾಗ್ಯವನ್ನು ಮಳೆ ಆಧಾರಿತ ಕೃಷಿ ಬೆಳೆಗಾರರಿಗೂ ಜಾರಿಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಅವರು ಬೆಳಗಾವಿ ವಿಭಾಗ ಮಟ್ಟದ ಕೃಷಿ ಇಲಾಖೆಯ ಸಹಾಯಧನದ ಅಡಿಯಲ್ಲಿ ರೈತರಿಗೆ ವಿವಿಧ ಯಂತ್ರೋಪಕರಣಗಳು ಮತ್ತು ಸವಲತ್ತುಗಳನ್ನು  ವಿತರಿಸಿದರು.ರಾಜ್ಯ ಸರ್ಕಾರ ಕೃಷಿ ಮತ್ತು ನೀರಾವರಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ವಿವಿಧ ಯಂತ್ರೋಪಕರಣಗಳು ಹಾಗೂ ಸಲಕರಣೆಗಳನ್ನು ವಿತರಣೆ ಮಾಡಲಾಗಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸಚಿವ ಚಲುವರಾಯಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಈ ವರ್ಷ 12 ಸಾವಿರಕ್ಕೂ ಅಧಿಕ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೃಷಿಯಲ್ಲಿ ವಿಭಿನ್ನ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ.  ರೈತರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಬೈರತಿ ಸುರೇಶ್ ಸೇರಿದಂತೆ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೇ.9 | ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯ ನಾಟಕ | ಸಂತೋಷದಿಂದ ನಗಲು ಒಂದು ವೇದಿಕೆ
May 9, 2025
7:51 AM
by: ದ ರೂರಲ್ ಮಿರರ್.ಕಾಂ
ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |
May 9, 2025
7:46 AM
by: ದ ರೂರಲ್ ಮಿರರ್.ಕಾಂ
ಧ್ರುವ ಯೋಗ ಯಾವುದರ ಸಂಕೇತ..? | ಯಾವ ರಾಶಿಯವರಿಗೆ ಸದ್ಯ ಈ ಯೋಗ..?
May 9, 2025
7:39 AM
by: ದ ರೂರಲ್ ಮಿರರ್.ಕಾಂ
ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ
May 8, 2025
8:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group