ಸಂಪಾಜೆಯಲ್ಲಿ ಕೃಷಿ ಸಖಿಯರ ಮೂಲಕ ಕೃಷಿಕರಿಗೆ ಏಣಿ ಹಾಗೂ ಜೈವಿಕ ಗೊಬ್ಬರ ವಿತರಣೆ

November 30, 2025
10:28 PM

ಸಂಪಾಜೆ  ಗ್ರಾಮ ಪಂಚಾಯತ್‌ ವಿಶೇಷ ಗ್ರಾಮಸಭೆ ಹಾಗೂ ಕೃಷಿ ಸಖಿಯರ ಮೂಲಕ ಕೃಷಿಕರಿಗೆ ಏಣಿ ಹಾಗೂ ಜೈವಿಕ ಗೊಬ್ಬರ ವಿತರಣೆ ಕಾರ್ಯಕ್ರಮ ನಡೆಯಿತು.

ದ.ಕ ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಕೃಷಿಕರಿಗೆ ಸಬ್ಸಿಡಿ ದರದಲ್ಲಿ ಏಣಿಗಳ ವಿತರಣೆ ಹಾಗೂ ಉಚಿತ ಜೈವಿಕ ಗೊಬ್ಬರ ವಿತರಣೆ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದರು.  ಗ್ರಾಮ ಪಂಚಾಯತ್ ಸಂಪಾಜೆ ಕಲ್ಲುಗುಂಡಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ (ನಿ.) – ಕೇಂದ್ರ ವಿಟ್ಲ, ಐಸಿಎಆರ್ – ಐಐಹೆಚ್‌ಆರ್ ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಫುಡ್ ಚೈನ್ ಕ್ಯಾಂಪೇನ್, ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇವರುಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹನೀಫ್ ಎಸ್.ಕೆ, ಸದಸ್ಯರು ಜಿ.ಕೆ ಹಮೀದ್, ಪಿಡಿಓ ಸರಿತಾ ಓಲ್ಗಾ ಡಿಸೋಜಾ, ನರೇಗಾ ಎಂಜಿನಿಯರ್ ಪ್ರಮೀಳಾ, ಸುಧನ ಕೃಷ್ಣ, ಸೆಕ್ರಟರಿ ತಿರುಮಲೇಶ್ವರ ಉಪಸ್ಥಿತರಿದ್ದರು.

ನರೇಗಾ ಯೋಜನೆ ಕುರಿತು ಮಾಹಿತಿ, ಚರ್ಚೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ರಸ್ತೆ–ಚರಂಡಿ ನಿರ್ಮಾಣ, ಬಾವಿ ಪುನಶ್ಚೇತನ, ಹೂಳೆತ್ತುವಿಕೆ, ರಬ್ಬರ್ ಗಿಡ ನೆಡುವ ಕಾರ್ಯಗಳಿಗೆ ನರೇಗಾ ಯೋಜನೆಯಡಿ ಅವಕಾಶ ಕಲ್ಪಿಸಲು ಮನವಿ ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅರ್ಕಾ ಜೈವಿಕ ಗೊಬ್ಬರ – ಎ.ಎಂ.ಸಿ ಮಾಹಿತಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಸರ್ಕಾರದ ಕೃಷಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಐಸಿಎಆರ್ – ಐಐಹೆಚ್‌ಆರ್ ಬೆಂಗಳೂರು ಸುಳ್ಯದ ಕೃಷಿ ಸಖಿಯರಿಗೆ ತರಬೇತಿ ನೀಡಿದ್ದು, ಪ್ರತಿಷ್ಠಿತ ಸಂಸ್ಥೆಯ ವಿಜ್ಞಾನಿಗಳು ಸಂಶೋಧಿಸಿ ಅಭಿವೃದ್ಧಿಪಡಿಸಿದ ವಿಶೇಷ ಸೂಕ್ಷ್ಮಾಣು ಜೀವಿಗಳ ಜೈವಿಕ ಗೊಬ್ಬರ ಅರ್ಕಾ ಎಎಂಸಿ ಬಗ್ಗೆ, ರೈತ ಉತ್ಪಾದಕರ ಸಂಸ್ಥೆ, ಇ-ಕೆ ವೈ ಸಿ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಂಪಾಜೆ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸುಂದರಿ ಮುಂಡಡ್ಕ, ಸಂಜೀವಿನಿ ಎಂ.ಬಿ.ಕೆ ಕಾಂತಿ ಬಿ.ಎಸ್, ಎಲ್‌ಸಿಆರ್‌ಪಿ ಸೌಮ್ಯ, ಭಾರತಿ, ಪಂಚಾಯತ್ ಸಿಬ್ಬಂದಿಗಳಾದ ಗೋಪಮ್ಮ, ಸವಿತಾ, ಮಧುರಾ, ಉಮೇಶ್, ಬೋಜ, ಕೃಷಿಕರು ಹಾಗೂ ಫಲಾನುಭವಿಗಳು ಭಾಗವಹಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror