ಪ್ರಸಾದದ ರೂಪದಲ್ಲಿ ಭಕ್ತರಿಗೆ ಗಿಡಗಳ ಹಂಚಿಕೆ | ಅಂಕೋಲಾದ ಪುರಾತನ ದೇವಸ್ಥಾನ ವಿಶೇಷ ಪರಿಸರ ಕಾಳಜಿ |

June 12, 2024
1:36 PM

ಜೂನ್‌(June) ತಿಂಗಳು ಬಂತೆಂದರೆ ಪರಿಸರದ(Environment) ಬಗ್ಗೆ ಕಾಳಜಿ ಆರಂಭವಾಗುತ್ತದೆ. ಎಲ್ಲಿ ನೋಡಿದರಲ್ಲಿ ಗಿಡ ನೆಡುವ(Plant) ಕಾರ್ಯಕ್ರಮ…! ಶಾಲೆ, ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳು, ಮನೆ, ಬೀದಿ, ಕಾಡು ಮೇಡು ಎಲ್ಲ ಕಡೆ ಗಿಡ ನೆಡುವ ಕಾರ್ಯಕ್ರಮ…!. 

Advertisement

ಆದರೆ ದೇವಸ್ಥಾನದಂತಹ ಧಾರ್ಮಿಕ ಕೇಂದ್ರಗಳಲ್ಲಿ ಗಿಡದ ಬಗ್ಗೆ ಕಾಳಜಿ ಬೆಳೆಸಿದರೆ ಅದು ಇನ್ನಷ್ಟು ವ್ಯಾಪಿಸುತ್ತದೆ, ಅದಕ್ಕೊಂದು ಅರ್ಥವೂ ಬರುತ್ತದೆ. ಇದೀಗ ವಿಶೇಷವಾಗಿ ದೇಗುಲಕ್ಕೆ(Temple) ಬಂದತಂಹ ಭಕ್ತಾಧಿಕಗಳಿಗೆ ಗಿಡಗಳನ್ನು ಪ್ರಸಾದದ ರೂಪದಲ್ಲಿ ವಿತರಿಸಿ ಪರಿಸರದ ಮೇಲೆ ವಿಶೇಷ ಕಾಳಜಿ ಮೆರೆದಿದ್ದಾರೆ ದೇವಸ್ಥಾನದ ಆಡಳಿತ ಮಂಡಳಿ. ಅಂಕೋಲಾದ ಬಿಳಿಹೋಯ್ಗೆ ಗ್ರಾಮದ ಜೈನ ಜಟಗ ಮಹಾದೇವಿ ಹಾಗೂ ಚೌಡೇಶ್ವರಿ ದೇವಾಲಯದಲ್ಲಿ ಈ ರೀತಿಯಾಗಿ ವಿಶಿಷ್ಟ ಕಾರ್ಯಕ್ರಮವನ್ನು ವಿಶೇಷ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.

ಜೈನ ಜಟಗ ಹಾಗೂ ಪರಿವಾರದ ದೇಗುಲ ತುಂಬಾ ಪುರಾತನವಾದದ್ದು. ಅದರ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಾಪನೆಯ ಅಂಗವಾಗಿ ನಡೆದ ಕಾರ್ಯಕ್ರಮಗಳಲ್ಲಿ ದೇವರ ಪ್ರಸಾದವಾಗಿ ಬಂದಂತಹ ಭಕ್ತಾದಿಗಳಿಗೆ ಗಿಡಗಳನ್ನು ನೀಡಲಾಯಿತು. ಜೊತೆಗೆ ನವಚಂಡಿಕಾ ಹವನದ ಸುತ್ತ ಗಿಡಗಳನ್ನು ಇಟ್ಟು ಅಭಿಮಾನಿ ದೇವತೆಗಳನ್ನು ಆವಾಹಿಸಿ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಪ್ರಸಾದದ ಜೊತೆ ಗಿಡ ವಿತರಿಸಲಾಯಿತು.

ಯಾವೆಲ್ಲ ಗಿಡಗಳು? : ಸಂಪಿಗೆ, ನೆಲ್ಲಿ, ಮುರುಗಲು, ಹುಣಸೆ, ಮಾವು, ಹಲಸು, ಗೇರು, ನೇರಳೆ ಗಿಡಗಳನ್ನು ಭಕ್ತರಿಗೆ ವಿತರಿಸಲಾಯಿತು. ಅರಣ್ಯ ಇಲಾಖೆಯ ಸಹಾಯದಿಂದ ವಿವಿಧ ತಳಿಯ ಗಿಡಗಳು ಹೀಗೆ ಭಕ್ತರಿಗೆ ಹಸ್ತಾಂತರಿಸಲಾಯಿತು. ದೇಗುಲದ ಪರಿಸರ ಕಾಳಜಿಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಯಿತು. ಇದೇ ರೀತಿ ಉಳಿದ ದೇವಸ್ಥಾನಗಳಲ್ಲೂ ಈ ಕಾರ್ಯವನ್ನು ಮಾಡಿದಲ್ಲಿ ನಮ್ಮ ಪರಿಸರ ಉಳಿಸುವ ಕಾರ್ಯವನ್ನು ಮಾಡಬಹುದು. ಕೇವಲ ದೇವಸ್ಥಾನ ಮಾತ್ರವಲ್ಲದೆ ಇತರ ಕಾರ್ಯಕ್ರಮಗಳಾದ ಮದುವೆ, ಸಭೆ, ಗೃಹ ಪ್ರವೇಶ, ಹುಟ್ಟು ಹಬ್ಬಕ್ಕೆ ಈ ಕಾರ್ಯ ಮಾಡಿದರೆ ಮುಂದಿನ ಪೀಳಿಗೆಗೆ ನಾವು ಅತ್ಯದ್ಭುತ ಬಹುಮಾನವನ್ನು ನೀಡಬಹುದು.

  • ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 27-04-2025 | ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆ | ಎ.28 ರಿಂದ ಮಳೆಯ ಪ್ರಮಾಣ ಕಡಿಮೆ |
April 27, 2025
1:12 PM
by: ಸಾಯಿಶೇಖರ್ ಕರಿಕಳ
ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!
April 27, 2025
11:29 AM
by: ನಾ.ಕಾರಂತ ಪೆರಾಜೆ
ಕಣ್ಣಿಗೆ ಬಟ್ಟೆ ಕಟ್ಟಿ 6 ನಿಮಿಷದಲ್ಲಿ 112 ವಸ್ತುಗಳನ್ನು ಗುರುತಿಸಿದ ಬಾಲಕಿ | ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ |
April 27, 2025
11:17 AM
by: The Rural Mirror ಸುದ್ದಿಜಾಲ
ಸಾರ್ವಜನಿಕರಲ್ಲಿ ಮಲೇರಿಯಾ ಕುರಿತು ಅರಿವು ಮೂಡಿಸಲು ಜಾಗೃತಿ
April 27, 2025
10:46 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group