ಜೂನ್(June) ತಿಂಗಳು ಬಂತೆಂದರೆ ಪರಿಸರದ(Environment) ಬಗ್ಗೆ ಕಾಳಜಿ ಆರಂಭವಾಗುತ್ತದೆ. ಎಲ್ಲಿ ನೋಡಿದರಲ್ಲಿ ಗಿಡ ನೆಡುವ(Plant) ಕಾರ್ಯಕ್ರಮ…! ಶಾಲೆ, ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳು, ಮನೆ, ಬೀದಿ, ಕಾಡು ಮೇಡು ಎಲ್ಲ ಕಡೆ ಗಿಡ ನೆಡುವ ಕಾರ್ಯಕ್ರಮ…!.
ಆದರೆ ದೇವಸ್ಥಾನದಂತಹ ಧಾರ್ಮಿಕ ಕೇಂದ್ರಗಳಲ್ಲಿ ಗಿಡದ ಬಗ್ಗೆ ಕಾಳಜಿ ಬೆಳೆಸಿದರೆ ಅದು ಇನ್ನಷ್ಟು ವ್ಯಾಪಿಸುತ್ತದೆ, ಅದಕ್ಕೊಂದು ಅರ್ಥವೂ ಬರುತ್ತದೆ. ಇದೀಗ ವಿಶೇಷವಾಗಿ ದೇಗುಲಕ್ಕೆ(Temple) ಬಂದತಂಹ ಭಕ್ತಾಧಿಕಗಳಿಗೆ ಗಿಡಗಳನ್ನು ಪ್ರಸಾದದ ರೂಪದಲ್ಲಿ ವಿತರಿಸಿ ಪರಿಸರದ ಮೇಲೆ ವಿಶೇಷ ಕಾಳಜಿ ಮೆರೆದಿದ್ದಾರೆ ದೇವಸ್ಥಾನದ ಆಡಳಿತ ಮಂಡಳಿ. ಅಂಕೋಲಾದ ಬಿಳಿಹೋಯ್ಗೆ ಗ್ರಾಮದ ಜೈನ ಜಟಗ ಮಹಾದೇವಿ ಹಾಗೂ ಚೌಡೇಶ್ವರಿ ದೇವಾಲಯದಲ್ಲಿ ಈ ರೀತಿಯಾಗಿ ವಿಶಿಷ್ಟ ಕಾರ್ಯಕ್ರಮವನ್ನು ವಿಶೇಷ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.
ಜೈನ ಜಟಗ ಹಾಗೂ ಪರಿವಾರದ ದೇಗುಲ ತುಂಬಾ ಪುರಾತನವಾದದ್ದು. ಅದರ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಾಪನೆಯ ಅಂಗವಾಗಿ ನಡೆದ ಕಾರ್ಯಕ್ರಮಗಳಲ್ಲಿ ದೇವರ ಪ್ರಸಾದವಾಗಿ ಬಂದಂತಹ ಭಕ್ತಾದಿಗಳಿಗೆ ಗಿಡಗಳನ್ನು ನೀಡಲಾಯಿತು. ಜೊತೆಗೆ ನವಚಂಡಿಕಾ ಹವನದ ಸುತ್ತ ಗಿಡಗಳನ್ನು ಇಟ್ಟು ಅಭಿಮಾನಿ ದೇವತೆಗಳನ್ನು ಆವಾಹಿಸಿ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಪ್ರಸಾದದ ಜೊತೆ ಗಿಡ ವಿತರಿಸಲಾಯಿತು.
ಯಾವೆಲ್ಲ ಗಿಡಗಳು? : ಸಂಪಿಗೆ, ನೆಲ್ಲಿ, ಮುರುಗಲು, ಹುಣಸೆ, ಮಾವು, ಹಲಸು, ಗೇರು, ನೇರಳೆ ಗಿಡಗಳನ್ನು ಭಕ್ತರಿಗೆ ವಿತರಿಸಲಾಯಿತು. ಅರಣ್ಯ ಇಲಾಖೆಯ ಸಹಾಯದಿಂದ ವಿವಿಧ ತಳಿಯ ಗಿಡಗಳು ಹೀಗೆ ಭಕ್ತರಿಗೆ ಹಸ್ತಾಂತರಿಸಲಾಯಿತು. ದೇಗುಲದ ಪರಿಸರ ಕಾಳಜಿಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಯಿತು. ಇದೇ ರೀತಿ ಉಳಿದ ದೇವಸ್ಥಾನಗಳಲ್ಲೂ ಈ ಕಾರ್ಯವನ್ನು ಮಾಡಿದಲ್ಲಿ ನಮ್ಮ ಪರಿಸರ ಉಳಿಸುವ ಕಾರ್ಯವನ್ನು ಮಾಡಬಹುದು. ಕೇವಲ ದೇವಸ್ಥಾನ ಮಾತ್ರವಲ್ಲದೆ ಇತರ ಕಾರ್ಯಕ್ರಮಗಳಾದ ಮದುವೆ, ಸಭೆ, ಗೃಹ ಪ್ರವೇಶ, ಹುಟ್ಟು ಹಬ್ಬಕ್ಕೆ ಈ ಕಾರ್ಯ ಮಾಡಿದರೆ ಮುಂದಿನ ಪೀಳಿಗೆಗೆ ನಾವು ಅತ್ಯದ್ಭುತ ಬಹುಮಾನವನ್ನು ನೀಡಬಹುದು.
ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…
ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…
ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…
ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…
ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…