ಕಾಂತಾರ ಸಿನಿಮಾ ವಿಶ್ವಮಟ್ಟದಲ್ಲಿ ನಮ್ಮ ತುಳುನಾಡ ಸಂಸ್ಕೃತಿಯನ್ನು ಎಲ್ಲರು ಬೆರಗುಗಣ್ಣಿನಿಂದ ನೋಡುವಂತೆ ಮಾಡಿತ್ತು.. ಭಾರೀ ದೊಡ್ಡ ಸಾಧನೆಯನ್ನು ಮಾಡಿದ್ದ ಕಾಂತಾರ ಸಿನಿಮಾಕ್ಕೆ ನಿರ್ದೆಶಕ, ನಟ ರಿಷಭ್ ಶೆಟ್ಟಿ ಅವರಿಗೆ ಸಾಲು ಸಾಲು ಪ್ರಶಸ್ತಿಗಳು ದಕ್ಕಿದ್ದವು. ಸದ್ಯ ಕಾಂತಾರ 2 ರಲ್ಲಿ ಬ್ಯುಸಿಯಾಗಿರುವ ರಿಷಭ್ ಶೆಟ್ಟಿ ಇದರ ಜೊತೆಯಲ್ಲಿ ಸಾಮಾಜಿಕ ಕಾರ್ಯಕ್ಕೂ ಮುಂದಾಗಿದ್ದಾರೆ. ಕಾಂತಾರ ಸಿನಿಮಾದ ಬಳಿಕ ದೈವ ನರ್ತಕರಿಗೆ ಮಾಸಿಕ 2 ಸಾವಿರ ರೂಪಾಯಿ ಮಾಸಾಶನ ದೊರಕಿತ್ತು. ಇದೀಗ ಅರಣ್ಯದಂಚಿನ ಜನರ ಬದುಕನ್ನು ಹಸನು ಮಾಡಲು ರಿಷಭ್ ಶೆಟ್ಟಿ ಕೈ ಜೋಡಿಸಿದ್ದಾರೆ.
ಕಾಂತಾರ ಸಿನಿಮಾದಿಂದ ಸ್ಫೂರ್ತಿ ಪಡೆದುಕೊಂಡ ರಿಷಭ್ ಶೆಟ್ಟಿ ಕಾಡು ಅಂಚಿನ ಜನರ ಕಷ್ಟಗಳನ್ನು ಆಲಿಸಿದ್ದಾರೆ. ಅಷ್ಟೇ ಏಕೆ ಈ ಸಂಬಂಧ 20 ಅಂಶಗಳನ್ನು ಪಟ್ಟಿ ಮಾಡಿಕೊಂಡು ರಿಷಭ್ ಶೆಟ್ಟಿ, ಸಿಎಂ ಬಸವರಾಜ ಬೊಮ್ಮಾಯಿಗೆ ನೀಡಿದ್ದಾರೆ. ಈ ಮೂಲಕ ಕಾಡು ಮಕ್ಕಳ ಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ಹಾಗೂ ಈ ಸಂಬಂಧ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಾಂತಾರ ಸಿನಿಮಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಾಡಿನ ಜನರ ಜೊತೆ ಬೆರೆಯುತ್ತಾ ರಿಷಭ್ ಶೆಟ್ಟಿ ಕಾಡಿನ ಜನರ ಕಷ್ಟಗಳ ಬಗ್ಗೆ ಅರಿತುಕೊಂಡಿದ್ದಾರೆ. ಕಾಡಾನೆಗಳ ಸಮಸ್ಯೆ., ಕಾಡ್ಗಿಚ್ಚು ಸಂಭವಿಸಿದಾಗ ಸಿಂಬದಿಗಳು ತಮ್ಮ ಜೀವವನ್ನೇ ಪಣಕ್ಕಿಡುವ ರೀತಿ ಹೀಗೆ ಸಾಕಷ್ಟು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿರುವ ಖ್ಯಾತ ನಿರ್ದೇಶಕ ರಿಷಭ್ ಶೆಟ್ಟಿ ಇದಕ್ಕೆಲ್ಲಾ ಒಂದು ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಸಿಎಂ ಬೊಮ್ಮಾಯಿಯನ್ನು ಭೇಟಿಯಾಗಿ ಅವರಿಗೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.
ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ,ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಶ್ರೀ @BSBommai ಯವರಿಗೆ ಧನ್ಯವಾದಗಳು.@CMofKarnataka @aranya_kfd pic.twitter.com/VRL9YDDZcg
Advertisement— Rishab Shetty (@shetty_rishab) March 8, 2023
ಹಾಗೆ ಇದಕ್ಕೆ ಸ್ಪಂದಿಸಿರುವ ಸಿಎಂ ಅವರು ರಿಷಬ್ ಶೆಟ್ಟಿಯವರ ಮನವಿಯನ್ನು ಆದಷ್ಟು ಬೇಗ ಗಣನೆಗೆ ತೆಗೆದುಕೊಂಡು, ಕಾಡು ಅಂಚಿನ ಜನರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ.