ದ ರೂರಲ್ ಮಿರರ್.ಕಾಂ ನಲ್ಲಿ “ಹೊಸರುಚಿ” ಯ ಮೂಲಕ ಹಲಸು ಅಡುಗೆಯ ಮೂಲಕ ಗಮನ ಸೆಳೆದಿದ್ದು ದಿವ್ಯ ಮಹೇಶ್ ಅವರಿಗೆ “ಪಾಕಪ್ರವೀಣೆ” ಎಂಬ ಪ್ರಶಸ್ತಿ ಈಚೆಗೆ ಲಭ್ಯವಾಗಿದೆ. “ಆಹಾರಸ್ನೇಹಿ” ಎಂಬ ಪೇಜಿನಲ್ಲಿ 700 ಕ್ಕೂ ಮಿಕ್ಕಿದ ವಿವಿಧ ಅಡುಗೆ ತಯಾರಿಯ ಬಗ್ಗೆ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ನಮ್ಮ ಅಡುಗೆ ಅರಮನೆ ಪೇಜ್ ನಲ್ಲಿ ಕೂಡಾ 800 ಕ್ಕು ಅಧಿಕ ರೆಸಿಪಿ ಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದರು. ವಿವಿಧ ಬಗೆಯ ಅಡುಗೆಯ ಮೂಲಕ ಗಮನಸೆಳೆದಿರುವ ದಿವ್ಯ ಮಹೇಶ್ ಅವರಿಗೆ ಫುಡ್ ಡೆಕೋರೇಟಿವ್ ರಾಣಿ, ಉತ್ತಮ ಸಾರಥಿ , ಜಾಗೇರಿ ಕಾಂ, ನೆಸ್ಲೇ ಕಂಪನಿ , ಹಾಗೇ ಹಲಸಿನ ರೆಸಿಪಿ ಪೋಸ್ಟ್ ನಲ್ಲಿ ಕೂಡ ಬಹುಮಾನ ಗಳು ಲಭಿಸಿವೆ. ದ ರೂರಲ್ ಮಿರರ್.ಕಾಂ ನಲ್ಲಿ ಕಳೆದ ಸುಮಾರು 50 ದಿನಗಳಿಂದ ಹಲಸು ಅಡುಗೆ ಮನೆಗೆ ಎಂಬ ವಿಷಯದ ಹಿನ್ನೆಲೆಯಲ್ಲಿ ನಿರಂತರವಾಗಿ ಹಲಸು ರೆಸಿಪಿಗಳನ್ನು ಬರೆಯುತ್ತಿದ್ದಾರೆ. ಎಳೆ ಹಲಸು, ಹಲಸು, ಹಲಸಿನ ಹಣ್ಣು, ಹಲಸಿನ ಬೀಜ, ನೀರುಸೊಳೆ ಹೀಗೆ ಹಲಸು ಅಡುಗೆ ಮನೆಗೆ ಪ್ರವೇಶಿಸುವ ಹಾಗೂ ಆಹಾರವಾಗಿ ಹೇಗೆಲ್ಲಾ ಬಳಕೆ ಮಾಡಬಹುದು ಎಂಬುದರ ಬಗ್ಗೆ ಬರೆಯುತ್ತಿದ್ದಾರೆ. 

