Opinion

ನಾಡಿನೆಲ್ಲೆಡೆ ಇಂದು ದೀಪಾವಳಿಯ ಸಂಭ್ರಮ | ಹಾಗಾದ್ರೆ ದೀಪಾವಳಿಯ ವಿಶೇಷತೆ ಏನು..?

Share

ದೀಪಾವಳಿ(Deepavali)ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ.

Advertisement

ಇದರಲ್ಲಿ ಬರುವ ದಿನಗಳು : ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಕಾರ್ತಿಕ ಶುಕ್ಲ ಪ್ರತಿಪದೆ (ಬಲಿಪ್ರತಿಪದೆ) ಹೀಗೆ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಗಣನೆಗೆ ತೆಗೆದುಕೊಳ್ಳದೇ ದೀಪಾವಳಿಯು ಮೂರು ದಿನಗಳದ್ದಾಗಿದೆ ಎಂದು ನಂಬುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆ ಈ ದಿನಗಳು ದೀಪಾವಳಿಗೆ ಹೊಂದಿಕೊಂಡೇ ಬರುವುದರಿಂದ ಇವುಗಳನ್ನು ದೀಪಾವಳಿಯಲ್ಲಿಯೇ ಸಮಾವೇಶಗೊಳಿಸಲಾಗುತ್ತದೆ. ಆದರೆ ಈ ಹಬ್ಬಗಳು ಬೇರೆಬೇರೆಯಾಗಿವೆ.

ಇತಿಹಾಸ : ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಮರಳಿ ಅಯೋಧ್ಯೆಗೆ ಬಂದನು. ಆಗ ಪ್ರಜೆಗಳು ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವ ಪ್ರಾರಂಭವಾಯಿತು.

ದೀಪಾವಳಿಯ ಭಾವಾರ್ಥ : ‘ಶ್ರೀಕೃಷ್ಣನು ಅಸುರೀ ವೃತ್ತಿಯ ನರಕಾಸುರನನ್ನು ವಧಿಸಿ ಜನರಿಗೆ ಭೋಗವೃತ್ತಿ, ಲಾಲಸೆ, ಅನಾಚಾರ ಮತ್ತು ದುಷ್ಟಪ್ರವೃತ್ತಿಗಳಿಂದ ಮುಕ್ತಗೊಳಿಸಿದನು ಮತ್ತು ಪ್ರಭುವಿನ ವಿಚಾರ (ದೈವೀವಿಚಾರ) ಗಳನ್ನು ನೀಡಿ ಸುಖಿಯಾಗಿಸಿದನು, ಅದುವೇ ಈ ‘ದೀಪಾವಳಿ’. ನಾವು ವರ್ಷಾನುವರ್ಷಗಳಿಂದ ಕೇವಲ ಒಂದು ರೂಢಿ ಎಂದು ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಇಂದು ಅದರ ಗೂಢಾರ್ಥವು ಲೋಪವಾಗಿದೆ. ಈ ಗೂಢಾರ್ಥವನ್ನು ತಿಳಿದುಕೊಂಡು ಅದರಿಂದ ಅಭಿಮಾನವು ಜಾಗೃತವಾದಲ್ಲಿ ಅಜ್ಞಾನರೂಪೀ ಅಂಧಃಕಾರದ, ಹಾಗೆಯೇ ಭೋಗವೃತ್ತಿ ಮತ್ತು ಅನಾಚಾರೀ, ಅಸುರಿ ವೃತ್ತಿಯಿರುವ ಜನರ ಪ್ರಾಬಲ್ಯವು ಕಡಿಮೆಯಾಗಿ ಸಜ್ಜನಶಕ್ತಿಯ ಮೇಲಿನ ಅವರ ವರ್ಚಸ್ಸು ಕಡಿಮೆಯಾಗುವುದು.

ದೀಪಾವಳಿಯ ಸ್ವರೂಪ

೧. ದೀಪಗಳ ಅಲಂಕಾರ :ದೀಪಾವಳಿಯಂದು ಸಾಯಂಕಾಲ ಮನೆಯೊಳಗೆ ಮತ್ತು ಹೊರಗೆ ಸಾಲಾಗಿ ದೀಪಗಳನ್ನು ಹಚ್ಚಿಡಬೇಕು. ದೀಪಾವಳಿ ಎಂದರೆ ದೀಪಗಳ ಸಾಲು. ಇದರಿಂದ ಮನೆಗೆ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹವು ಬರುತ್ತದೆ ಮತ್ತು ಆನಂದವಾಗುತ್ತದೆ. ವಿದ್ಯುತ್‌ದೀಪಗಳ ಮಾಲೆಗಳನ್ನು ಹಚ್ಚುವುದಕ್ಕಿಂತ ಎಣ್ಣೆ ಮತ್ತು ಬತ್ತಿಯ ಹಣತೆಗಳನ್ನು ಹಚ್ಚುವುದರಲ್ಲಿ ಹೆಚ್ಚಿನ ಶೋಭೆ ಮತ್ತು ಶಾಂತಿಯಿರುತ್ತದೆ. ‘ದೀಪ’ ಎನ್ನುವ ಶಬ್ದದ ನಿಜವಾದ ಅರ್ಥವು ಎಣ್ಣೆ ಮತ್ತು ಬತ್ತಿಯ ಜ್ಯೋತಿ ಎಂದಾಗಿದೆ. ‘ಅಂಧಃಕಾರದಿಂದ ಜ್ಯೋತಿಯೆಡೆಗೆ ಅಂದರೆ ಪ್ರಕಾಶದೆಡೆಗೆ ಹೋಗು’ ಎನ್ನುವುದು ಶ್ರುತಿಯ ಆಜ್ಞೆಯಾಗಿದೆ. ‘ತಮಸೋ ಮಾ ಜ್ಯೋತಿರ್ಗಮಯ|’ ದೀಪಾವಳಿಯ ದಿನಗಳಲ್ಲಿ ಯಾರ ಮನೆಯಲ್ಲಿ ದೀಪಗಳನ್ನು ಹಚ್ಚುವುದಿಲ್ಲವೋ, ಅವರ ಮನೆಯಲ್ಲಿ ಯಾವಾಗಲೂ ಅಂಧಃಕಾರವೇ ಇರುತ್ತದೆ. ಅವರು ಪ್ರಕಾಶದೆಡೆಗೆ ಅಂದರೆ ಜ್ಞಾನದೆಡೆಗೆ ಹೋಗಲಾರರು. ದೀಪದಾನದಿಂದ ಲಕ್ಷ್ಮೀಯು ಸ್ಥಿರವಾಗುತ್ತಾಳೆ. ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀಯ ವಾಸ ಮತ್ತು ಜ್ಞಾನದ ಪ್ರಕಾಶವಿರಬೇಕೆಂದು ಪ್ರತಿಯೊಬ್ಬರೂ ಆನಂದದಿಂದ ದೀಪಾವಳಿ ಉತ್ಸವವನ್ನು ಆಚರಿಸಬೇಕು. ಇದರಿಂದ ಮನೆಯಲ್ಲಿ ಸುಖಸಮೃದ್ಧಿ ಇರುತ್ತದೆ.

೨. ಆಕಾಶದೀಪ : ಇದು ದೀಪಾಲಂಕಾರದ ಒಂದು ಭಾಗವಾಗಿದೆ. ಆಶ್ವಯುಜ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯ ವರೆಗೆ ಮನೆಯ ಹೊರಗೆ ಒಂದು ಎತ್ತರವಾದ ಕಂಬವನ್ನು ನಿಲ್ಲಿಸಿ ಅದರ ಮೇಲೆ ಹಗ್ಗದ ಸಹಾಯದಿಂದ ತೂಗುಹಾಕುವ ದೀಪಕ್ಕೆ ‘ಆಕಾಶದೀಪ’ ಎನ್ನುತ್ತಾರೆ. ಅದರ ವಿಧಿಯು ಮುಂದಿನಂತಿದೆ. ಮನೆಯ ಹತ್ತಿರದಲ್ಲಿಯೇ ಸ್ವಲ್ಪ ಜಾಗವನ್ನು ಗೋಮಯದಿಂದ ಸಾರಿಸಬೇಕು. ಅದರ ಮೇಲೆ ಚಂದನಯುಕ್ತ ಜಲವನ್ನು ಸಿಂಪಡಿಸಿ ಅಷ್ಟದಳ ಕಮಲವನ್ನು ಬಿಡಿಸಬೇಕು. ಅದರ ಮಧ್ಯಭಾಗದಲ್ಲಿ ೨೦, ೯ ಅಥವಾ ೫ ಕೈ ಅಳತೆಯ ಕಂಬವನ್ನು ನೆಡಬೇಕು. ಅದನ್ನು ವಸ್ತ್ರ, ಪತಾಕೆ, ಅಷ್ಟಘಂಟೆ ಮತ್ತು ಕಲಶ ಇವುಗಳಿಂದ ಅಲಂಕರಿಸಬೇಕು. ಅದರ ಮೇಲೆ ಅಷ್ಟದಳಾಕೃತಿ ಆಕಾಶದೀಪವನ್ನು (ಕಂದೀಲನ್ನು) ನೇತಾಡಿಸಬೇಕು. ಅದರಲ್ಲಿ ದೊಡ್ಡ ದೀಪವನ್ನು ಉರಿಸಿಡಬೇಕು. ಅದರ ಸುತ್ತಲೂ ಕಮಲದ ಪ್ರತಿಯೊಂದು ದಳದಲ್ಲಿ ಒಂದರಂತೆ ಎಂಟು ದೀಪಗಳನ್ನು ಧರ್ಮ, ಹರ, ಭೂತಿ, ದಾಮೋದರ, ಧರ್ಮರಾಜ, ಪ್ರಜಾಪತಿ, ಪಿತೃ ಮತ್ತು ಪ್ರೇತ ಇವರನ್ನುದ್ದೇಶಿಸಿ ಇಡಬೇಕು. ದೀಪಗಳಲ್ಲಿ ಎಳ್ಳೆಣ್ಣೆಯನ್ನು ಹಾಕಬೇಕು. ಅನಂತರ ಆಕಾಶದೀಪಕ್ಕೆ ಪಂಚೋಪಚಾರ ಪೂಜೆಯನ್ನು ಮಾಡಿ ಅದನ್ನು ಮುಂದಿನ ಮಂತ್ರೋಚ್ಚಾರದಿಂದ ಮೇಲಕ್ಕೇರಿಸಬೇಕು. ದಾಮೋದರಾಯ ನಭಸಿ ತುಲಾಯಾಂ ದೋಲಯಾ ಸಹ| ಪ್ರದೀಪಂ ತೇ ಪ್ರಯಚ್ಛಾಮಿ ನಮೋನಂತಾಯ ವೇಧಸೇ|| ಅರ್ಥ : ಶ್ರೇಷ್ಠ ಪರಮೇಶ್ವರನಾದ ದಾಮೋದರನಿಗೆ ಈ ಜ್ಯೋತಿಸಹಿತ ಆಕಾಶದೀಪವನ್ನು ಅರ್ಪಿಸುತ್ತೇನೆ. ಆ ತೇಜಸ್ವೀ ಅನಂತನಿಗೆ ನಾನು ನಮಸ್ಕರಿಸುತ್ತೇನೆ. ಇದರ ಫಲವು ಲಕ್ಷ್ಮೀಪ್ರಾಪ್ತಿಯಾಗಿದೆ.

ದೀಪಾವಳಿಯಂದು ಆಕಾಶದೀಪವನ್ನು ತೂಗಾಡಿಸುವುದರ ಹಿಂದಿನ ಶಾಸ್ತ್ರ

೧. ಮನೆಯ ಹೊರಗೆ ತೂಗಾಡಿಸಿದ ಆಕಾಶ ದೀಪದಲ್ಲಿನ ತೇಜತತ್ತ್ವದ ಲಹರಿಗಳು ಪಾತಾಳದಿಂದ ಮನೆಯೊಳಗೆ ಬರುವ ಆಪಮಯ ಲಹರಿಗಳನ್ನು ತಡೆಯುವುದು ದೀಪಾವಳಿಯ ಸಮಯದಲ್ಲಿ ಆಪಮಯ ತತ್ತ್ವತರಂಗಕ್ಕೆ ಸಂಬಂಧಿಸಿದ ಅಧೋಗಾಮಿ ಲಹರಿಗಳು ಊರ್ಧ್ವ ದಿಕ್ಕಿನಲ್ಲಿ ಪ್ರಕ್ಷೇಪಣೆಯಾಗಲು ಆರಂಭವಾಗುತ್ತವೆ. ಆದುದರಿಂದ ಪೂರ್ಣ ವಾತಾವರಣದಲ್ಲಿ ಜಡತ್ವವು ನಿರ್ಮಾಣವಾಗಿ ಕೆಟ್ಟ ಘಟಕಗಳ ಪ್ರಭಾವ ಹೆಚ್ಚಾದುದರಿಂದ ಮನೆಯಲ್ಲಿ ಜಡತ್ವವು ಸೇರಿಕೊಂಡು ಪೂರ್ಣ ವಾಸ್ತು ದೂಷಿತವಾಗುತ್ತದೆ. ಇದನ್ನು ತಡೆಯುವುದಕ್ಕಾಗಿ ದೀಪಾವಳಿಯ ಮುಂಚಿನ ದಿನದಿಂದಲೇ ಮನೆಯ ಹೊರಗೆ ಆಕಾಶದೀಪವನ್ನು ಹಚ್ಚುತ್ತಾರೆ. ಆಕಾಶದೀಪದಲ್ಲಿ ತೇಜತತ್ತ್ವದ ಸಮಾವೇಶವಿರುವುದರಿಂದ ಊರ್ಧ್ವ ದಿಕ್ಕಿನಿಂದ ಕಾರ್ಯನಿರತವಾಗುವ ಆಪಮಯ ಲಹರಿಗಳು ಹತೋಟಿಗೆ ಬಂದು ತೇಜತತ್ತ್ವದ ಜಾಗೃತಿದರ್ಶಕ ಲಹರಿಗಳು ಮನೆಯಲ್ಲಿ ವರ್ತುಲಾತ್ಮಕವಾಗಿ ಸಂಚರಿಸುತ್ತವೆ; ಹಾಗಾಗಿ ಮನೆಯ ಹೊರಗೆ ಆಕಾಶದೀಪವನ್ನು ಹಾಕುತ್ತಾರೆ.

೨. ಆಕಾಶದೀಪದಿಂದ ಬ್ರಹ್ಮಾಂಡದಲ್ಲಿ ಸಂಚರಿಸುತ್ತಿರುವ ಲಕ್ಷ್ಮೀತತ್ತ್ವ ಮತ್ತು ಪಂಚತತ್ತ್ವ ಇವುಗಳ ಲಾಭವಾಗುವುದು : ದೀಪಾವಳಿಯ ಸಮಯದಲ್ಲಿ ಬ್ರಹ್ಮಾಂಡದಲ್ಲಿ ಕೆಟ್ಟ ಘಟಕಗಳ ನಿರ್ಮೂಲನೆಗಾಗಿ ಶ್ರೀ ಲಕ್ಷಿ ತತ್ತ್ವ ಕಾರ್ಯನಿರತವಾಗಿರು ತ್ತದೆ. ಈ ತತ್ತ್ವದ ಲಾಭ ಪಡೆಯಲು ಪಂಚತತ್ತ್ವದ ಎಲ್ಲ ಸ್ತರಗಳನ್ನು ಒಂದು ಕಡೆ ಮಾಡಿ ಅದಕ್ಕೆ ವಾಯುತತ್ತ್ವದ ಗತಿಮಾನತೆಯ ಆಕರ್ಷಣೆಯಿಂದ ಆಕಾಶ ಟೊಳ್ಳಿನ ಸಂಚಾರದಿಂದ ಗ್ರಹಣ ಮಾಡಲಾಗುತ್ತದೆ. ಇದಕ್ಕಾಗಿ ಆಕಾಶದೀಪ ಮನೆಯ ಹೊರಗೆ ಎತ್ತರದ ಸ್ಥಳದಲ್ಲಿ ಹಾಕಲಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿ ಸಂಚಾರವಾಗುವ ತತ್ತ್ವದ ಲಾಭವಾಗುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು

ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…

18 hours ago

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…

20 hours ago

ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |

ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…

20 hours ago

ಹೊಸರುಚಿ | ಗುಜ್ಜೆ ಕಡಲೆ ಗಸಿ

ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…

20 hours ago

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …

20 hours ago

ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ನ  ಹಣಕಾಸು ನೀತಿ ಸಮಿತಿ ಹಲವು  ಮಹತ್ವದ ನಿರ್ಧಾರಗಳನ್ನು…

21 hours ago