ಇಂದಿನ ಸಭೆಯಲ್ಲಿ ಸಚಿವ ಪಟ್ಟಿ ಫೈನಲ್ ಆಗಿದ್ದು, ಆದರೆ ಅಧಿಕೃತವಾಗಿ ರಿಲೀಸ್ ಮಾಡಿಲ್ಲ. ಏಕೆಂದರೆ ಈಗಲೂ ಸಣ್ಣಪುಟ್ಟ ಹಗ್ಗಜಗ್ಗಾಟ ದೆಹಲಿಯಲ್ಲಿ ನಡೆದಿದೆಯಂತೆ. ಎಐಸಿಸಿ ವಾರ್ ರೂಮ್ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಹಲವು ನಾಯಕರು ಭಾಗಿಯಾಗಿದ್ದರು. ಸಭೆಯ ಬಳಿಕ ಎಐಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪಟ್ಟಿಗೆ ಅಂತಿಮ ಮುದ್ರೆ ಹಾಕಿದ್ದು, 24 ಸಚಿವರ ಪಟ್ಟಿ ಅಂತಿಮ ಗೊಳಿಸಲಾಗಿದೆಯಂತೆ.
ಶನಿವಾರ 11:45ಕ್ಕೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿದ್ದು ಸರ್ಕಾರ ಮನವಿ ಪುರಸ್ಕರಿಸಿದ ರಾಜ್ಯಪಾಲ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel