ಮಂಗಳೂರಿನಲ್ಲಿ ದ ಕ ಜಿಲ್ಲಾ ಮಟ್ಟದ ಚೆಸ್‌ ಪಂದ್ಯಾಟ |

June 10, 2024
1:00 PM

ದಕ್ಷಿಣ ಕನ್ನಡ ಜಿಲ್ಲಾ ಚೆಸ್‌ ಎಸೋಸಿಯೇಶನ್‌ ವತಿಯಿಂದ ಮಂಗಳೂರಿನ ಅಶೋಕನಗರದಲ್ಲಿರುವ ಎಸ್‌ಡಿಎಂ ಶಾಲೆಯ ವಠಾರದಲ್ಲಿ ದ ಕ ಜಿಲ್ಲಾ ಮಟ್ಟದ ಚೆಸ್‌ ಪಂದ್ಯಾಟ ನಡೆಯಿತು. ಪಂದ್ಯಾಟವನ್ನು ಎಸ್‌ಡಿಎಂ ಶಾಲೆಯ ಸಂಚಾಲಕಿ ಶ್ರುತ ಜಿತೇಶ್‌ ಉದ್ಘಾಟಿಸಿದರು.…….ಮುಂದೆ ಓದಿ…..

ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ನಾರಾಯಣ್‌ ಹಾಗೂ ಚೆಸ್‌ ತರಬೇತುದಾರರಾದ ಪ್ರೀತಿ ಭಟ್ ಭಾಗವಹಿಸಿದ್ದರು. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಚೆಸ್‌ ಎಸೋಸಿಯೇಶನ್‌ ಅಧ್ಯಕ್ಷ ರಮೇಶ್‌ ಕೋಟೆ, ಕಾರ್ಯದರ್ಶಿ ಅಭಿಷೇಕ್‌ ಕಟ್ಟೆಮಾರು, ಕೋಶಾಧಿಕಾರಿ ಪೂರ್ಣಿಮಾ ಆಳ್ವ, ಉಪಾಧ್ಯಕ್ಷ ವಾಣಿ ಪಣಿಕ್ಕರ್‌, ವಿಪಿ ಆಶೀರ್ವಾದ್, ಜೊತೆ ಕಾರ್ಯದರ್ಶಿ ಸತ್ಯಪ್ರಸಾದ್‌, ಜೊತೆ ಕೋಶಾಧಿಕಾರಿ ರಮ್ಯ ರೈ ಮೊದಲಾದವರು ಇದ್ದರು. ಪಂದ್ಯಾಟದಲ್ಲಿ ದ ಕ ಜಿಲ್ಲೆಯ 150 ಕ್ಕೂ ಅಧಿಕ ಮಂದಿ ಸ್ಫರ್ಧಾಳುಗಳು ಭಾಗವಹಿಸಿದ್ದರು.…….ಮುಂದೆ ಓದಿ…..

ಚೆಸ್‌ದ ಮೂಲಕ ಮಕ್ಕಳ ಯೋಚನಾಶಕ್ತಿ ಬೆಳವಣಿಗೆಯಾಗುತ್ತದೆ. ಸೋಲು-ಗೆಲುವಿನ ಬಗ್ಗೆ ಯೋಚನೆ ಬೇಕಾಗಿಲ್ಲ. ಅನುಭವಗಳು ಮಕ್ಕಳನ್ನು ಗಟ್ಟಿ ಮಾಡುತ್ತದೆ. ಆಟದಲ್ಲಿ ಎದುರಾಳಿಯ ಯೋಚನೆಯ ಬಗ್ಗೆಯೂ ಅರಿವು ಮೂಡುತ್ತದೆ. ಹೀಗಾಗಿ ಚೆಸ್‌ ಆಟವು ಸರ್ವತೋಮುಖವಾದ ಬೆಳವಣಿಗೆಗೆ ಕಾರಣವಾಗುತ್ತದೆ-
– ಶ್ರುತ ಜಿತೇಶ್‌, ಸಂಚಾಲಕಿ , ಎಸ್‌ಡಿಎಂ ಶಾಲೆ ಮಂಗಳೂರು

ದ ಕ ಜಿಲ್ಲಾ ಚೆಸ್‌ ಎಸೋಸಿಯೇಶನ್‌ ಚೆಸ್‌ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಹೆಜ್ಜೆಗಳನ್ನು ಇರಿಸುತ್ತಿದೆ. ಪಂದ್ಯಾಟಗಳನ್ನು ನಡೆಸುವ ಮೂಲಕ ಜಿಲ್ಲೆಯ ಚೆಸ್‌ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುತ್ತಿದೆ. ರಾಜ್ಯಮಟ್ಟದಲ್ಲೂ ಇಲ್ಲಿನ ಪ್ರತಿಭೆಗಳು ಗುರುತಿಸವಂತಾಗಬೇಕು
– ರಮೇಶ್‌ ಕೋಟೆ, ಅಧ್ಯಕ್ಷರು, ಡಿಕೆಸಿಎ, ಮಂಗಳೂರು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ
ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು
October 4, 2026
6:47 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ
October 4, 2026
6:37 AM
by: ದ ರೂರಲ್ ಮಿರರ್.ಕಾಂ
ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
October 4, 2026
6:31 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror