ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಡಿಎಂಕೆ ಕೌನ್ಸಿಲರ್ ವಶಕ್ಕೆ ಪಡೆದ ಡಿಆರ್‌ಐ

January 26, 2025
7:14 AM

ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ ಡಿಎಂಕೆ ಕೌನ್ಸಿಲರ್ ಜಾನ್ ಅಲಿಯಾಸ್ ಶ್ರೀನಿವಾಸನ್ ಅವರನ್ನು ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) ವಶಕ್ಕೆ ತೆಗೆದುಕೊಂಡಿದೆ.

Advertisement

ಕಳೆದ ನವೆಂಬರ್‌ ಕೊನೆಯ ವಾರ ಅಡಿಕೆಯನ್ನು ಗೋಡಂಬಿ ಎಂದು ನಮೂದಿಸಿ ಇಂಡೋನೇಶಿಯಾದಿಂದ ತೂತುಕುಡಿ ಬಂದರಿಗೆ ಆಮದು ಮಾಡಿಕೊಂಡಿದ್ದ ಪ್ರಕರಣದಲ್ಲಿ  ಡಿಆರ್‌ಐ ಒಂದು ಕಂಟೇನರ್ ಅನ್ನು ವಶಪಡಿಸಿಕೊಂಡಿತ್ತು. ತನಿಖೆಯ ವೇಳೆ  ಅಡಿಕೆಯನ್ನು ಬೇರೆ ಉತ್ಪನ್ನ ಎಂದು ತಪ್ಪಾಗಿ ಘೋಷಿಸುವ ಮೂಲಕ ಆಮದು ಮಾಡಿಕೊಳ್ಳುವ ವ್ಯಕ್ತಿಗಳ ಗುಂಪಿನ ಬಗ್ಗೆ ಸುಳಿವು ಲಭ್ಯವಾಗಿತ್ತು.

ಅಡಿಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ವಾಣಿಜ್ಯ ಸಚಿವಾಲಯ ವಿಧಿಸಿದ ನಿರ್ಬಂಧಗಳು ಹಾಗೂ ಆಮದು ಸುಂಕಗಳ ಕಾರಣ, ಡಿ ಆರ್‌ ಐ ಗೋಡಂಬಿ ಎಂದು ಘೋಷಿಸಲಾದ ಕಂಟೇನರ್ ಪರಿಶೀಲಿಸಿತು. ಅದನ್ನು ತೆರೆದಾಗ 1.25 ಕೋಟಿ ಮೌಲ್ಯದ 22 ಮೆಟ್ರಿಕ್ ಟನ್ ಅಡಿಕೆ ಪತ್ತೆಯಾಗಿತ್ತು. ಬಳಿಕ ತನಿಖೆಯ ವೇಳೆ  ಶಿಪ್ಪಿಂಗ್ ಕಂಪನಿಯ ಇಬ್ಬರು ಉದ್ಯೋಗಿಗಳು ಸೇರಿದಂತೆ ನಾಲ್ವರನ್ನು ಬಂಧಿಸಲಾಯಿತು. ಹೆಚ್ಚಿನ ವಿಚಾರಣೆಯಲ್ಲಿ ಜಾನ್ ಅಲಿಯಾಸ್ ಶ್ರೀನಿವಾಸನ್ ಕಳ್ಳಸಾಗಣೆ ಕಾರ್ಯಾಚರಣೆಗೆ ಸಂಬಂಧಿಸಿದ್ದು, ಗುರುವಾರ ಡಿ ಆರ್‌ ಐ ವಶಕ್ಕೆ ಪಡೆದಿದೆ ತನಿಖೆ  ಮುಂದುವರಿದಿದೆ.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ
July 4, 2025
10:40 PM
by: The Rural Mirror ಸುದ್ದಿಜಾಲ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ | ಪ್ರವಾಹ ಮತ್ತು ಭೂಕುಸಿತದಿಂದ ತೀವ್ರ ಪರಿಣಾಮ
July 4, 2025
9:22 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಭಾಗಕ್ಕೂ ತಲುಪಿದ ಆಧುನಿಕ ಸಂಸ್ಕೃತಿ | ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿಗಳ ವಿಡಿಯೋ ವೈರಲ್ | ಸೋಶಿಯಲ್‌ ಮೀಡಿಯಾದಲ್ಲಿ ಹಲವರಿಂದ ಅಸಮಾಧಾನ |
July 4, 2025
8:27 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group