ಮೈಸೂರು ಅರಮನೆ ಸಮೀಪ ಪಾರಿವಾಳಗಳಿಗೆ ಆಹಾರ ಹಾಕದಿರಿ….! | ಬೀಳಲಿದೆ ದಂಡ : ತಜ್ಞರು, ಪಕ್ಷಿಪ್ರೇಮಿಗಳಅಭಿಪ್ರಾಯ ಏನು?

June 29, 2024
1:06 PM

ಒಮ್ಮೊಮ್ಮೆ ನಾವು ಪ್ರಾಣಿ ಪಕ್ಷಿಗಳಿಗೆ(Animal-Birds) ತೋರಿಸುವ ಅತಿಯಾದ ಕಾಳಜಿ, ಪ್ರೀತಿ ಕೆಲವು ತೊಂದರೆಗಳಿಗೆ ಕಾರಣವಾಗುತ್ತದೆ. ಈಗ ಮೈಸೂರಿನಲ್ಲಿ(Mysore) ಆಗುತ್ತಿರುವುದು ಅದೇ.. ಪ್ರವಾಸಿಗರು(Tourists), ಸಾರ್ವಜನಿಕರು(Publics) ಪಾರಿವಾಳಗಳಿಗೆ(Pigeon) ಹಾಕುವ ಅತಿಯಾದ ಆಹಾರ ಧಾನ್ಯಗಳ(Food Grains) ವ್ಯರ್ಥದಿಂದ ಹಾಗೂ ಪಾರಿವಾಳಗಳ ಹಿಕ್ಕೆಯಿಂದ ಇಲ್ಲಿನ ವಿಶ್ವವಿಖ್ಯಾತ ಮೈಸೂರು ಅರಮನೆಯ(Mysore Palace) ಸ್ವಚ್ಛತೆ(Clean) ಹಾಗೂ ಸೌಂದರ್ಯ(Beauty) ಹಾಳಾಗುತ್ತಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ(DC) ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಗತಿ ಪ್ರತಿಷ್ಠಾನದ ಅಧ್ಯಕ್ಷ ಅಜಯ್ ಕುಮಾರ್ ಜೈನ್ ‘ಈಟಿವಿ ಭಾರತ್​’ ಜೊತೆ ಮಾತನಾಡಿ, ಅರಮನೆಯ ಸಮೀಪದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದೆದುರು ಜನರು ಪಕ್ಷಿಗಳಿಗೆ ಒಂದು ಮುಷ್ಟಿ ಧಾನ್ಯ ಹಾಕುವ ಪದ್ಧತಿ ಹಿಂದಿನಿಂದಲೂ ಇದೆ. ಆದರೆ ಇತ್ತೀಚೆಗೆ ಜನರು ಹೆಚ್ಚಾಗಿ ಧಾನ್ಯಗಳನ್ನು ತಂದು ಹಾಕುತ್ತಿದ್ಧಾರೆ. ಇದರಿಂದ ಪಾರಿವಾಳಗಳು ಅಲ್ಲೇ ಬೀಡುಬಿಟ್ಟು, ಅರಮನೆ ಮೇಲೆ ಕುಳಿತು ಹಿಕ್ಕೆ ಹಾಕುತ್ತಿವೆ. ಹೀಗಾಗಿ ಅಲ್ಲಿ ಒಂದೇ ಕಡೆ ಧಾನ್ಯಗಳನ್ನು ಹಾಕುವ ಬದಲು ಬೇರೆ ಬೇರೆ ಕಡೆ ಸ್ಪಲ್ವ ಪ್ರಮಾಣದಲ್ಲಿ ಹಾಕಿದರೆ ಪಕ್ಷಗಳು ಬಂದು ತಿಂದುಕೊಂಡು ಹೋಗುತ್ತವೆ. ದಿಢೀರ್​ ಎಂದು ಈಗ ಧಾನ್ಯಗಳನ್ನು ಹಾಕುವುದನ್ನು ನಿಲ್ಲಿಸಿದರೆ ಅಲ್ಲೇ ಬೀಡುಬಿಟ್ಟಿರುವ ಪಾರಿವಾಳಗಳಿಗೆ ತೊಂದರೆಯಾಗಲಿದೆ” ಎಂದು ಹೇಳಿದರು.

ವನ್ಯಜೀವಿ ತಜ್ಞ ರಾಜ​ಕುಮಾರ್ ದೇವರಾಜ್ ಅರಸ್ ಮಾತನಾಡಿ, “ಎಲ್ಲಾ ಪ್ರಾಣಿ-ಪಕ್ಷಿಗಳಿಗೂ ಆಹಾರ ಮತ್ತು ಸಂತಾನೋತ್ಪತ್ತಿ ಜೀವನಕ್ರಮವಾಗಿರುತ್ತದೆ. ಮನುಷ್ಯರು ಸೇವಿಸುವ ಆಹಾರದಲ್ಲಿ ಹೆಚ್ಚು ಪ್ರೋಟೀನ್​ ಅಂಶ ಇರುತ್ತದೆ. ಇದು ಪಕ್ಷಿಗಳಿಗೆ ಬೇಕಿಲ್ಲ. ನಾವು ಅಲ್ಲಿ ಅವುಗಳಿಗೆ ಆಹಾರ ಹಾಕುವುದನ್ನು ಬಿಟ್ಟರೆ ಅವೇ ತಮ್ಮ ಆಹಾರ ಅರಸಿಕೊಂಡು ಹೋಗುತ್ತವೆ. ಅರಮನೆ ಸುತ್ತಾಮುತ್ತ ಮನುಷ್ಯರೇ ಇರುವುದರಿಂದ ಅವುಗಳಿಗೆ ಬೇರೆ ಪ್ರಾಣಿ – ಪಕ್ಷಿಗಳಿಂದ ಅಪಾಯವಿಲ್ಲ. ಹೀಗಾಗಿ ಅಲ್ಲಿ ಪಾರಿವಾಳ ಸಂತಾನೋತ್ಪತಿ ಹೆಚ್ಚಾಯ್ತು. ಪಾರಿವಾಳ ಹಿಕ್ಕೆಯಲ್ಲಿ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ. ಹೀಗಾಗಿ ಅವು ಪಾರಂಪರಿಕ ಮತ್ತು ಇತರೆ ಕಟ್ಟಡ ಮೇಲೆ ಹಿಕ್ಕೆ ಹಾಕಿದರೆ ಹಾನಿಯಾಗುತ್ತದೆ. ನಾವು ತಿನ್ನುವ ಆಹಾರವನ್ನು ಪ್ರಾಣಿ – ಪಕ್ಷಿಗಳಿಗೆ ನೀಡುವ ಅವಶ್ಯಕತೆ ಇಲ್ಲ. ಜಿಲ್ಲಾಧಿಕಾರಿಗಳು ಕ್ರಮಕ್ಕೆ ಸೂಚನೆ ನೀಡಿರುವುದು ಒಳ್ಳೆಯದು” ಎಂದು ಅಭಿಪ್ರಾಯಪಟ್ಟರು.

ದಂಡ ಹಾಕುವ ನಿಯಮ ತರಬೇಕು: ಪ್ರಾಣಿ ಸಂರಕ್ಷಕ ಪ್ರದೀಪ್​ ಮಾತನಾಡಿ, “ಮೈಸೂರು ಪಾರಿವಾಳಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಬೇರೆ ಪಕ್ಷಿಗಳೂ ತೊಂದರೆಯಾಗುತ್ತಿದೆ. ಇಲ್ಲಿ ಕಾಗೆ, ಮೈನಾ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಇವು ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದ್ದರಿಂದ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಲ್ಲಿಸಿದರೆ ಒಳ್ಳೆಯದು. ಮಹಾರಾಷ್ಟ್ರದ ಆರೋಗ ಸಂಸ್ಥೆ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಿದೆ. ಉಲ್ಲಂಘಿಸಿದವರಿಗೆ 500 ರೂಪಾಯಿ ದಂಡ ಹಾಕುತ್ತಿದ್ದಾರೆ. ಇಂತಹ ನಿಯಮವನ್ನು ಇಲ್ಲಿಯೂ ಜಾರಿಗೆ ತರಬೇಕು” ಎಂದು ಮನವಿ ಮಾಡಿದರು.

ಪಕ್ಷಿಪ್ರೇಮಿ ಶಿವು ಮಾತನಾಡಿ, “ಪಾರಿವಾಳಗಳ ಸಂಖ್ಯೆ ಹೆಚ್ಚಾದರೆ ಇತರೆ ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಇದರಿಂದ ನಾವು ಪಾರಿವಾಳಗಳಿಗೆ ಆಹಾರ ಹಾಕದಿದ್ದರೆ ಅವು ಆಹಾರವನ್ನು ಹುಡುಕಿಕೊಂಡು ಹೋಗುತ್ತವೆ. ಸ್ವಾಭಾವಿಕವಾಗಿ ಅವುಗಳ ಸಂಖ್ಯೆ ಇರುತ್ತದೆ. ಅತಿಯಾಗಿ ಆಹಾರ ನೀಡಿದರೆ ಅವುಗಳೂ ಮತ್ತು ನಮಗೂ ತೊಂದರೆಯಾಗುತ್ತದೆ. ಅರಮನೆ ಅಂದವನ್ನು ಕಾಪಾಡಬೇಕು ಎಂದರೆ ಪಾರಿವಾಳಗಳಿಗೆ ಆಹಾರ ಹಾಕಬಾರದು” ಎಂದು ಹೇಳಿದರು.

ಪುರಾತತ್ವ ಇಲಾಖೆಯ ಆಯುಕ್ತ ದೇವರಾಜು ಮಾತನಾಡಿ, “ಅರಮನೆಯ ಬಲರಾಮ ದ್ವಾರದ ಬಳಿ ಪಾರಿವಾಳಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳಿಗೆ ಸಾರ್ವಜನಿಕರು ಹೆಚ್ಚಾಗಿ ಆಹಾರ ಹಾಕುವುದರಿಂದ ಇಲ್ಲಿದೆ ಬರುತ್ತಿವೆ. ನಂತರ ಅರಮನೆಯ ಬಳಿ ಕುಳಿತು ಹಿಕ್ಕೆ ಹಾಕುತ್ತಿವೆ. ಇದರಿಂದ ಅರಮನೆಯ ಅಂದಕ್ಕೆ ಹಾನಿಯಾಗುತ್ತಿದೆ. ಈ ಸಂಬಂಧ ಪಾರಿವಾಳಗಳಿಗೆ ಆಹಾರ ಹಾಕದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಅದರಂತೆ ಅವರು ಕ್ರಮಕ್ಕೆ ಸೂಚನೆ ನೀಡಿದ್ದಾರೆ” ಎಂದು ತಿಳಿಸಿದರು.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror