#Constipation | ಮಲಬದ್ಧತೆ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಬೇಡ | ಆಯುರ್ವೇದದಲ್ಲಿದೆ ಸುಲಭ ಪರಿಹಾರ

August 22, 2023
1:07 PM
ನಾವು ಸೇವಿಸಿದ ಆಹಾರ ಸಣ್ಣ ಮತ್ತು ದೊಡ್ಡ ಕರುಳಿನಲ್ಲಿ ಜೀರ್ಣವಾಗಿ ಹೊರಬರಬೇಕು. ಕೆಲವರಲ್ಲಿ ಈ ಪ್ರಕ್ರಿಯೆ ಸರಿಯಾಗಿ ಆಗದೆ ದೊಡ್ಡ ಕರುಳಿನ ಚಲನೆಯಲ್ಲಿ ತೊಡಕು ಉಂಟಾಗಿ ಮಲ ಹೊರಗೆ ಬರುವುದಿಲ್ಲ. ಇದರಿಂದ ಮಲಬದ್ಧತೆ ಉಂಟಾಗಿ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಸಾಮಾನ್ಯವಾಗಿ ನಾವು ಸೇವಿಸುವ ಆಹಾರದಲ್ಲಿ ನಾರಿನ  ಅಂಶದ ಕೊರತೆ ಮತ್ತು ಸರಿಯಾಗಿ ನೀರು ಕುಡಿಯದೆ ಇದ್ದರೆ ಮಲಬದ್ಧತೆ ಉಂಟಾಗುತ್ತದೆ. ಆರೋಗ್ಯಕರ ಜೀವನ ಶೈಲಿ, ದೈಹಿಕ ವ್ಯಾಯಾಮ  ಮತ್ತು ವಾಕಿಂಗ್  ಮಾಡದೇ ಇರುವುದು, ಮತ್ತು ಅತಿಯಾಗಿ ಜಂಕ್ ಫುಡ್ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಇದು ಜೀರ್ಣಕ್ರಿಯೆ ಸಂಬಂಧಪಟ್ಟ ಸಮಸ್ಯೆ.

Advertisement
Advertisement

ನಾವು ಸೇವಿಸಿದ ಆಹಾರ ಸಣ್ಣ ಮತ್ತು ದೊಡ್ಡ ಕರುಳಿನಲ್ಲಿ ಜೀರ್ಣವಾಗಿ ಹೊರಬರಬೇಕು. ಕೆಲವರಲ್ಲಿ ಈ ಪ್ರಕ್ರಿಯೆ ಸರಿಯಾಗಿ ಆಗದೆ ದೊಡ್ಡ ಕರುಳಿನ ಚಲನೆಯಲ್ಲಿ ತೊಡಕು ಉಂಟಾಗಿ ಮಲ ಹೊರಗೆ ಬರುವುದಿಲ್ಲ. ಇದನ್ನು ಮಲಬದ್ಧತೆ ಎನ್ನಲಾಗುತ್ತದೆ. ಇದು ಒಂದೆರಡು ದಿನಗಳಿಂದ ಹಿಡಿದು ತಿಂಗಳು ವರ್ಷಗಳವರೆಗೂ ಕಾಡುವ ಸಮಸ್ಯೆಯಾಗಿದೆ.ನಾವು ತಿನ್ನುವ ಆಹಾರದ ಮೂಲಕವೇ ಈ ಸಮಸ್ಯೆಯನ್ನು ನಿಧಾನವಾಗಿ ಸರಿಪಡಿಸಬಹುದು.

ಲಕ್ಷಣಗಳು: ಬೆಳಿಗ್ಗೆ ಎದ್ದ ತಕ್ಷಣವೇ ಸರಿಯಾಗಿ ಮಲ ವಿಸರ್ಜನೆ ಯಾಗದೇ ಇರುವುದು, ಮಲವುಗಟ್ಟಿಯಾಗಿರುವುದು, ಮಲವಿಸರ್ಜನೆ ಮಾಡುವಾಗ ನೋವು, ರಕ್ತ ಬೀಳುವುದು, ವಾಕರಿಕೆ, ನಿಶಕ್ತಿ ಮಲಪೂರ್ತಿಯಾಗಿ ಖಾಲಿಯಾಗಿಲ್ಲ ಎಂದೇನಿಸುವುದು, ಹೊಟ್ಟೆ ನೋವು ತಲೆ ನೋವು ಇತ್ಯಾದಿ.

ವೃದ್ಧರಲ್ಲಿ ಸಾಮಾನ್ಯವಾಗಿ ಚಯಾಪಚಯ ಕ್ರಿಯೆ ಸರಿಯಾಗಿ ನಡೆಯದೇ ಇರುವುದು ಮತ್ತು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಇರುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಮತ್ತು ಪ್ರಸವದ ನಂತರದ ದಿನಗಳಲ್ಲಿ ದೊಡ್ಡ ಕರುಳಿನ ಚಲನವಲನಗಳು ಸರಿಯಾಗಿ ನಡೆಯದೆ ಮಲಬದ್ಧತೆ ಉಂಟಾಗುತ್ತದೆ. ಪೌಷ್ಟಿಕಾಂಶದ ಕೊರತೆಯಿಂದಲೂ ಮಲಬದ್ಧತೆ ಉಂಟಾಗುತ್ತದೆ. ಕೆಲವೊಂದು ಔಷಧೀಯ ಸೇವನೆಯಿಂದಲೂ, ಕಡಿಮೆ ನಿದ್ರೆ, ಮಾನಸಿಕ ಒತ್ತಡ ಇವುಗಳು ಸಹ ಮಲಬದ್ಧತೆ ಸಮಸ್ಯೆಗೆ ಕಾರಣವಾಗಿದೆ.

ಪರಿಹಾರ:
* ಹೆಚ್ಚು ನೀರು ಸೇವನೆ.. ದೇಹದಲ್ಲಿ ಕಲ್ಮಶಗಳನ್ನು ಹೊರಹಾಕಲು ನೀರು ಅತ್ಯಗತ್ಯ ಹಾಗೆ ಮಲವನ್ನು ವಿಸರ್ಜಿಸಲು ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಅಗತ್ಯ
* ಉತ್ತಮ ಆಹಾರ ಪದ್ಧತಿ…. ಹೆಚ್ಚು ನಾರಿನಂಶವಿರುವ ಆಹಾರ ಸೇವನೆ
* ಹಸಿರು ತರಕಾರಿ ಹಾಗೂ ಸೊಪ್ಪು ತರಕಾರಿಗಳು, ಬಾಳೆಹಣ್ಣು ಪಪ್ಪಾಯ ನಿಂಬೆ ಹಣ್ಣು, ಸೀಬೆಹಣ್ಣು ಕಿತ್ತಳೆ ಅವಕಾಡೊ ಮೊಳಕೆ ಕಾಳುಗಳು ತುಪ್ಪ ಮಜ್ಜಿಗೆ ಹಾಲು ಇವಳನ್ನು ದಿನನಿತ್ಯ ಬಳಸುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು,
* ಅತಿ ಹೆಚ್ಚು ಉಪ್ಪು ಖಾರ ಸಿಹಿ ಹುಳಿ ಕರಿದ ಪದಾರ್ಥ ಜಂಕ್ ಫುಡ್ ಮಾಂಸ ಸೇವನೆ ಆಲ್ಕೋಹಾಲ್ ಇತ್ಯಾದಿಗಳನ್ನು ತ್ಯಜಿಸುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಬಹುದು.
* ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನ ಸೇವನೆ ಹಾಗೂ ರಾತ್ರಿ ಮಲಗುವಾಗ ಬಿಸಿ ನೀರಿನಲ್ಲಿ ಒಂದು ಚಮಚ ತ್ರಿಫಲ ಚೂರ್ಣ ವನ್ನು ಸೇರಿಸಿ ದಿನನಿತ್ಯ ಕುಡಿಯುವುದರಿಂದಲೂ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಬಹುದು.
* ಪೌಷ್ಟಿಕಾಂಶದ ಆಹಾರದ ಜೊತೆ ಉತ್ತಮ ವ್ಯಾಯಾಮ ಯೋಗಾಸನ ಮಾಡುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು.

Advertisement

ವಜ್ರಾಸನ ಪವನಮುಕ್ತಾಸನ, ಧನುರಾಸನ, ಸೂರ್ಯನಮಸ್ಕಾರ ಈ ಯೋಗಾಸನಗಳನ್ನು ದಿನನಿತ್ಯ ಮಾಡುವುದರಿಂದ ಮಲಬದ್ಧತೆಯನ್ನು ತಡೆಗಟ್ಟಬಹುದು ಹಾಗೂ 30 ನಿಮಿಷ ವಾಕಿಂಗ್ ಮಾಡುವುದು. ಉತ್ತಮ ಯೋಗಾಸನ ಹಾಗೂ ವ್ಯಾಯಾಮ ಮಾಡುವುದರಿಂದ ಕರಳಿನ ಸುತ್ತ ಇರುವ ಮಾಂಸ ಖಂಡಗಳು ಬಲಗೊಳ್ಳುವುದು. ಇದರಿಂದ ಕರುಳಿನ ಆಹಾರದಲ್ಲಿ ಪಚನ ಮತ್ತು ಚಲನ ಸರಿಯಾಗಲು ನೆರವಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ವಯಸ್ಸಿನಲ್ಲೂ ಕಾಡುವ ಮಲಬದ್ಧತೆ ಸಮಸ್ಯೆಯನ್ನು ಆದಷ್ಟು ನಾವು ಆಹಾರದಲ್ಲಿ ಸರಿಪಡಿಸಿಕೊಳ್ಳುವುದು ಉತ್ತಮ.    ಮೂಲವ್ಯಾಧಿ ಇನ್ನಿತರ ಗಂಭೀರ ಸಮಸ್ಯೆಗಳಿಂದ ಮಲಬದ್ಧತೆಯಿಂದ ತೊಂದರೆ ಅನುಭವಿಸುತಿದ್ದರೆ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ತೆಗೆದು ಕೊಳ್ಳುವುದು ಉತ್ತಮ.

ಬರಹ :
Dr Jyothi K, Ayurveda, Mangaluru

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಾರಣಾಸಿ ಎಂಬ ದ್ವಂದ್ವಗಳ ನಗರ
May 16, 2025
1:02 PM
by: ರಮೇಶ್‌ ದೇಲಂಪಾಡಿ
ಪುಟ್ಟ ಚಿಟ್ಟೆ | ಭಾವ ತಟ್ಟಿದ ದಿಟ್ಟೆ
May 16, 2025
12:40 PM
by: ದ ರೂರಲ್ ಮಿರರ್.ಕಾಂ
ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ
May 16, 2025
7:23 AM
by: The Rural Mirror ಸುದ್ದಿಜಾಲ
ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |
May 16, 2025
7:16 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group