ಅಕ್ಕಿ ತೊಳೆದ ನೀರನ್ನು ಚೆಲ್ಲದಿರಿ | ಕಲಗಚ್ಚುವಿನಲ್ಲಿದೆ ಅನೇಕ ಔಷಧಿಯ ಗುಣಗಳು

October 24, 2023
10:47 PM
ಅಕ್ಕಿ ತೊಳೆದ ನೀರಿನಲ್ಲಿ ತುಂಬಾ ಒಳ್ಳೆಯ ಔಷಧೀಯ ಗುಣ ಇದೆ. ಈ ಬಗ್ಗೆ ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಬರೆದಿದ್ದಾರೆ....

ಅಕ್ಕಿ ತೊಳೆದ ನೀರು (ಕಲಗಚ್ಚು)( rice washed water)ನಲ್ಲಿ ತುಂಬಾ ಒಳ್ಳೆಯ ಔಷಧೀಯ ಗುಣ ಇದೆ. ಕಲಗಚ್ಚು ಎಂದು ಮೂಗು ಮುರಿಯುವ ಅಗತ್ಯ ಇಲ್ಲ. ಅಕ್ಕಿ ಎಂದರೆ ಬಿಳಿ ಅಕ್ಕಿ ಅಲ್ಲ, ಕೆಂಪಕ್ಕಿ(red rice) ಸಿಪ್ಪೆ ರಹಿತವಾಗಿ ಇರುವುದು ಅಲ್ಲ, ಸಿಪ್ಪೆ ಸಹಿತವಾಗಿ ಇರಬೇಕಾಗುತ್ತದೆ. ಅಕ್ಕಿಯನ್ನು ಮೊದಲು ಸಾಮಾನ್ಯ ನೀರಿನಲ್ಲಿ ತೊಳೆದುಬಿಡಿ. ಧೂಳುಗಳು ಹೋಗಿರುವುದು ಖಾತ್ರಿ ಮಾಡಿಕೊಳ್ಳಿ ನಂತರ ಮತ್ತೆ ನೀರು ಹಾಕಿ ಐದು ನಿಮಿಷ ಇಡಿ. ಚೆನ್ನಾಗಿ ತಿಕ್ಕಿ ತೊಳೆಯಿರಿ. ನೀರು ಬಗ್ಗಿಸಿದ ಅಕ್ಕಿಯನ್ನು ಅನ್ನವಾಗಿ ಮಾಡಿಕೊಳ್ಳಿ.

Advertisement

ಅಕ್ಕಿ ತೊಳೆದ ನೀರಿನಲ್ಲಿ ಏನೇನು ಇದೆ ಪ್ರಯೋಜನ:

  • ತೆಗೆದಿಟ್ಟ ನೀರನ್ನು ಬಿಳಿಯ ಬಟ್ಟೆಯಲ್ಲಿ ಸೋಸಿ ಒಂದು ಕಡೆ ಇಡಿ. ಅರ್ಧ ಗಂಟೆ ಬಿಟ್ಟಾಗ ತಳದಲ್ಲಿ ಬಿಳಿಯ ಬಣ್ಣದ ಹಿಟ್ಟು ನಿಂತಿರುತ್ತದೆ. ಅರಿಶಿಣ ಸ್ವಲ್ಪ ಸೇರಿಸಿ ಮುಖಕ್ಕೆ ಹಚ್ಚಿ. ಕೆಲವರಿಗೆ ಅರಿಶಿನ ಆಗುವುದಿಲ್ಲ ಅಂತವರಿಗೆ ಅರಿಶಿನದ ಬಳಕೆ ಬೇಡ.
  •  ಅಕ್ಕಿ ತೊಳೆದ ನೀರಿನಿಂದ ಕಾಳುಮೆಣಸು ತೇದು ಹಚ್ಚುವುದರಿಂದ ಮೊಡವೆ ಗುಣವಾಗುತ್ತದೆ. ಇದನ್ನು ಚೆನ್ನಾಗಿ ಮಸಾಜ್ ಮಾಡಿ ಮುಂಗೈ ಮೊಣಕಾಲಿನ ಕೆಳಭಾಗ ಮುಖ ಕುತ್ತಿಗೆ ಕಿವಿಯ ಹಿಂಭಾಗ ಎಲ್ಲಾ ಕಡೆ ಹತ್ತು ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಮುಖದ ಕಾಂತಿ ಹೆಚ್ಚುತ್ತದೆ ಮತ್ತು ಮೊಣಕೈಯಲ್ಲಿರುವ ಸಣ್ಣ ಗುಳ್ಳೆ ಗಳು ಗುಣವಾಗುತ್ತದೆ.
  •  ಅಕ್ಕಿ ತೊಳೆದ ನೀರನ್ನು ನಿಂಬೆ ರಸದೊಂದಿಗೆ ತಲೆಯ ಸ್ನಾನದ ಮೊದಲು ಕೂದಲಿಗೆ ಹಚ್ಚಿ ಒಣಗಿಸಿ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ನಯವಾಗಿ ಬೆಳೆಯುತ್ತದೆ. ಅಕ್ಕಿ ತೊಳೆದ ನೀರಿನಲ್ಲಿ ಹಿಮ್ಮಡಿಯನ್ನು ಮೃದುವಾಗಿ ಮಸಾಜ್ ಮಾಡುವುದರಿಂದ ಹಿಮ್ಮಡಿ ಒಡೆದಿರುವುದು ಗುಣವಾಗುತ್ತದೆ.
  •  ಅಕ್ಕಿ ತೊಳೆದ ನೀರಿಗೆ ಕೆಂಪು ಕಲ್ಲು ಸಕ್ಕರೆ ಚೂರು ಏಲಕ್ಕಿ ಪುಡಿ ಅಗತ್ಯ ಇದ್ದಷ್ಟು ನೀರು ಹಾಕಿ ಜ್ಯೂಸ್ ಮಾಡಿ ಕುಡಿದರೆ ಕ್ಯಾಲ್ಸಿಯಂ ಹೆಚ್ಚುತ್ತದೆ ಮತ್ತು ದೇಹ ತಂಪಾಗುತ್ತದೆ.
  • ತಳದಲ್ಲಿ ಕೂತಿರುವ ಅಕ್ಕಿ ತೊಳೆದ ನೀರಿನ ಪೇಸ್ಟ್ ಅನ್ನು ಹತ್ತಿಯ ಸಹಾಯದಿಂದ ಕಣ್ಣು ಮುಚ್ಚಿ ರೆಪ್ಪೆಯ ಮೇಲಿಟ್ಟು ಮಲಗುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.
  • ಅಕ್ಕಿ ತೊಳೆದು ನೀರಿಗೆ ಜೇನು ಹಾಕಿ ಸೇವಿಸುವುದರಿಂದ ಶಕ್ತಿ ಹೆಚ್ಚುತ್ತದೆ ಮಕ್ಕಳಿಗೆ ತುಂಬಾ ಒಳ್ಳೆಯದು.
  •  ಅಕ್ಕಿ ತೊಳೆದ ಪೇಸ್ಟನ್ನು ಸುಟ್ಟ ಗಾಯದ ಮೇಲೆಹಚ್ಚಿದರೆ ಬೊಬ್ಬೆ ಬರುವುದಿಲ್ಲ ಗಾಯ ಬೇಗನೆ ವಾಸಿಯಾಗುತ್ತದೆ.
  •  ಅಕ್ಕಿ ತೊಳೆದ ನೀರಿನಲ್ಲಿ ಹುತ್ತದ ಮಣ್ಣು ಸೇರಿಸಿ ಕಾಲಿಗೆ ಮಸಾಜ್ ಮಾಡುವುದರಿಂದ ಮಕ್ಕಳ ಎಳಸು ಗುಣವಾಗಿ ಕಾಲು ಗಟ್ಟಿಯಾಗುತ್ತದೆ ಇದರಿಂದ ಬೇಗನೆ ನಡೆಯುವುದನ್ನು ಕಲಿಯುತ್ತಾರೆ.
  •  ಈ ಮೇಲಿನ ಔಷಧಿಯನ್ನು ಬಾಣಂತಿ ಹೊಟ್ಟೆಗೆ ಹಚ್ಚುವುದರಿಂದ ಹೊಟ್ಟೆ ಬೇಗನೆ ಮೊದಲಿನ ಸ್ಥಿತಿಗೆ ಬರುತ್ತದೆ.
ಬರಹ :
 ಸುಮನಾ ಮಳಲಗದ್ದೆ, ಪಾರಂಪರಿಕ ವೈದ್ಯರು

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ
April 14, 2025
7:28 AM
by: ದ ರೂರಲ್ ಮಿರರ್.ಕಾಂ
ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ
April 14, 2025
6:20 AM
by: The Rural Mirror ಸುದ್ದಿಜಾಲ
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ
April 14, 2025
6:16 AM
by: The Rural Mirror ಸುದ್ದಿಜಾಲ
ಈ 5 ವಸ್ತು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಶ್ರೀಮಂತರಾಗುವುದು ಗ್ಯಾರಂಟಿ
April 14, 2025
6:06 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group