ಚಹಾವನ್ನು(Tea) ಹೆಚ್ಚಾಗಿ ನಿದ್ರೆಯಿಂದ ಎಚ್ಚರಗೊಳಿಸಲು ಮತ್ತು ಹೊಟ್ಟೆಯನ್ನು(Stomach) ತೆರವುಗೊಳಿಸಲು ತೆಗೆದುಕೊಳ್ಳಲಾಗುತ್ತದೆ. ಬೆಳಿಗ್ಗೆಯ(Morning) ಚಹಾ ಕುಡಿಯುವ ಅಭ್ಯಾಸವನ್ನು ಬಿಡುವುದು ಕಷ್ಟ ಎಂದು ಅನೇಕ ಜನರು ಈ ದಿನಚರಿಯನ್ನು ಅನುಸರಿಸುತ್ತಾರೆ. ಅಂತಹ ಜನರು ಚಹ ಇಲ್ಲದಾಗ ತುಂಬಾ ಚಡಪಡಿಸುತ್ತಾರೆ. ಕೆಲವರಿಗಂತೂ ಹಾಸಿಗೆಯಲ್ಲಿ ಕಣ್ಣು ಬಿಡುವ ಮುಂಚೆಯೆ ಚಹಾ ಅಥವಾ ಕಾಫಿ(Coffee) ಬೇಕಾಗುತ್ತದೆ. ಬೆಳಿಗ್ಗೆ ಎದ್ದಾಗ ಚಹಾ ಅಥವಾ ಕಾಫಿಯನ್ನು ಸೇವಿಸದಿದ್ದರೆ ಹೊಟ್ಟೆಯನ್ನು ತೆರವುಗೊಳಿಸಲು ಅನೇಕರಿಗೆ ತೊಂದರೆಯಾಗುತ್ತದೆ.
ನೀವೂ ಇದರಿಂದ ಬಳಲುತ್ತಿದ್ದರೆ. ನಿಮ್ಮ ಹೊಟ್ಟೆಯ ಆರೋಗ್ಯ ಚೆನ್ನಾಗಿಲ್ಲ. ನೀವು ಸಮಯಕ್ಕೆ ಗಮನಿಸಬೇಕು. ಏಕೆಂದರೆ, ಹೊಟ್ಟೆಯನ್ನು ಶುಚಿಗೊಳಿಸುವುದು ನೈಸರ್ಗಿಕ ಪ್ರಕ್ರಿಯೆ ಮತ್ತು ಇದು ಯಾವುದೇ ಅಭ್ಯಾಸದೊಂದಿಗೆ ಸಂಬಂಧಿಸಬಾರದು ಎಂದು ಆಹಾರ ತಜ್ಞರ ಹಾಗೂ ವೈದ್ಯರ ಅಭಿಪ್ರಾಯ. ನೀವು ಸಹ ಅಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸಮಯಕ್ಕೆ ಸರಿಯಾಗಿ ಸಮಸ್ಯೆ ಏನೆಂದು ನೀವು ಅರಿತುಕೊಳ್ಳಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದು ಪಿತ್ತ ಮತ್ತು ಅಜೀರ್ಣವನ್ನು ಹೆಚ್ಚಿಸುತ್ತದೆ. ವಾಯುವಿನ ಸಮಸ್ಯೆಯಿಂದ ಹೊಟ್ಟೆ ಉಬ್ಬರ ಇರುತ್ತದೆ. ಇದು ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್ ಇತ್ಯಾದಿಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಕಡಿಮೆ ಪ್ರಮಾಣದ ನೀರು : ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ಶುಷ್ಕತೆ ಉಂಟಾಗುತ್ತದೆ . ಆದ್ದರಿಂದ, ಆಹಾರದಲ್ಲಿ ನೀರು ಮತ್ತು ದ್ರವದ ಪ್ರಮಾಣವು ಸೂಕ್ತವಾಗಿರಬೇಕು. ಚಳಿಯ ದಿನಗಳಲ್ಲಿ ತಂಪು ಹವಾಮಾನದಿಂದಾಗಿ ಬಾಯಾರಿಕೆ ಕಡಿಮೆ ಆಗುವುದರಿಂದ ಮಲಬದ್ಧತೆ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು. ಆದರೆ, ಈ ಸಮಸ್ಯೆಯನ್ನು ತಪ್ಪಿಸಲು ಆರೋಗ್ಯಕ್ಕಾಗಿ ಯಾವಾಗಲೂ ಹೆಚ್ಚು ನೀರು ಕುಡಿಯುವುದು ಉತ್ತಮ.
ಆಹಾರದಲ್ಲಿ ಅಧಿಕ ಸಂಸ್ಕರಿತ ಪದಾರ್ಥಗಳು: ಆಹಾರದಲ್ಲಿ ಸಾಕಷ್ಟು ಸಂಸ್ಕರಿಸಿದ ಆಹಾರವಿದ್ದರೂ, ಹೊಟ್ಟೆಯನ್ನು ಸ್ವಚ್ಛಗೊಳಿಸುವಲ್ಲಿ ತೊಂದರೆಗಳಿವೆ. ಏಕೆಂದರೆ ಸಂಸ್ಕರಿಸಿದ ಆಹಾರಗಳಲ್ಲಿ ಹಿಟ್ಟು ಮತ್ತು ಸಕ್ಕರೆ ಅಧಿಕವಾಗಿರುತ್ತದೆ. ಇಂತಹ ಆಹಾರಗಳಲ್ಲಿ ನಾರಿನಂಶ ತುಂಬಾ ಕಡಿಮೆ ಇರುತ್ತದೆ. ಇದರಿಂದ ಮಲಬದ್ಧತೆ ಉಂಟಾಗುತ್ತದೆ. ಆದ್ದರಿಂದ, ಕರುಳು ಸರಿಯಾಗಿ ಸ್ವಚ್ಛವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ, ಹೆಚ್ಚು ನಾರಿನಂಶ ಇರುವ ಆಹಾರಗಳು ಅಂದರೆ ಪಾಲಿಷ್ ಮಾಡಿರದ ಧಾನ್ಯಗಳು, ಮೊಳಕೆ ಬರಿಸಿದ ಕಾಳುಗಳು, ಬೀಜಗಳು, ಹಣ್ಣುಗಳು, ತರಕಾರಿಗಳ ಸೇರ್ಪಡೆಯನ್ನು ಹೆಚ್ಚಿಸಬೇಕು. ಇದು ಹೊಟ್ಟೆಯನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.
ದೈಹಿಕ ಚಟುವಟಿಕೆಗಳ ಕೊರತೆ : ದಿನವಿಡೀ ಸಾಕಷ್ಟು ದೈಹಿಕ ಚಟುವಟಿಕೆಗಳು ಇಲ್ಲದೆ ಹೆಚ್ಚು ಹೊತ್ತು ಕುಳಿತುಕೊಂಡು ಅಥವಾ ಮಲಗಿಕೊಂಡು ಇದ್ದರೆ ಇದು ಕರುಳಿನ ಚಲನೆಯನ್ನು ಮಂದಗೊಳಿಸುತ್ತದೆ. ಕೆಲಸದ ಭರಾಟೆಯಲ್ಲಿ ನಾವು ಆಗಾಗ ಎದ್ದು ಓಡಾಡುವುದಿಲ್ಲ. ಇದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆದ್ದರಿಂದ, ಪ್ರತಿ ಅರ್ಧ ಅಥವಾ ಮುಕ್ಕಾಲು ಗಂಟೆಗೆ ದೇಹದ ಕನಿಷ್ಠ ಚಲನೆಯನ್ನು ಮಾಡಿಬೇಕು. ಇಷ್ಟೇ ಅಲ್ಲ, ಬೆಳಗ್ಗೆ ಅಥವಾ ಸಂಜೆಯ ನಡಿಗೆ, ಯೋಗದಂತಹ ವ್ಯಾಯಾಮವನ್ನಾದರೂ ಮಾಡಬೇಕು.
ಚಹಾ ಕಾಫಿಯ ಅಭ್ಯಾಸವನ್ನು ತೊಡೆದುಹಾಕಲು ಪ್ರತಿದಿನ ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ, ದೇಹದ ಜಲಸಂಚಯನವನ್ನು ಸುಧಾರಿಸುತ್ತದೆ ಮತ್ತು ಇತರ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.
ಸಂಕಲನ ಮತ್ತು ಸಂಪಾದನೆ: ಡಾ. ಪ್ರ. ಅ. ಕುಲಕರ್ಣಿ