ನಿಮಗಿದು ಗೊತ್ತೇ…? ಜೇನುನೊಣ ವಿಷ ಚಿಕಿತ್ಸೆ | ಈ ಚಿಕಿತ್ಸೆಯ ಲಾಭಗಳೇನು..?

January 29, 2024
12:39 PM

ಪ್ರತಿಯೊಂದು ವಿಷವೂ(Poison) ಔಷಧಿಯಾಗಿರುತ್ತದೆ(Medicine). ಹಾಗೆಯೇ ಪ್ರತಿಯೊಂದು ಔಷಧಿಯೂ ವಿಷವಾಗಿರುತ್ತದೆ. ವಿಷವಾಗಲಿ ಔಷಧಿಯಾಗಲಿ ನಾವು ಅದನ್ನು ಹೇಗೆ ಬಳಸುತ್ತೇವೆ, ಎಷ್ಟು ಬಳಸುತ್ತೇವೆ ಎಂಬುದರ ಮೇಲೆ ಅದರ ಪರಿಣಾಮವು ಅವಲಂಬಿಸಿರುತ್ತದೆ.

Advertisement
Advertisement

ಉದಾಹರಣೆಗೆ, ವಿಷಪೂರಿತ ಹಾವು ಕಚ್ಚಿದಾಗ(Snake Bite) ವ್ಯಕ್ತಿ ಸಾವಿಗೀಡಾಗುತ್ತಾನೆ. ಹಾವು ತನ್ನ ದಂಶದಿಂದ ರಕ್ತದಲ್ಲಿ ಬಿಟ್ಟ ರಾಸಾಯನಿಕ(Chemical) ಪದಾರ್ಥಗಳು ವಿಷವಾಗಿ ಕೆಲಸ ಮಾಡುತ್ತವೆ. ಅದೇ ವಿಷವನ್ನು ಉಪಯೋಗಿಸಿ ಚುಚ್ಚುಮದ್ದುಗಳನ್ನು(injection) ತಯಾರಿಸಲಾಗುತ್ತದೆ. ಆಗ ಆ ಚುಚ್ಚುಮದ್ದು ಅದೇ ಹಾವಿನ ವಿಷವನ್ನು ತಟಸ್ಥಗೊಳಿಸಿ ಜೀವ ಉಳಿಸುವ ಔಷಧಿಯಾಗುತ್ತದೆ. ಇದೇ ರೀತಿ ಚೇಳಿನ ವಿಷವನ್ನೂ ಔಷಧಿಯಾಗಿ ಉಪಯೋಗಿಸಲಾಗುತ್ತದೆ.

Advertisement

ಹಾಗೆಯ, ಸೌಮ್ಯ ವಿಷ ಬಿಡುವ ಇನ್ನೊಂದು ಜೀವಿ ಎಂದರೆ ಜೇನುನೊಣ(Bee Venom). ಒಂದು ಜೇನು ನೊಣ ಕಚ್ಚುವುದರಿಂದ ಸಾವಿನ ಭಯವಿರುವುದಿಲ್ಲ. ಏಕೆಂದರೆ, ಅದರ ವಿಷ ತುಂಬಾ ಸೂಕ್ಷ್ಮ ಪ್ರಮಾಣದಲ್ಲಿದ್ದು, ಅದು ಸಾವನ್ನು ತರುವಷ್ಟು ಭಯಂಕರ ವಿಷವಾಗಿರುವುದಿಲ್ಲ. ಆದರೆ, ಜೇನು ನೊಣದ ಕುಟುಕಿನಿಂದ ಸ್ವಲ್ಪ ಉರಿಯೂತ, ನೋವು, ಕುಟುಕಿದ ಜಾಗ ಕೆಂಪಾಗುವುದು, ಇತ್ಯಾದಿ ಒಂದೆರಡು ದಿನಗಳ ಮಟ್ಟಿಗೆ ಅನುಭವವಾಗಬಹುದು. ನೂರಾರು/ಸಾವಿರಾರು ಜೇನುನೊಣಗಳು ಕುಟುಕಿದರೆ ವ್ಯಕ್ತಿಯ ಸಾವು ಸಂಭವಿಸಬಹುದು. ಜೇನುನೊಣಗಳ ಬಗ್ಗೆ ಇಷ್ಟು ವಿಷಯ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಜೇನು ನೊಣದ ಈ ವಿಷವು ಅನೇಕ ಅಸಾಧ್ಯ ರೋಗಗಳ ಚಿಕಿತ್ಸೆಯಲ್ಲಿ ರಾಮಬಾಣ ಔಷಧಿಯಂತೆ ಉಪಯೋಗವಾಗುತ್ತದೆಂಬ ಸಂಗತಿ ಬಹುಶಃ ಯಾರಿಗೂ ತಿಳಿದಿರಲಿಕ್ಕಿಲ್ಲ.

ಹೌದು, ಇದು ಸ್ವಲ್ಪ ಹೊಸ ಸಂಗತಿಯಾದ್ದರಿಂದ ನಂಬಲು ಕಷ್ಟವೆನಿಸಬಹುದು. ಆದರೆ, ಜೇನುನೊಣದ ವಿಷವು ಒಂದು ಅದ್ಭುತವಾದ ಔಷಧಿ. ಅದನ್ನು ಸರಿಯಾದ ಪದ್ಧತಿಯಲ್ಲಿ ಅನುಭವವುಳ್ಳ ಚಿಕಿತ್ಸಕರ ಮೂಲಕ ಬಳಸಿದರೆ ಈ ವಿಷವು ಮಧುಮೇಹ, ಬಿಪಿ, ಥೈರಾಯಿಡ್, ಕ್ಯಾನ್ಸರ್, ಕಂಪವಾತ, ಸಂಧಿವಾತ, ಹೃದಯದ ಕಾಯಿಲೆಗಳು, ಮೆದುಳು ಹಾಗೂ ನರಮಂಡಲದ ಕಾಯಿಲೆಗಳು, ಮಾನಸಿಕ ವ್ಯಾಧಿಗಳು, ಸ್ತ್ರೀ ರೋಗಗಳು, ಇತ್ಯಾದಿ ಭಯಂಕರ ಹಾಗೂ ಗುಣಪಡಿಸಲಸಾಧ್ಯವಾದ ಕಾಯಿಲೆಗಳನ್ನು ವಾಸಿ ಮಾಡುವಲ್ಲಿ ಅತ್ಯಂತ ಉಪಯುಕ್ತವಾಗಿದೆ. ಜೇನುನೊಣದ ವಿಷದ ಉಪಯೋಗದಿಂದ ಸುಮಾರು 400 ತರಹದ ವ್ಯಾಧಿಗಳನ್ನು ಗುಣಪಡಿಸಲಾದ ನಿದರ್ಶನಗಳಿವೆ. ಆಧುನಿಕ ಉಪಚಾರ ಪದ್ಧತಿಯು ಅಸಾಧ್ಯವೆಂದು ಪರಿಗಣಿಸಲಾದ ಕ್ಯಾನ್ಸರ್ ರೋಗಿಗಳನ್ನು ಕೂಡ ಜೇನುವಿಷದ ಚಿಕಿತ್ಸೆಯಿಂದ ಗುಣಪಡಿಸಲಾಗಿದೆ.

Advertisement

ಜೇನು ನೊಣದ ಮೂಲಕ ನೀಡುವ ಚಿಕಿತ್ಸೆಯನ್ನು “ಅಪಿಥೇರಪಿ (Apitherapy)” ಎಂದು ಕರೆಯಲಾಗುತ್ತದೆ. ಜೇನು ನೊಣದ ವಿಷದಲ್ಲಿ ಅನೇಕ ಪ್ರಕಾರದ ಜೀವರಸಾಸಾಯನಗಳು, ಕಿಣ್ವಗಳು, ಅಮೈನೋ ಆಮ್ಲಗಳು ಇರುತ್ತವೆ. ಅಲ್ಲದೆ, ರಂಜಕ, ಕಬ್ಬಿಣ, ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮ್ಯಾಂಗನೀಸ್, ಇತ್ಯಾದಿ ಖನಿಜಗಳು ಕೂಡ ಇರುತ್ತವೆ. ಈ ಜೀವರಸಾಯನಗಳಲ್ಲಿ ಅತ್ಯಂತ ಪ್ರಮುಖವಾದದ್ದು ಮೆಲಿಟಿನ್ ಎಂಬ ಪದಾರ್ಥ. ಒಟ್ಟು ವಿಷದಲ್ಲಿ ಇದುವೇ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಈ ಮೆಲಿಟ್ಟಿನ್ ಎಂಬ ಜೀವರಸಾಯನವೇ ಜೇನು ನೊಣದ ಪ್ರಮುಖ ವಿಷ ಹಾಗೂ ಅತ್ಯಂತ ಉಪಯುಕ್ತ ಔಷಧಿ. ಸುಮಾರು ನಾಲ್ಕುನೂರು ಪ್ರಕಾರದ ವಿವಿಧ ವ್ಯಾಧಿಗಳನ್ನು ವಾಸಿ ಮಾಡುವ ಶಕ್ತಿ ಈ ಮೆಲಿಟಿನಲ್ಲಿ ಇದೆ.

ಜೇನು ನೊಣ ವಿಷದ ಚಿಕಿತ್ಸೆಯನ್ನು ಹೇಗೆ ಮಾಡಲಾಗುತ್ತದೆ?: ಚಿಕಿತ್ಸೆಗಾಗಿ ವಿಶಿಷ್ಟ ಜಾತಿಯ ಜೇನುನೊಣವನ್ನೇ ಬಳಸಲಾಗುತ್ತದೆ. ಆಯಾ ರೋಗಕ್ಕೆ ಅನುಸಾರವಾಗಿ ಚಿಕಿತ್ಸೆಯ ಜಾಗ ಮತ್ತು ವಿಷದ ಪ್ರಮಾಣವನ್ನು (ಡೋಸ್) ನಿರ್ಧರಿಸಲಾಗುತ್ತದೆ. ಈ ವಿಷದ ತೀವ್ರ ಪರಿಣಾಮಗಳು (ರಿಯಾಕ್ಷನ್ ಗಳು) ಆಗದಿರಲೆಂದು ಮುಂಜಾಗ್ರತೆಯ ಕ್ರಮವಾಗಿ ಕೆಲವು ಆಯುರ್ವೇದ ಔಷಧಿಗಳನ್ನೂ ಕೊಡಲಾಗುತ್ತದೆ. ಜೇನು ನೊಣದ ವಿಷವನ್ನು ಚಿಕಿತ್ಸೆಗಾಗಿ ವಿವಿಧ ರೂಪಗಳಲ್ಲಿ ಬಳಸಲಾಗುತ್ತದೆ. ಈ ವಿಷದಿಂದ ದ್ರವ ಔಷಧಿ, ಮಾತ್ರೆಗಳು, ಚುಚ್ಚುಮದ್ದುಗಳು, ಲೇಪಗಳು, ಇತ್ಯಾದಿಗಳನ್ನು ತಯಾರಿಸಿ ಆಯಾ ರೋಗಗಳಿಗೆ ಅನುಗುಣವಾಗಿ ಉಪಯೋಗಿಸಲಾಗುತ್ತದೆ. ನೇರವಾಗಿ ಜೇನುನೊಣವನ್ನು ವ್ಯಕ್ತಿಯ ಶರೀರದಲ್ಲಿ ಕುಟುಕಿಸುವ ಮೂಲಕ ಚಿಕಿತ್ಸೆ ಮಾಡುವುದು ಇನ್ನೊಂದು ಸರಳ ವಿಧಾನವಾಗಿದೆ. ಜೇನುನೊಣ ವಿಷದ ಚುಚ್ಚುಮದ್ದು ಅಥವಾ ಕುಟುಕನ್ನು ಪಡೆದ ನಂತರ ವ್ಯಕ್ತಿಗೆ ಕೆಲವು ನಿಮಿಷ ಉರಿಯುವುದು, ನೋವು ಅನುಭವವಾಗಬಹುದು. ಆದರೆ, ಕಾಲಕ್ರಮೇಣ ಈ ತೊಂದರೆಗಳು ಕಡಿಮೆಯಾಗುತ್ತವೆ. ಇಂಗ್ಲೀಷ್ ಔಷಧೀಯ ಚುಚ್ಚುಮದ್ದನ್ನು ಪಡೆದಾಗ ಆಗುವಷ್ಟೇ ನೋವು ಜೇನುನೊಣದ ವಿಷದ ಕುಟುಕಿನಿಂದ ಆಗುತ್ತದೆ. ಎಲ್ಲೋ ಅಪರೂಪಕ್ಕೆ ಲಕ್ಷಕೊಬ್ಬರಿಗೆ ಜೇನುನೊಣ ವಿಷದ ಅಲರ್ಜಿ ಇದ್ದರೆ ಹೆಚ್ಚು ತೊಂದರೆಗಳಾಗುವ ಸಂಭವವಿರುತ್ತದೆ. ಅಂದರೆ, ಅತಿ ತುರಿಕೆ, ತಲೆಸುತ್ತುವುದು, ವಾಕರಿಕೆ, ಬಿಪಿ ಕಡಿಮೆಯಾಗುವುದು, ಇತ್ಯಾದಿ. ಅನುಭವಸ್ಥರಿಂದ ಚಿಕಿತ್ಸೆ ಪಡೆಯುವುದರ ಮೂಲಕ ಈ ಸಮಸ್ಯೆಗಳನ್ನು ಕಡಿತಗೊಳಿಸಬಹುದು.

Advertisement

ಜೇನುನೊಣ ಚಿಕಿತ್ಸೆ ಭಾರತಕ್ಕೆ ಹೊಸದೇನಲ್ಲ. ಇದಕ್ಕೆ ಸುಮಾರು ಎರಡುವರೆ ಸಾವಿರ ವರ್ಷಗಳ ಇತಿಹಾಸವಿದೆ. ಚೀನಾದಲ್ಲಿ ಸಾವಿರಾರು ವರ್ಷಗಳಿಂದ ಜೇನು ನೊಣ ಚಿಕಿತ್ಸೆ ಬಳಸಲಾಗುತ್ತಿತ್ತು. ಭಾರತದಲ್ಲಿ ಮೊಘಲರು ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ಹಾಗೂ ಇಂಗ್ಲೀಷ್ ಔಷಧಿ ಪದ್ಧತಿಯ ಆಗಮನದಿಂದ ಈ ಚಿಕಿತ್ಸೆ ಹಿಂದುಳಿಯಿತು. ಆದರೆ, ಇತ್ತೀಚೆಗೆ ಜೇನುನೊಣ ಚಿಕಿತ್ಸೆಯ ಬಗ್ಗೆ ವಿದೇಶಗಳಲ್ಲಿಯೂ ಕೂಡ ಸಾಕಷ್ಟು ಸಂಶೋಧನೆಗಳು ನಡೆದಿದ್ದು ಇದು ತುಂಬಾ ಉಪಯುಕ್ತ ಹಾಗೂ ಅದ್ಭುತವಾದ ಚಿಕಿತ್ಸಾ ಪದ್ಧತಿ ಎಂಬುದು ಸಾಬೀತಾಗಿದೆ. ಹಾಗಾಗಿ ಯುರೋಪ್, ಅಮೆರಿಕ ಹಾಗೂ ಇನ್ನಿತರ ಅನೇಕ ದೇಶಗಳಲ್ಲಿ ಈ ಚಿಕಿತ್ಸೆಯನ್ನು ಬಳಸುವುದು ದಿನ ದಿನಕ್ಕೆ ವೃದ್ಧಿ ಆಗುತ್ತಿದೆ.

ಮಹಾರಾಷ್ಟ್ರದಲ್ಲಿ ಕೆಲವು ಅನುಭವಸ್ಥ ವೈದ್ಯರು ಈ ಚಿಕಿತ್ಸೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಅಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜನ ಈ ಚಿಕಿತ್ಸೆಯ ಲಾಭ ಪಡೆದಿದ್ದಾರೆ. ಹೀಗಾಗಿ, ಈ ಚಿಕಿತ್ಸೆಯು ದೇಶದ ಎಲ್ಲೆಡೆ ವ್ಯಾಪಕವಾಗಿ ಬೆಳೆಯುವ ಸಂಭವನೀಯತೆಗಳು ಸಾಕಷ್ಟು ಇವೆ.

Advertisement

ಡಾ. ಪ್ರ. ಅ. ಕುಲಕರ್ಣಿ

Bee venom is a wonderful medicine. If it is used in the right way by an experienced practitioner, this poison is very useful in curing terrible and incurable diseases like diabetes, BP, thyroid, cancer, epilepsy, rheumatism, heart diseases, brain and nervous system diseases, mental diseases, gynecological diseases, etc. There are over 400 instances of cures for various ailments with the use of bee venom.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |
May 7, 2024
3:13 PM
by: ದ ರೂರಲ್ ಮಿರರ್.ಕಾಂ
ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !
May 7, 2024
11:33 AM
by: ಪ್ರಬಂಧ ಅಂಬುತೀರ್ಥ
Karnataka Weather | 07-05-2024 | ಮಳೆಯ ಸೂಚನೆ ಬಂದೇ ಬಿಟ್ಟಿದೆ |ಹಲವು ಕಡೆ ಗುಡುಗು-ಸಿಡಿಲು ಇರಬಹುದು, ಇರಲಿ ಎಚ್ಚರಿಕೆ |
May 7, 2024
11:08 AM
by: ಸಾಯಿಶೇಖರ್ ಕರಿಕಳ
ಆಹಾರ ಬದಲಾವಣೆಯಿಂದ ವಾತಾವರಣದ ತಾಪಮಾನ ಏರಿಕೆಯ ಸಮಸ್ಯೆಗೂ ಪರಿಹಾರ…! | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಖಾದರ್ ಪ್ರತಿಪಾದನೆ |
May 7, 2024
7:00 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror