#Hippali | ಹಿಪ್ಪಲಿಯಲ್ಲಿ ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ? | ಅನೇಕ ರೋಗಗಳಿಗೆ ರಾಮಬಾಣ ಈ ಹಿಪ್ಪಲಿ

October 7, 2023
9:17 PM
ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಅನೇಕ ರೀತಿಯ ಆರೋಗ್ಯ ಗುಣಗಳನ್ನು ಕಾಣಬಹುದಾಗದೆ. ಅಂತಹ ಪದಾರ್ಥಗಳಲ್ಲಿ ಒಂದು ಹಿಪ್ಪಲಿ ಅಥವಾ ಪಿಪ್ಪಲಿ. ಆಯುರ್ವೇದದಲ್ಲಿ ಇದರ ಬಳಕೆಯನ್ನು ಹೆಚ್ಚು ಕಾಣಬಹುದಾಗಿದೆ. ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಿನ ರೀತಿಯಲ್ಲಿ ಇದು ನೆರವಾಗುತ್ತದೆ.

ಹಿಪ್ಪಲಿ ಅಥವಾ ಪಿಪ್ಪಲಿ ಎಂದು ಕರೆಯುವ ಮೂಲಿಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಿಪ್ಪಲಿ ಎಂತಲೂ ಕರೆಯುವ ಇದರ ಆರೋಗ್ಯ ಗುಣಗಳ ಬಗ್ಗೆ ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ. ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಅನೇಕ ರೀತಿಯ ಆರೋಗ್ಯ ಗುಣಗಳನ್ನು ಕಾಣಬಹುದಾಗದೆ. ಅಂತಹ ಪದಾರ್ಥಗಳಲ್ಲಿ ಒಂದು ಹಿಪ್ಪಲಿ ಅಥವಾ ಪಿಪ್ಪಲಿ. ಆಯುರ್ವೇದದಲ್ಲಿ ಇದರ ಬಳಕೆಯನ್ನು ಹೆಚ್ಚು ಕಾಣಬಹುದಾಗಿದೆ. ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಿನ ರೀತಿಯಲ್ಲಿ ಇದು ನೆರವಾಗುತ್ತದೆ.

ಹಿಪ್ಪಲಿ ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಸಿಗುತ್ತದೆ. ಇದರ ಸಸ್ಯವು ವೀಳ್ಯೆದೆಲೆ ರೀತಿಯಲ್ಲಿ ಎಲೆಗಳನ್ನು ಹೊಂದಿದ್ದು, ಮೆಣಸಿನ ಬಳ್ಳಿಯಂತೆ ಹಬ್ಬುತ್ತದೆ. ಹಿಪ್ಪಲಿಯ ಆರೋಗ್ಯ ಗುಣ ತಿಳಿದರೆ ನೀವು ಕೂಡ ಮನೆಯಲ್ಲಿ ತಂದಿಟ್ಟುಕೊಳ್ಳುತ್ತೀರಿ. ಹಾಗಾದರೆ ಹಿಪ್ಪಲಿ ಯಾವೆಲ್ಲ ರೀತಿಯ ಅನಾರೋಗ್ಯಕ್ಕೆ ರಾಮಬಾಣದಂತೆ ಕೆಲಸಮಾಡುತ್ತದೆ. ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

​ದೇಹದ ತೂಕ ಇಳಿಕೆಗೆ ಸಹಕಾರಿ : ಹಿಪ್ಪಲಿ ದೇಹದಲ್ಲಿನ ಅಧಿಕ ಬೊಜ್ಜನ್ನು ಕರಗಿಸಲು ಸಹಾಯಕವಾಗಿದೆ. ಹಿಪ್ಪಲಿ ಪುಡಿಗೆ ಜೇನುತುಪ್ಪ ಸೇರಿಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ದೇಹದಲ್ಲಿನ ಕೊಲೆಸ್ಟ್ರಾಲ್‌ ಮಟ್ಟ ಕಡಿಮೆಯಾಗುತ್ತದೆ. ಹೊಟ್ಟೆ, ಸೊಂಟದ ಭಾಗದ ಬೊಜ್ಜು ಕರಗುತ್ತದೆ. ಹೀಗಾಗಿ ಹಿಪ್ಪಲಿಯ ಬಳಕೆಯಿಂದ ದೇಹದಲ್ಲಿ ಅಧಿಕ ಹಾಗೂ ಕೆಟ್ಟ ಕೊಲೆಸ್ಟ್ರಾಲ್‌ನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದರಿಂದ ಹೃದಯದ ಆರೋಗ್ಯವನ್ನೂ ಕೂಡ ಉತ್ತಮವಾಗಿಟ್ಟುಕೊಳ್ಳಬಹುದಾಗಿದೆ.

ಕೆಮ್ಮು, ಶೀತಕ್ಕೆ ರಾಮಬಾಣ: ಇನ್ನು ಮಳೆಗಾಲ ಆರಂಭವಾಗುತ್ತಿದೆ. ಮಕ್ಕಳು, ದೊಡ್ಡವರು ಸೇರಿದಂತೆ ಎಲ್ಲರಿಗೂ ಶೀತ, ಕೆಮ್ಮು ಸಾಮಾನ್ಯವಾಗಿ ಕಾಡುತ್ತದೆ. ಇದರಿಂದ ಆರಾಮವಾಗಲು ಹಿಪ್ಪಲಿ ಅತ್ಯುತ್ತಮ ಮನೆಮದ್ದಾಗಿದೆ. ಹಿಪ್ಪಲಿಯನ್ನು ಬಿಸಿ ಮಾಡಿ ಅದನ್ನು ಪುಡಿ ಮಾಡಿ ನಂತರ ಅದನ್ನು ವೀಳ್ಯೆದೆಲೆಯಲ್ಲಿಟ್ಟು ಜೇನುತುಪ್ಪ ಬೆರೆಸಿ ಎರಡು ಬಾರಿ ಸೇವಿಸಿ. ಸೇವಿಸುವಾಗ ಮಕ್ಕಳಿಗಾದರೆ ಅರ್ಧಚಮಚ ಮಾತ್ರ ನೀಡಿ. ವಯಸ್ಸಿಗನುಗುಣವಾಗಿ ಪ್ರಮಾಣವನ್ನು ಬದಲಾಯಿಸಿಕೊಳ್ಳಿ. ಇದು ಅಸ್ತಮಾ ಸಮಸ್ಯೆಯುಳ್ಳವರಿಗೂ ಕೂಡ ಉತ್ತಮವಾಗಿದೆ.

ಮಲಬದ್ಧತೆ ನಿವಾರಣೆ : ಹೆಚ್ಚು ಮಸಾಲೆ ಪದಾರ್ಥದ ಸೇವನೆಯಿಂದ ಅಥವಾ ಆಹಾರ ಸರಿಯಾಗಿ ಜೀರ್ಣವಾಗದೆ ಕೆಲವೊಮ್ಮೆ ಮಲಬದ್ಧತೆ ಉಂಟಾಗುತ್ತದೆ. ಇದರಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಈ ಮಲಬದ್ಧತೆ ಸಮಸ್ಯೆಗೆ ಹಿಪ್ಪಲಿ ಉತ್ತಮವಾಗಿದೆ. ಹಿಪ್ಪಲಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೇಗೆಂದರೆ 2 ಚಿಟಿಕೆ ಹಿಪ್ಪಲಿ ಚೂರ್ಣ ಹಾಗೂ 1 ಚಮಚ ತ್ರಿಫಲ ಚೂರ್ಣವನ್ನು ಅರ್ಧಕಪ್ ಬಿಸಿ ನೀರಿಗೆ ಹಾಕಿಕೊಂಡು ಸೇವಿಸಿ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ಸಂಧಿವಾತ, ಸೊಂಟನೋವಿಗೂ ಪರಿಹಾರ : ಹಿಪ್ಪಲಿ ಚೂರ್ಣ ಸಂಧಿವಾತ ಹಾಗೂ ಸೊಂಟನೋವನ್ನು ನಿವಾರಿಸಲು ಸಹಾಯಕವಾಗಿದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಹಿಪ್ಪಲಿ ಉತ್ತಮವಾಗಿದೆ. ಹಿಪ್ಪಲಿಯ ಪುಡಿಯನ್ನು ಗೋಮೂತ್ರದಲ್ಲಿ ಬೆರೆಸಿ ಸೇವನೆ ಮಾಡಿ ಇದರಿಂದ ಸಂಧಿವಾತದ ಸಮಸ್ಯೆ ಪರಿಹಾರವಾಗುತ್ತದೆ. ಜೊತೆಗೆ ಹಿಪ್ಪಲಿ ಪುಡಿ, ಹುರಿದ ಜೀರಿಗೆ ಪುಡಿ ಉಪ್ಪನ್ನು ಮಜ್ಜಿಗೆಯಲ್ಲಿ ಸೇರಿಸಿ ಸೇವನೆ ಮಾಡಿ. ಇದು ಮೂಲವ್ಯಾಧಿಗೂ ಒಳ್ಳೆಯದು. ಆದ್ದರಿಂದ ಹಿಪ್ಪಲಿಯನ್ನು ನಿಮ್ಮ ಮನೆಯಲ್ಲಿ ಉತ್ತಮ ಮನೆಮದ್ದಿನಂತೆ ಇಟ್ಟುಕೊಳ್ಳಬಹುದಾಗಿದೆ. ತಕ್ಷಣದ ಪರಿಹಾರಕ್ಕೆ ಇದು ಸಹಾಯಕ್ಕೆ ಬರುತ್ತದೆ.

ಲೋ ಬಿಪಿ ಗೆ ಮದ್ದು: ದೇಹದಲ್ಲಿ ರಕ್ತದೊತ್ತಡ 120/80ಕ್ಕಿಂತ ಕಡಿಮೆಯಾದಾಗ ಲೋ ಬಿಪಿ ಅಥವಾ ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇದರಿಂದ ಇಡೀ ದೇಹ ತಣ್ಣಗಾಗುವುದು, ಹೃದಯಕ್ಕೆ ಅಪಾಯವಾಗುವ ಸಾಧ್ಯತೆಗಳೂ ಇರುತ್ತವೆ. ಇದಕ್ಕೆ ಹಿಪ್ಪಲಿ ಪರಿಣಾಮಕಾರಿಯಾದ ಔಷಧವಾಗಿದೆ. 2 ಚಿಟಿಕೆ ಹಿಪ್ಪಲಿ ಪುಡಿ ಹಾಗೂ 1 ಚಮಚ ಹಸಿ ಶುಂಠಿಯವನ್ನು ಮಿಶ್ರಣ ಮಾಡಿ ಸೇವಿಸಿ. ಇದರಿಂದ ಲೋ ಬಿಪಿ ಸಮಸ್ಯೆ ನಿವಾರಣೆಯಾಗುತ್ತದೆ. ಹೀಗಾಗಿ ಲೋ ಬಿಪಿ ಸಮಸ್ಯೆ ಇದ್ದವರು ಹಿಪ್ಪಲಿಯನ್ನು ಅಗತ್ಯವಾಗಿ ಬಳಕೆ ಮಾಡಬಹುದಾಗಿದೆ.

– Nithish 9620516156

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ
April 2, 2026
6:37 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!
April 1, 2026
2:30 PM
by: ಸಾಯಿಶೇಖರ್ ಕರಿಕಳ
ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror