#Dosa | ನಾವು ತಿನ್ನುವ ದೋಸೆಯ ಮಹಿಮೆ ನಿಮಗೆ ಗೊತ್ತಾ..? ದೋಸೆಯಲ್ಲಿ ಅಡಗಿದೆ ಆಧ್ಯಾತ್ಮ ಮತ್ತು ಜೋತಿಷ್ಯ

October 7, 2023
9:32 PM
ದೋಸೆ ಒಂದು ದಕ್ಷಿಣ ಭಾರತೀಯ ತಿನಿಸು. ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಇದು ದಕ್ಷಿಣ ಭಾರತದಲ್ಲಿ ಬೆಳಗಿನ ತಿಂಡಿಯಾಗಿ ಸರ್ವೇಸಾಮಾನ್ಯ.

ದೋಸೆ ಸಾಮಾನ್ಯವಾಗಿ ಎಲ್ಲರ ಮನೆಯ ಬೆಳಗ್ಗಿನ ತಿಂಡಿ. ಕೆಲವರು ಇಷ್ಟಪಟ್ಟು ತಿಂದರೆ, ಇನ್ನು ಕೆಲವರು ಕಷ್ಟಪಟ್ಟು ತಿಂತಾರೆ. ಕೆಲವರಿಗೆ ಅದು ಉದ್ದಿ ದೋಸೆ ಆಗಿರೋದ್ರಿಂದ ಬರೇ ಗ್ಯಾಸ್ಟ್ರಿಕ್‌ ಸಮಸ್ಯೆ ತಂದೊಡ್ಡುತ್ತದೆ. ಹುಳಿ ತೇಗು ಆರಂಭವಾದ್ರೆ ಬಾಯಿರುಚಿಗೆ ತಿಂದ ದೋಸೆ ಆಮೇಲೆ ಹೊಟ್ಟೆಯಲ್ಲೀ ತಿರುಗಾಕೆ ಆರಂಭಿಸುತ್ತೆ.  ಈ ದೋಸೆಯ ಹಿಂದೆ ದೊಡ್ಡ ಮಹಿಮೆಯೇ ಇದೆ. ನಮ್ಮ ಹಿರಿಯರು ಈ ದೋಸೆಯನ್ನು ಕೇವಲ ಹೊಟ್ಟೆ ತುಂಬಿಸಲು ತಯಾರು ಮಾಡಿಲ್ಲ. ನಾವು ದಿನನಿತ್ಯ ಸವಿದು ತಿನ್ನುವ ದೋಸೆಯಲ್ಲಿ ಆಧ್ಯಾತ್ಮ ಮತ್ತು ಜೋತಿಷ್ಯ ಅಡಗಿದೆಯಂತೆ.

Advertisement
Advertisement
Advertisement

ಸಾಧಾರಣವಾಗಿ ದೋಸೆಯ ಹಿಟ್ಟನ್ನು ಅಕ್ಕಿ ಮತ್ತು ಉದ್ದಿನ ಬೇಳೆಗಳನ್ನು ಸ್ವಲ್ಪ ಕಾಲ ನೆನೆಸಿ, ತಿರುವಿ ಒಂದು ರಾತ್ರಿಯ ವರೆಗೆ “ಹುದುಗಲು” ಬಿಡುವುದರ ಮೂಲಕ ಸಿದ್ಧಪಡಿಸಲಾಗುತ್ತದೆ. ಯಾವ ರೀತಿಯ ದೋಸೆ ತಯಾರಿಸಲಾಗುತ್ತಿದೆ ಎಂಬುದನ್ನು ಆಧರಿಸಿ ಈ ಪ್ರಕ್ರಿಯೆಯಲ್ಲಿ ಮೆಂತ್ಯ, ಅವಲಕ್ಕಿ, ಕಡಲೇಬೇಳೆ ಇತ್ಯಾದಿಗಳನ್ನು ಸೇರಿಸಿಕೊಳ್ಳುವುದೂ ಉಂಟು. ಸಿದ್ಧವಾದ ಹಿಟ್ಟನ್ನು ಕಾದ ಕಾವಲಿಯ ಮೇಲೆ ಹುಯ್ಯುವುದರ ಮೂಲಕ ದೋಸೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಸಮಯದಲ್ಲಿ ಸ್ವಲ್ಪ ಎಣ್ಣೆ, ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸುವುದು ವಾಡಿಕೆ. ಅಕ್ಕಿ ಮತ್ತು ಉದ್ದಿನ ಬೇಳೆಯ ಬದಲು ರವೆಯನ್ನು ಉಪಯೋಗಿಸಿ ರವೆ ದೋಸೆ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಮೊದಲಾದವನ್ನು ಉಪಯೋಗಿಸಿ “ದಿಢೀರ್ ದೋಸೆ” ಮೊದಲಾದವನ್ನೂ ಮಾಡಬಹುದು.

Advertisement

ದೋಸೆ ತಯಾರಿಸಲು ಉಪಯೋಗಿಸುವ ವಸ್ತುಗಳಲ್ಲಿ ‘ನವಗ್ರಹ’ಗಳೇ ಅಡಗಿದೆ. ಅಗ್ನಿ – ಸೂರ್ಯ ಅಕ್ಕಿ- ಚಂದ್ರ ಉದ್ದಿನ ಬೇಳೆ – ರಾಹು-ಕೇತು ಮೆಂತ್ಯ – ಬುಧ ದೋಸೆಯ ಕಲ್ಲು – ಕಬ್ಬಿಣ- ಶನಿ ದೋಸೆಯ ಬಣ್ಣ- ಅಂಗಾರಕ- ಮಂಗಳ ಅದನ್ನು ತಿನ್ನುವವರು ಗಂಡು – ಗುರು ಹೆಣ್ಣು – ಶುಕ್ರ ದೋಸೆಯ ರೂಪವೇ ಗುಂಡಗಿನ ಭೂಮಂಡಲ. ದೋಸೆಯನ್ನು ಗಡಿಯಾರ ಚಲನೆಯಂತೆ ಸುತ್ತಿದರೆ ತಾನೇ ಚೆನ್ನಾಗಿ ಬರುವುದು, ಭೂಮಿಯು ಹಾಗೆ ತಾನೇ ಪರಿಭ್ರಮಿಸುವುದು. ಮುಂಚೆಲ್ಲಾ ನಮ್ಮ ಹಿರಿಯರು ದೋಸೆಯನ್ನು ವಿಶೇಷ ದಿನಗಳಲ್ಲಿ ಮಾತ್ರ ಮಾಡುತ್ತಿದ್ದರು. ಹಾಗೂ ಈಗಲೂ ಸಹ ವೈಷ್ಣವ ದೇವಾಲಯಗಳಲ್ಲಿ ದೇವರಿಗೆ ದೋಸೆಯ ನೈವೇದ್ಯ ಪ್ರತಿ ನಿತ್ಯ ನಡೆಯುವುದು. ದೋಸೆ ಎಂಬ ಹೆಸರು ಕಾದ ಕಾವಲಿಯ ಮೇಲೆ ಹಿಟ್ಟನ್ನು ದೋ ಎಂದು ಸುರಿದಾಗ, ಅದು ಸೈ ಎನ್ನುತ್ತಾ ಶಬ್ದ ಮಾಡುವುದರಿಂದ ‘ದೋಸೆ’ ಎನ್ನುವ ಪದ ಉಗಮವಾಗಿರಬೇಕು. ಇತ್ತೀಚೆಗೆ ಬಂದ ಸುದ್ದಿ ಏನಪ್ಪಾ ಅಂದ್ರೆ ಬ್ರಿಟೀಷರು ನಮ್ಮನ್ನು ಆಳುತ್ತಿದ್ದಾಗ ಅವರು ತಮ್ಮ ಒಬ್ಬ ಬಟ್ಲರ್ ಗೆ ಆ ಹಿಟ್ಟನ್ನು ಕೊಟ್ಟು ಹೇಗೆ ಮಾಡುವುದನ್ನು ತಿಳಿಸುತ್ತಾ ‘ Do as I say’ ಎನ್ನುವ ಅಪಭ್ರಂಶವೇ ‘ ದೋಸೆ ‘ ಆಗಿರಬಹುದೆಂದು ಕೆಲ ಜನರ ಅಂಬೋಣ..! –

(Source: Social Media )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 07-11-2024 | ಕೆಲವು ಕಡೆ ಸಾಮಾನ್ಯ ಮಳೆ-ಕೆಲವೆಡೆ ಒಣಹವೆ | ದುರ್ಬಲ ಹಿಂಗಾರು ಮುಂದುವರಿಕೆ |
November 7, 2024
12:00 PM
by: ಸಾಯಿಶೇಖರ್ ಕರಿಕಳ
ಅಡಿಕೆ ಬೆಳೆ ವಿಸ್ತರಣೆ ನಡುವೆ ಅಡಿಕೆ ಮಾರುಕಟ್ಟೆ ವಿಸ್ತರಣೆ ಹೇಗೆ ಸೃಷ್ಟಿಸಿಕೊಳ್ಳಬಹುದು..?
November 7, 2024
11:49 AM
by: ಮಹೇಶ್ ಪುಚ್ಚಪ್ಪಾಡಿ
ನೀತಿ ಆಯೋಗದಿಂದ ಜಲ ಉತ್ಸವ ಆಚರಣೆ | ನೀರು ನಿರ್ವಹಣೆ, ಸಂರಕ್ಷಣೆ ಬಗ್ಗೆ ಅರಿವು
November 7, 2024
6:29 AM
by: The Rural Mirror ಸುದ್ದಿಜಾಲ
ಬೆಂಬಲ ಬೆಲೆ | ಕರ್ನಾಟಕದಿಂದ ಹೆಚ್ಚುವರಿ ಹೆಸರು ಕಾಳು ಖರೀದಿಗೆ ಕೇಂದ್ರ ಸರ್ಕಾರ ನಿರ್ಧಾರ
November 7, 2024
6:13 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror