ಕಣಜಗಳ ನೈಸರ್ಗಿಕ ನಿಯಂತ್ರಣ ನಿಮಗೆ ಗೊತ್ತೆ? | ಇದು ನೈಸರ್ಗಿಕ ಕೀಟ ನಿಯಂತ್ರಕಗಳಾಗಿ ಕೆಲಸ ಮಾಡುತ್ತೆ |

October 9, 2023
3:16 PM
ಕಣಜಗಳು ಇತರ ಕೀಟ ಹಾಗು ಲಾರ್ವಾಗಳನ್ನು ಭಕ್ಷಣೆ ಮಾಡುವುದರ ಮೂಲಕ ನೈಸರ್ಗಿಕ ಕೀಟ ನಿಯಂತ್ರಕಗಳಾಗಿ ಕೆಲಸ ಮಾಡುತ್ತದೆ, ಕೆಲ ದೇಶಗಳಲ್ಲಿ ಇವುಗಳ ಗೂಡಿನಿಂದ ಸಾಂಪ್ರದಾಯಕ ಔಷಧಿ ತಯಾರಿಸುತ್ತಾರೆ ಎಂಬ ಪ್ರತೀತಿ ಇದೆ, ಇದರ ವಿಷವನ್ನು ಔಷಧಿ ತಯಾರಿಕೆಯಲ್ಲಿ ಬಳಸಬಹುದೇ ಎಂದು ಸಂಶೋಧನೆಗಳು ನಡೆಯುತ್ತಿವೆ.

ಕಣಜ, ಆನೆ ಕಡಜಿರ, ಹಾರ್ನೆಟ್ ಎಂದೆಲ್ಲಾ ಕರೆವ ಇವು ಸಂಘ ಜೀವಿ, ಇದರ ಗೂಡನ್ನು ಕಂಡರಂತೂ ಭಯಗೊಂಡು ಗೂಡಿನತ್ತ ಸುಳಿಯದೆ ದೂರ ಹೋಗುತ್ತಾರೆ. ಕಾರಣ ಇದರ ಕಡಿತ ವಿಪರೀತ ಉರಿ ನೋವು ಸೆಳೆತಗಳಿಂದ ಕೂಡಿರುತ್ತದೆ ಇದರ ಹಿಂಬಾಗದ ಕೊಂಡಿಯಿಂದ ವಿಷ ಚುಚ್ಚಿದರೆ ಮುಗಿಯಿತು ಗಂಟೆಗಟ್ಟಲೆನೋವನ್ನು ತಾಳಲು ರೆಡಿ ಆಗಬೇಕು. ಇಂತಹ ಕಣಜಗಳ ಗೂಡುಗಳು ಮನೆ ಹೊಲಗಳ ಅಕ್ಕ ಪಕ್ಕ ಎಲ್ಲಿಯೇ ಕಂಡುಬಂದರೂ ಮೊದಲು ಅವುಗಳನ್ನು ನಮ್ಮಲ್ಲಿ ಬೆಂಕಿಯಿಂದ ಸುಟ್ಟು ಹಾಕುತ್ತಾರೆ.

Advertisement
Advertisement

ಕಣಜಗಳು ಇತರ ಕೀಟ ಹಾಗು ಲಾರ್ವಾಗಳನ್ನು ಭಕ್ಷಣೆ ಮಾಡುವುದರ ಮೂಲಕ ನೈಸರ್ಗಿಕ ಕೀಟ ನಿಯಂತ್ರಕಗಳಾಗಿ ಕೆಲಸ ಮಾಡುತ್ತದೆ, ಕೆಲ ದೇಶಗಳಲ್ಲಿ ಇವುಗಳ ಗೂಡಿನಿಂದ ಸಾಂಪ್ರದಾಯಕ ಔಷಧಿ ತಯಾರಿಸುತ್ತಾರೆ ಎಂಬ ಪ್ರತೀತಿ ಇದೆ, ಇದರ ವಿಷವನ್ನು ಔಷಧಿ ತಯಾರಿಕೆಯಲ್ಲಿ ಬಳಸಬಹುದೇ ಎಂದು ಸಂಶೋಧನೆಗಳು ನಡೆಯುತ್ತಿವೆ. ಕಣಜಗಳ ಗೂಡುಗಳು ಮನೆ ಅಕ್ಕಪಕ್ಕ ಇದ್ದರೆ ಹೊಗೆ ಹಾಕಿ ಓಡಿಸಿ ಇಲ್ಲವೆ ರಾತ್ರಿ ವೇಳೆ ಗೂಡನ್ನು ಚೀಲಗಳಲ್ಲಿ ತುಂಬಿ ಬೇರೆಡೆ ಸಾಗಿಸಿ, ಇಲ್ಲವೆ ರಸಾಯನಿಕಗಳನ್ನು ಸಿಂಪಡಿಸಿ ಹುಳುಗಳ ಸಮೇತ ಗೂಡನ್ನು ನಾಶ ಮಾಡಿ ಎಂಬ ಮಾಹಿತಿ ಎಲ್ಲಾ ಕಡೆ ಸಿಗುತ್ತದೆ, ಆದರೆ ಕೆಲವು ಸಸ್ಯಗಳನ್ನು ಬಳಸಿ ಈ ಕಣಜಗಳನ್ನು ನೈಸರ್ಗಿಕವಾಗಿ ಹೇಗೆ ಓಡಿಸಬಹುದು ಎಂಬ ವಿಧಾನ ನೋಡೋಣ.

ಕೆಲ ಸಸ್ಯಗಳು ಕಣಜಗಳ ನೈಸರ್ಗಿಕ ಪ್ರತಿರೋದಕಗಳಾಗಿವೆ, ಅವುಗಳಲ್ಲಿ ನಮ್ಮಲ್ಲಿ ಬೆಳೆವ ಮುಳ್ಳು ಕೆಂಜಿಗೆ ,ಈಜಿ ಮುಳ್ಳು ಕೆಂಚಿಗೆ, ಕೊಮ್ಮೆ ಎಂದೆಲ್ಲಾ ಕರೆವ ಇದರ ಇಂಗ್ಲೀಷ್ ಹೆಸರು Hultholia mimosoides. ಈ ಮುಳ್ಳು ಗಿಡದ ಸೊಪ್ಪನ್ನು ತಂದು ರಾತ್ರಿ ವೇಳೆ (ರಾತ್ರಿ ವೇಳೆ ಕಣಜಗಳ ಚಟುವಟಿಕೆ ಇರುವುದಿಲ್ಲ) ಗೂಡಿನ ಸಮೀಪ ಇಟ್ಟರೆ ನಿಮ್ಮ ಕೆಲಸ ಮುಗಿಯಿತು 15-20 ದಿನಗಳಲ್ಲಿ ಕಣಜಗಳು ತಮ್ಮ ಗೂಡಿನಲ್ಲಿರುವ ಮೊಟ್ಟೆ ಲಾರ್ವಾಗಳನ್ನು ಬೆಳೆಸಿಕೊಂಡು ಪಲಾಯನ ಮಾಡುತ್ತವೆ. ಹಾಗೇಯೇ ದೊಡ್ಡ ಪತ್ರೆ, ನಿಂಬೆ ಹುಲ್ಲು. ಇವು ಕೂಡ ಕಣಜಗಗಳ ನೈಸರ್ಗಿಕ ಪ್ರತಿರೋಧಕಗಳಾಗಿವೆ, ಇವುಗಳನ್ನು ಮನೆಯ ಅಕ್ಕ ಪಕ್ಕ ಬೆಳೆಸುವುದರಿಂದ ಕಣಜಗಳು ಗೂಡು ನಿರ್ಮಿಸದಂತೆ ತಡೆಯಬಹುದು. ಈ ಕಣಜಗಳ ಪೀಡನೆ ಹೆಚ್ಚುವುದಕ್ಕೆ ನಿಸರ್ಗದ ಏರುಪೇರುಗಳೆ ಕಾರಣ ಇರಬಹುದು, ಇದರ ಬಗೆಗೆ ಮಾಹಿತಿ ಎಲ್ಲಿಯೂ ಸಿಗುತ್ತಿಲ್ಲ ಒಟ್ಟಿನಲ್ಲಿ ಇವುಗಳ ಗೂಡನ್ನು ಕಂಡ ಕಂಡಲ್ಲಿ ಸುಟ್ಟು ಹಾಕದೆ ನೈಸರ್ಗಿಕವಾಗಿ ಓಡಿಸುವ ಪ್ರಯತ್ನ ಮಾಡೋಣ.

ಬರಹ :
ನಾಗರಾಜ್ ಬೆಳ್ಳೂರು

(ವ್ಯಾಟ್ಸಪ್‌ ಮೂಲಕ)

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಶಾಲೆ ಆರಂಭ | ಯೋಜಿತ ಮತ್ತು ಪರಿಣಾಮಕಾರಿ ಆರಂಭದ ಅಗತ್ಯ
May 22, 2025
7:17 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಸಂಜೆ ದೀಪ ಹಚ್ಚುವಾಗ ಪಾಲಿಸಬೇಕಾದ ಕೆಲವು ನಿಯಮಗಳು
May 22, 2025
6:45 AM
by: ದ ರೂರಲ್ ಮಿರರ್.ಕಾಂ
ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ರಾಜ್ಯಸರ್ಕಾರ
May 21, 2025
10:38 PM
by: The Rural Mirror ಸುದ್ದಿಜಾಲ
ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಲು ಕ್ರಮ
May 21, 2025
10:31 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group