ನಮ್ಮ ಮನೆಯಂಗಳದಲ್ಲಿ ಸುತ್ತಲೂ ನೋಡಿದರೆ ಆರೋಗ್ಯಕ್ಕೆ ಬೇಕಾಗಿರುವ ಮನಮದ್ದುಗಳು ಅದೇಷ್ಟೋ ಸಿಗುತ್ತದೆ. ಆದರೆ ನಾವು ಬದುಕಿನ ಜಂಜಾಟದಲ್ಲಿ ಆದನ್ನೇಲ್ಲ ಗಮನಿಸದೇ ಹೋಗಿದ್ದೇವೆ. ಅದೇ ಆರೋಗ್ಯದಲ್ಲಿ ಒಂದು ಚೂರು ಏರುಪೇರಾದಾಗ ಎಲ್ಲವನ್ನು ಗಮನಿಸುತ್ತೇವೆ.
ನಮ್ಮ ಮನೆಯ ಮುಂದೆ ಫ್ರೀಯಾಗಿ ಸಿಗುವ ಪೇರಳೆ ಗಿಡವನ್ನು ಎಲ್ಲರೂ ಗಮನಿಸಿದ್ದಾರೆ. ಆದರಲ್ಲೂ ಪೇರಳೆ ಯನ್ನು ತಿನ್ನಲು ತುಂಬಾನೇ ಇಷ್ಟಪಡುತ್ತಾರೆ. ಇನ್ನು ಕೆಲವು ಹಿರಿಯರು ಹೇಳಿದನ್ನು ಕೇಳಿರಬಹುದು. ಪೇರಳೆ ಮರದಡಿಗೆ ಹೋಗುವಾಗ ಅದರ ತುದಿ ಅಂದರ ಅದರ ಎಸಲು ಅನ್ನು ಬಾಯಿಗೆ ಹಾಕಿ ಅದರ ರಸ ತಿನ್ನಬೇಕು ಇದರಿಂದ ಶುಗರ್ ಕಂಟ್ರೋಲ್ ಆಗುತ್ತೇ. ನಿಜವಾಗಿಯೂ ಪೇರಳೆಯ ಪ್ರತಿಯೊಂದು ಎಲೆಯೂ ಆರೋಗ್ಯಕ್ಕೆ ರಾಮಬಾಣ ಇದ್ದಂತೆ.
ಪೇರಳೆ ಹಣ್ಣು ವಿಟಮಿನ್ ಸಿ ಯು ಸಮೃದ್ಧ ಮೂಲವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ. ಪೇರಳೆಯಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ ಮತ್ತು ಕ್ಯಾಲೋರಿಗಳು ಕಡಿಮೆ ಇರುವುದರಿಂದ ತೂಕ ಇಳಿಸುವವರಿಗೆ ಇದು ಸೂಕ್ತವಾಗಿರುತ್ತದೆ.
ಪೇರಳೆ ಮರದ ಎಲೆಯನ್ನು ಕಷಾಯ ಮಾಡಿ ಮೂರು ನಾಲ್ಕು ದಿನ ಕುಡಿಯುವುದರಿಂದ ಯಾವ ರೀತಿಯೆಲ್ಲ ಪ್ರಯೋಜನವಾಗುತ್ತೇ ಅಂತ ಗೊತ್ತ?.
ಪೇರಳೆ ಎಲೆಯಲ್ಲಿ ಕ್ವೆರ್ಸೆಟಿನ್, ಅನಿಕ್ಯುಲಾರಿನ್, ಎಪಿಜೆನಿನ್, ಗೈಜಾವೆರಿನ್, ಕೆಂಪ್ಫೆರಾಲ್, ಹೈಪರಿನ್, ಮೈರಿಸೆಟಿನ್, ಗ್ಯಾಲಿಕ್ ಆಮ್ಲ, ಕ್ಯಾಟೆಚಿನ್, ಎಪಿಗಲ್ಲೋಕಾಟೆಚಿನ್ ಗ್ಯಾಲೇಟ್ ಮತ್ತು ಕೆಫೀನ್ ಆಮ್ಲದಂತಹ ಪೈಟೋಕೆಮಿಕಲ್ಗಳ ಸಮೃದ್ಧಿಗೆ ಕಾರಣವಾಗಿದೆ. ಈ ಪೇರಳೆ ಎಲೆಗಳ ಸಾರಗಳನ್ನು ಕ್ಯಾನ್ಸರ್ ವಿರೋಧಿ, ಮಧುಮೇಹ, ವಿರೋಧಿ, ಉತ್ಕರ್ಷಣ ನಿರೋಧಕ, ಅತಿಸಾರ ವಿರೋಧಿ, ಆಂಟಿಮೈಕ್ರೋಬಿಯಲ್, ಲಿಪಿಡ್ ಕಡಿಮೆಗೊಳಿಸುವಿಕೆ ಮತ್ತು ಹೆಪಟೊಪ್ರೊಟೆಕ್ಷನ್ ಚಟುವಟಿಕೆಗಳು ಸೇರಿದಂತೆ ಅವುಗಳ ಜೈವಿಕ ಚಟುವಟಿಕೆಗಳಿಗಾಗಿ ಅಧ್ಯಯನ ಮಾಡಲಾಗಿದೆ.
ಆರ್ಯುವೇದ ವೈದ್ಯರ ಪ್ರಕಾರ ಈ ಪೇರಳೆ ಎಲೆಗಳ ಕಷಾಯವೂ ತಲೆತಿರುಗುವಿಕೆ, ಕಣ್ಣಿನ ಆಯಾಸ ಮತ್ತು ನಡುಕಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.


