ಹಾವುಗಳು ಎಂದರೆ ಎಲ್ಲರಿಗೂ ಹೆದರಿಕೆ. ನಮ್ಮ ದೇಶದಲ್ಲಿ ಹಾವು ಅಂದರೆ ಎಷ್ಟೂ ಹೆದರುತ್ತೇವೋ ಅಷ್ಟೇ ಪೂಜಿಸುತ್ತೇವೆ ಕೂಡಾ. ಹಾವು ಅಂದ ಕೂಡಲೇ ಎಲ್ಲವೂ ಅಪಾಯಕಾರಿಯಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಹಾವುಗಳು ಇಲಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಹಾವುಗಳು ಇಲ್ಲದಿದ್ದರೆ ಇಲಿಗಳ ಸಂಖ್ಯೆ ಹೆಚ್ಚಾಗಲೂ ಬಹುದು. ಹಾವುಗಳನ್ನು ಪ್ರಕೃತಿಯ ಒಂದು ಭಾಗವಾಗಿ ನೋಡುವುದು ಈಗ ಉತ್ತಮ ಎಂದು ಪರಿಸರ ವಿಜ್ಞಾನಿಗಳು ಹೇಳುತ್ತಾರೆ.
ಒಟ್ಟಾರೆಯಾಗಿ ಹೇಳುವುದಾರೆ, ನಮ್ಮ ಜಗತ್ತಿನಲ್ಲಿ ಕೇವಲ 600 ಹಾವುಗಳು ಮಾತ್ರ ವಿಷಪೂರಿತವಾಗಿದ್ದು, ಆದರಲ್ಲಿ 200 ಜಾತಿಯ ಹಾವುಗಳು ಮಾತ್ರ ಮನುಷ್ಯರಿಗೆ ಗಂಭೀರ ಅಪಾಯವನ್ನು ಉಂಟುಮಾಡುತ್ತದೆ. ಸಂಶೋಧಕರ ಪ್ರಕಾರ ಜೀವವೈವಿಧ್ಯದ ಮಾಹಿತು ಆಧಾರದ ಮೇಲೆ, ಅತಿ ಹೆಚ್ಚು ಹಾವುಗಳ ತಳಿಗಳನ್ನು ಹೊಂದಿರುವ ದೇಶಗಳ ಪಟ್ಟಿ ಈ ಕೆಳಗಿನಂತಿವೆ:
- ಮೆಕ್ಸಿಕೋ: 438 ಜಾತಿಯ ಹಾವುಗಳು
- ಬ್ರೆಜಿಲ್: 420 ವಿವಿಧ ಹಾವುಗಳು
- ಇಂಡೋನೇಷ್ಯಾ: 376 ಜಾತಿಯ ಹಾವುಗಳು
- ಭಾರತ: 305 ಜಾತಿಯ ಹಾವುಗಳು
- ಕೊಲಂಬಿಯಾ: 301 ಜಾತಿಯ ಹಾವುಗಳು
- ಚೀನಾ: 246 ಜಾತಿಯ ಹಾವುಗಳು
- ಈಕ್ವೇಡಾ: 241 ಜಾತಿಯ ಹಾವುಗಳು
- ವಿಯೆಟ್ನಾಂ: 226 ಜಾತಿಯ ಹಾವುಗಳು
- ಮಲೇಷ್ಯಾ: 216 ಜಾತಿಯ ಹಾವುಗಳು
- ಆಸ್ಟ್ರೇಲಿಯಾ: 215 ಜಾತಿಯ ಹಾವುಗಳು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

