ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ದೇಹವು ರೋಗಗಳಿಗೆ ಗುರಿಯಾಗಬಹುದು ಯಾಕೆ ಗೊತ್ತಾ?. ನಮ್ಮ ದೇಹದಲ್ಲಿ ನೀರಿನಾಂಶವು ಕಡಿಮೆಯಾಗುತ್ತಿದ್ದಂತೆ ದೇಹವು ನಿರ್ಜಲೀಕರಣಕೊಳ್ಳುತ್ತದೆ. ಇದರಿಂದ ಸ್ನಾಯುಗಳ ಒತ್ತಡ, ರಕ್ತ ಪೂರೈಕೆ ಕಡಿಮೆ ಮಾಡುತ್ತದೆ ಮತ್ತು ಸ್ನಾಯುಗಳ ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಸೋಡಿಯಂ , ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಪೋಷಣೆಯ ಕೊರತೆಯು ನರಗಳು ಮತ್ತು ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.
ಈ ಚಳಿಗಾಲದಲ್ಲಿ ಎಲ್ಲರಿಗೂ ಬಾಯಾರಿಕೆ ಕಡಿಮೆ. ಇದರಿಂದ ಒಣ ಚರ್ಮ, ತುಟಿಗಳು ಒಡೆದುಹೋಗುವುದು, ತಲೆ ಭಾರವಾಗುವುದು ಮತ್ತು ಕ್ರಮೇಣ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ ಎಲ್ಲಕ್ಕಿಂತ ಮೊದಲು ದೇಹದಲ್ಲಿರುವ ನರಗಳ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ.ದೇಹದಲ್ಲಿ ನೀರು ಕಡಿಮೆಯಾದಾಗ ನರಗಳು ತಮ್ಮ ಕೆಲಸವನ್ನು ನಿಧಾನಗೊಳಿಸುತ್ತದೆ. ಇದರಿಂದ, ರಕ್ತ ದಪ್ಪವಾಗುತ್ತದೆ, ರಕ್ತ ಪರಿಚಲನೆ ನಿಧಾನವಾಗುತ್ತದೆ. ಸ್ನಾಯುಗಳ ಒತ್ತಡ, ಬಿಗಿತ ಮತ್ತು ಕೈ ಮತ್ತು ಪಾದಗಳಲ್ಲಿ ಜುಮ್ಮೆನಿಸುವಿಕೆ ಈ ಎಲ್ಲ ಸಮಸ್ಯೆಗಳು ಬಂದೇ ಬರುತ್ತದೆ.
ಆದುರಿಂದ ಚಳಿಗಾಲ ಇರಲಿ ಬೇಸಿಗೆ ಕಾಲವಿರಲಿ ನೀರು ಕುಡಿಯುವುದನ್ನು ಕಡಿಮೆ ಮಾಡಲೇ ಬಾರದು. ಒಂದು ವೇಳೇ ಬಾಯಾರಿಕೆ ಇಲ್ಲ ಎಂದು ನೀರು ಕಡಿಮೆ ಮಾಡಿದರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

