ನಿಮಗೆ ಪಿಜ್ಜಾ ಎಂದರೆ ತುಂಬ ಇಷ್ಟವೇ…? | ಅತಿಯಾಗಿ ಪಿಜ್ಜಾ ತಿನ್ನುವುದು ದುಬಾರಿಯಾಗಬಹುದು…!.

January 4, 2024
2:01 PM

ಇತ್ತೀಚಿನ ದಿನಗಳಲ್ಲಿ ಪಿಜ್ಜಾ(Pizza) ತಿನ್ನುವ ಕ್ರೇಜ್(Craze) ತುಂಬಾ ಹೆಚ್ಚಾಗಿದೆ. ಇಂದು ಅತ್ಯಂತ ಪ್ರಸಿದ್ಧವಾದ ಆಹಾರವೆಂದರೆ(Famous food) ಪಿಜ್ಜಾ. ಮಕ್ಕಳಿಂದ(Children) ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಪಿಜ್ಜಾ ಇಟಾಲಿಯನ್(Italian food) ಆಹಾರವಾಗಿದೆ, ಆದರೆ ಇದನ್ನು ಪ್ರಪಂಚದಾದ್ಯಂತ(World wide) ಆನಂದಿಸಲಾಗುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದು ಕೂಡ ದುಬಾರಿಯಾಗಬಹುದು. ಇದರ ಸೇವನೆಯು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು(Health issues) ಉಂಟುಮಾಡುತ್ತದೆ. ಅವು ಯಾವುವು ಎಂದು ತಿಳಿದುಕೊಳ್ಳೋಣ…

ಪಿಜ್ಜಾ ತಿಂದರೆ ಆಗುವ ಹಾನಿಗಳು…

1)ಬೊಜ್ಜು: ಪಿಜ್ಜಾನಲ್ಲಿ ಕ್ಯಾಲೋರಿಗಳು, ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿ ಇರುತ್ತವೆ. ನೀವು ಮಿತಿಗಿಂತ ಹೆಚ್ಚು ತಿಂದರೆ, ಹೊಟ್ಟೆ ಮತ್ತು ಸೊಂಟದ ಕೊಬ್ಬು(Cholesterol) ಹೆಚ್ಚಾಗುವುದು ನಿಶ್ಚಿತ. ನೀವು ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡದಿದ್ದರೆ, ನೀವು ಸ್ಥೂಲಕಾಯತೆಯನ್ನು ಎದುರಿಸಬೇಕಾಗುತ್ತದೆ.

2) ಹೈ ಬಿಪಿ: ಪಿಜ್ಜಾವು ಸಂಸ್ಕರಿಸಿದ ಮಾಂಸಗಳು, ಪೆಪ್ಪೆರೋನಿ, ಸಾಸೇಜ್ ಮತ್ತು ಹೆಚ್ಚಿನ ಉಪ್ಪನ್ನು ಹೊಂದಿರುವ ಹೆಚ್ಚುವರಿ ಚೀಸ್‌ನಂತಹ ಅನೇಕ ಪದಾರ್ಥಗಳನ್ನು ಒಳಗೊಂಡಿದೆ. ಉಪ್ಪಿನಲ್ಲಿ ಸೋಡಿಯಂ ಅಧಿಕವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದನ್ನು ಅತಿಯಾಗಿ ಸೇವಿಸಿದರೆ, ಹೆಚ್ಚಿನ ರಕ್ತದ ಒತ್ತಡದ(BP) ಸಮಸ್ಯೆ ಸಂಭವಿಸಬಹುದು.

3) ಮಧುಮೇಹ: ಪಿಜ್ಜಾ ಹಿಟ್ಟಿನಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು (ಮೈದಾ ಹಿಟ್ಟು) ಇರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ಮಧುಮೇಹಕ್ಕೆ(Diabetes) ಕಾರಣವಾಗಬಹುದು. ಮಧುಮೇಹಿಗಳಿಗೆ ಪಿಜ್ಜಾ ವಿಷವಿದ್ದಂತೆ.

4) ಅಜೀರ್ಣ : ಅನೇಕ ಜನರು ಪಿಜ್ಜಾದ ರುಚಿಯನ್ನು ಇಷ್ಟಪಡುತ್ತಾರೆ. ಇದರಿಂದಾಗಿ ಜನರು ಇದನ್ನು ಹೆಚ್ಚು ಸೇವಿಸಲು ಪ್ರಾರಂಭಿಸುತ್ತಾರೆ. ಇದರಲ್ಲಿ ಹಾನಿಕಾರಕ ಕೊಬ್ಬಿನಂಶವೂ ಹೆಚ್ಚಿರುವುದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಇದು ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಉಬ್ಬದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಸೂಚನೆ:  ಪಿಜ್ಜಾವು ಪೋಷಕಾಂಶಗಳಿಗಿಂತ ಹೆಚ್ಚು ಹಾನಿಕಾರಕ ವಸ್ತುಗಳನ್ನು ಒಳಗೊಂಡಿದೆ. ಅದರ ರುಚಿಯನ್ನು ಹೆಚ್ಚಿಸಲು ಅತಿ ಸಂಸ್ಕರಿ ಪದಾರ್ಥಗಳು ಹಾಗೂ ಎಂ ಎಸ್ ಜಿ ಯಂತಹ ರಾಸಾಯನಿಕಗಳನ್ನು ಕೂಡ ಸೇರಿಸಿರುತ್ತಾರೆ. ಪಿಜ್ಜಾವನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ದೀರ್ಘಕಾಲದವರೆಗೆ ತಿನ್ನುವ ಅಭ್ಯಾಸವು ಭವಿಷ್ಯದಲ್ಲಿ ಪಾರ್ಶ್ವವಾಯು, ಹೃದ್ರೋಗ, ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಬಾಯಿ ಚಪಲ ಮುಖ್ಯವೆ ಅದು ಆರೋಗ್ಯ ಮುಖ್ಯವೇ ಎಂದು ಯೋಚಿಸಿ ಪಿಜ್ಜಾ ತಿನ್ನಬೇಕೆ ಅಥವಾ ಎಷ್ಟು ತಿನ್ನಬೇಕು ಎಂದು ತಮ್ಮ ಸ್ವಂತ ಬುದ್ಧಿವಂತಿಕೆಯಿಂದ ನಿರ್ಧರಿಸಬೇಕು.

ಮೂಲ – ಕುಮಾರ್ ಚೋಪ್ರಾ, ಸುನಿಲ್ಇ ನಾಮದಾರ ಕನ್ನಡಕ್ಕೆ: ಡಾ. ಕುಲಕರ್ಣಿ ಪಿ. ಎ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror