ನಿಮಗೂ ತಂದೂರಿ ರೋಟಿ ಇಷ್ಟವೇ..? | ತಂದೂರಿ ರೋಟಿ ಹಾನಿಕಾರಕವಾಗಬಹುದು | ತಿನ್ನುವ ಮೊದಲು ಎಚ್ಚರ….!

March 9, 2024
3:39 PM
ತಂದೂರಿ ರೋಟಿಯ ಅಪಾಯಗಳ ಬಗ್ಗೆ ಬರೆದಿದ್ದಾರೆ ಡಾ. ಪ್ರ. ಅ. ಕುಲಕರ್ಣಿ.

ಹೆಚ್ಚಿನ ಜನರು ತಂದೂರಿ ರೊಟ್ಟಿಯನ್ನುತಿನ್ನುತ್ತಾರೆ. ಆದರೆ  ತಂದೂರಿ ರೊಟ್ಟಿ ಆರೋಗ್ಯಕ್ಕೆ(Health) ಎಷ್ಟು ಕೆಟ್ಟದ್ದು ಗೊತ್ತಾ? ತಂದೂರಿ ರೋಟಿ ಊಟದ ತಟ್ಟೆಯಲ್ಲಿ ಖಂಡಿತವಾಗಿ ಕಾಣಿಸಿಕೊಳ್ಳುತ್ತದೆ. ತಂದೂರಿ ರೊಟ್ಟಿ ಸಸ್ಯಾಹಾರಿ(Veg) ಮತ್ತು ಮಾಂಸಾಹಾರಿ(Non veg) ಭಕ್ಷ್ಯಗಳಾದ ದಾಲ್, ಕಡಾಯಿ ಪನೀರ್, ಎಗ್ ಕರಿ ಮತ್ತು ಚಿಕನ್ ಕೊರ್ಮಾ ಎರಡಕ್ಕೂ ಚೆನ್ನಾಗಿ ಹೊಂದುತ್ತದೆ.

ತಂದೂರಿ ರೊಟ್ಟಿ ತಿನ್ನಲು ರುಚಿಯನಿಸುತ್ತದೆ. ಆದ್ದರಿಂದ ಜನರು ಅದನ್ನು ಪ್ರೀತಿಯಿಂದ ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಪ್ರಯೋಜನಕಾರಿಯೇ ಅಥವಾ ಇಲ್ಲವೇ? ತಿಳಿದುಕೊಳ್ಳಿ… ತಂದೂರಿ ರೊಟ್ಟಿಗಳನ್ನು ಮೈದಾಹಿಟ್ಟಿನಿಂದ ಮಾಡಲಾಗುತ್ತದೆ. ಕೆಲವು ಬಾರಿ ಅಗ್ಗದ ರೇಷನ್ ಅಕ್ಕಿಯನ್ನು ಹಿಟ್ಟನ್ನು ಕೂಡ ಅದರಲ್ಲಿ ಮಿಶ್ರಣ ಮಾಡಲಾಗುತ್ತದೆ. ಇದರಿಂದ, ತಂದೂರಿ ರೊಟ್ಟಿಯಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಅಧಿಕವಾಗಿದೆ. ಅಂದರೆ ಒಂದು ತಂದೂರಿ ರೋಟಿಯು ಸುಮಾರು 120 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಜೊತೆಗೆ ಕಾರ್ಬೋಹೈಡ್ರೇಟ್ (ಪಿಷ್ಟ/ಸಕ್ಕರೆ)ಗಳ ಹೊರತು ಇದರಲ್ಲಿ ಬೇರೆ ಯಾವುದೇ ಪೋಷಕಾಂಶಗಳು ಇರುವುದಿಲ್ಲ. ನಾರಿನಂಶದ ಪ್ರಮಾಣವಂತೂ ಶೂನ್ಯವಾಗಿರುತ್ತದೆ.

ರೊಟ್ಟಿ ಸುಡಲು ತಂದೂರಿ ಒಲೆಯಲ್ಲಿ ಇದ್ದಲ್ಲಿನ ಹೊಗೆಯನ್ನು ಬಳಸಲಾಗುತ್ತದೆ. ಈ ಹೊಗೆಯಿಂದ ತಂದೂರಿ ರೊಟ್ಟಿಯಲ್ಲಿ ಅನಾರೋಗ್ಯಕರ ಘಟಕಗಳು ಸೇರಿಕೊಳ್ಳುತ್ತವೆ ಅಥವಾ ನಿರ್ಮಾಣವಾಗುತ್ತವೆ. ಅಲ್ಲದೆ, ಹೊಗೆಯಿಂದ ತಯಾರಿಸಿದ ಇಂತಹ ಪದಾರ್ಥ ಕ್ಯಾನ್ಸರ್(Cancer) ಕಾರಕವು ಆಗುತ್ತದೆ. ರೆಸ್ಟೋರೆಂಟಿನಲ್ಲಿ ಮಾಡಿದ ತಂದೂರಿ ರೊಟ್ಟಿ ಆರೋಗ್ಯಕ್ಕೆ ಹಾನಿಕಾರಕವಾಗುವುದಕ್ಕೆ ಇನ್ನೂ ಕಾರಣಗಳಿವೆ. ರೆಸ್ಟೋರೆಂಟ್-ನಿರ್ಮಿತ ತಂದೂರಿ ರೊಟ್ಟಿಗಳು ಬೆಣ್ಣೆ ಮತ್ತು ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುತ್ತವೆ. ಆರೋಗ್ಯ ತಜ್ಞರ ಪ್ರಕಾರ, ಹಿಟ್ಟು ನಿಮ್ಮ ಕರುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ತಂದೂರಿ ರೊಟ್ಟಿಯನ್ನು ಸೇವಿಸುವುದರಿಂದ ಇರಿಟೇಬಲ್ ಬಾವೆಲ್ ಸಿಂಡ್ರೋಮ್ (ಕರುಳಿನ ಕಾಯಿಲೆ), ಜೀರ್ಣಕಾರಿ ಸಮಸ್ಯೆಗಳು, ಮಲಬದ್ಧತೆ, ಟ್ರೈಗ್ಲಿಸರೈಡ್‌ಗಳು ಮತ್ತು ಕೊಲೆಸ್ಟ್ರಾಲ್‌ಗಳ ಹೆಚ್ಚಳದಂತಹ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು.

ನೀವು ತಂದೂರಿ ರೊಟ್ಟಿಯ ಅಪಾಯಗಳು ಏನು ?

ಮಧುಮೇಹ ಅಪಾಯ : ರೆಸ್ಟೊರೆಂಟ್‌ಗಳಿಂದ ಆರ್ಡರ್ ಮಾಡುವ ತಂದೂರಿ ರೊಟ್ಟಿಯಲ್ಲಿ ಅನೇಕ ಅನಾರೋಗ್ಯಕರ ಅಂಶಗಳಿವೆ. ಇದನ್ನು ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಮಧುಮೇಹ ಇಲ್ಲದವರಲ್ಲಿ ಈ ಕಾಯಿಲೆ ಉಲ್ಬಳಣಿಸಬಹುದು. ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ತಂದೂರಿ ರೊಟ್ಟಿಗಳನ್ನು ರೆಸ್ಟೋರೆಂಟ್‌ಗಳಿಂದ ಆರ್ಡರ್ ಮಾಡಬಾರದು.

ಹೃದ್ರೋಗದ ಅಪಾಯ : ರೆಸ್ಟೊರೆಂಟ್‌ಗಳಲ್ಲಿ ತಂದೂರಿ ರೊಟ್ಟಿಗಳನ್ನು ಮರ, ಇದ್ದಿಲು ಅಥವಾ ಕಲ್ಲಿದ್ದಲಿನಿಂದ ತಯಾರಿಸಿದ ತಂದೂರ್‌ಗಳಲ್ಲಿ ತಯಾರಿಸಲಾಗುತ್ತದೆ. ಇದು ವಾಯು ಮಾಲಿನ್ಯವನ್ನು ಉಂಟುಮಾಡುತ್ತದೆ ಮತ್ತು ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ಅಲ್ಲದೆ, ಇದರಲ್ಲಿ ಸವರಲು ಅನಾರೋಗ್ಯಕರ ಕೊಬ್ಬುಗಳನ್ನು ಬಳಸಲಾಗುತ್ತದೆ. ನಾರಿನಂಶದ ಕೊರತೆ ಮತ್ತು ಅಧಿಕ ಪಿಷ್ಟ ಕೊಲೆಸ್ಟ್ರಾಲ್ ಹೆಚ್ಚಿಸಲು ಹಾಗೂ ರಕ್ತನಾಳಗಳನ್ನು ಕೆಡಿಸಲು ಕಾರಣವಾಗುತ್ತವೆ.

ತೂಕ ಹೆಚ್ಚಳ ಮತ್ತು ಬೊಜ್ಜಿನ ಅಪಾಯ : ಸಂಸ್ಕರಿಸಿದ ಹಿಟ್ಟನ್ನು ತಿನ್ನುವುದು ಸ್ಥೂಲಕಾಯತೆಯ ಅಪಾಯವನ್ನು ಹೆಚ್ಚಿಸಬಹುದು. ಹಿಟ್ಟು ದೇಹದಲ್ಲಿ ಕೊಬ್ಬನ್ನು ಸುಡುವುದನ್ನು ತಡೆಯುತ್ತದೆ ಮತ್ತು ಕೊಬ್ಬಿನ ಆಕ್ಸಿಡೀಕರಣವನ್ನು ತಡೆಯುತ್ತದೆ. ಹಾಗೂ ಅಧಿಕ ಪಿಷ್ಟಗಳು ದೇಹದಲ್ಲಿ ಕೊಬ್ಬಿನಲ್ಲಿ ರೂಪಾಂತರವಾಗುತ್ತವೆ.

ಕ್ಯಾನ್ಸರ್ ನ ಅಪಾಯ: ತಂದೂರಿ ರೋಟಿಯನ್ನು ಇದ್ದಲ್ಲಿನ ಹೊಗೆಯ ಮೇಲೆ ಬೇಯಿಸಲಾಗುತ್ತದೆ. ಹೊಗೆಯಲ್ಲಿ ಇಂಗಾಲದ ಮೋನಾಕ್ಸೈಡ್ ಮತ್ತು ಡಯಾಕ್ಸೈಡ್ ಘಟಕಗಳು ಇರುತ್ತವೆ. ಇವು ನಮ್ಮ ದೇಹಕ್ಕೆ ಹಾನಿಕಾರಕ/ ಕ್ಯಾನ್ಸರ್ ಕಾರಕ ಅನಿಲಗಳು. ಅಲ್ಲದೆ, ತಂದೂರಿ ರೊಟ್ಟಿ ಅಲ್ಲಲ್ಲಿ ಹೊತ್ತಿ ಕರಕಲಾಗಿರುತ್ತದೆ. ಈ ಕರಕಲು ಅಂದರೆ ಇದ್ದಿಲು ಅಥವಾ ಇಂಗಾಲ. ಇದರ ಸೇವನೆ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಈ ಕರಕಲು ನಮಗೆ ತಿಳಿಯದಂತೆ ನಮ್ಮ ಹೊಟ್ಟೆ ಸೇರುತ್ತದೆ. ಮೈದಾದಲ್ಲಿನ ಪಿಷ್ಟ ಸಹ ಕರುಳಿನ ಆರೋಗ್ಯ ಕೆಡಿಸಿ ಕರುಳಿನ ಕ್ಯಾನ್ಸರ್ ಗೆ ಕಾರಣವಾಗಬಹುದು.

ಒತ್ತಡ ಮತ್ತು ಖಿನ್ನತೆ: ತಂದೂರಿ ರೋಟಿಯನ್ನು ಅತಿಯಾಗಿ ಸೇವಿಸುವುದರಿಂದ ಒತ್ತಡ, ಖಿನ್ನತೆ ಮತ್ತು ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗಳು ಬರಬಹುದು. ಸಂಸ್ಕರಿಸಿದ ಹಿಟ್ಟು ಸಹ ದೇಹದಲ್ಲಿ ಉರಿಯೂತವನ್ನು ಪ್ರಚೋದಿಸುತ್ತದೆ. ಈ ಕಾರಣಕ್ಕಾಗಿಯೇ ತಂದೂರಿ ರೊಟ್ಟಿಯ ಅತಿಯಾದ ಸೇವನೆಯಿಂದ ದೂರವಿರಬೇಕು.

ಸಂಗ್ರಹ ಮತ್ತು ಸಂಪಾದನೆ: ಡಾ. ಪ್ರ. ಅ. ಕುಲಕರ್ಣಿ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ
March 15, 2025
7:00 AM
by: ದಿವ್ಯ ಮಹೇಶ್
ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |
March 14, 2025
11:36 PM
by: ದ ರೂರಲ್ ಮಿರರ್.ಕಾಂ
ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ
March 14, 2025
11:03 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ
March 14, 2025
10:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror