ತಿಂದ ತಕ್ಷಣ ಶೌಚಾಲಯಕ್ಕೆ ಹೋಗಬೇಕಾಗುತ್ತಾ….? ಏಕೆ….?

May 27, 2024
8:54 PM

ಊಟ(Meal), ತಿಂಡಿಯ(Breakfast) ನಂತರ ವಿಶಿಷ್ಟ ಸಮಸ್ಯೆ ಇರುವ ಎರಡು ಬಗೆಯ ಜನರು ಪ್ರಪಂಚದಲ್ಲಿ ಇದ್ದಾರೆ. ಒಂದು – ಊಟ ಮಾಡಿದ ತಕ್ಷಣ ನಿದ್ರೆಗೆ(Sleeping) ಜಾರುತ್ತಾರೆ. ಮತ್ತು ಎರಡನೆಯ ಬಗೆಯ ಜನ ತಿಂದ ಕೂಡಲೇ ಶೌಚಾಲಯಕ್ಕೆ(Motion) ಓಡುತ್ತಾರೆ. ಮೊದಲ ವರ್ಗದ ಜನರ ಹೆಚ್ಚು ಚಿಂತಿಸಲು ಯಾವುದೇ ಕಾರಣವಿಲ್ಲ. ಆದರೆ, ಎರಡನೇ ಬಗೆಯವರು ಸ್ವಲ್ಪ ಜಾಗೃತರಾಗುವುದು ಅಗತ್ಯ. ತಿಂದ ನಂತರ ಪದೇಪದೇ ಶೌಚಾಲಯಕ್ಕೆ ಹೋಗಬೇಕಾದರೆ, ನಿಮ್ಮ ಆರೋಗ್ಯದ(Health) ಬಗ್ಗೆ ಗಮನ ಹರಿಸಬೇಕು, ಹಾಗೆಂದು ಅಪಾಯಕಾರಿಯಾದ ಬೆಳವಣಿಗೆಗಳು ತಕ್ಷಣಕ್ಕೆ ಇಲ್ಲ.

Advertisement
Advertisement

ತಜ್ಞರ ಪ್ರಕಾರ, ಅಕಾಲಿಕ ಶೌಚಕ್ಕೆ ಹೋಗುವ ಅಭ್ಯಾಸವು ಮುಂದೆ ನಿಮ್ಮನ್ನು ಬಹಳಷ್ಟು ತೊಂದರೆಗೆ ಸಿಲುಕಿಸಬಹುದು. ಆದ್ದರಿಂದ, ತಿಂದ ನಂತರ ತಕ್ಷಣವೇ ಶೌಚಕ್ಕೆ ಹೋಗಬೇಕಾದ ಅನಿವಾರ್ಯತೆ ಏಕೆ ಉಂಟಾಗುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಅವಶ್ಯಕ.

Advertisement

ಆಹಾರ : ಶೌಚಕ್ಕೆ ಹೋಗುವ ಅಭ್ಯಾಸವು ವ್ಯಕ್ತಿಯ ಆಹಾರಕ್ರಮವನ್ನು ಅವಲಂಬಿಸಿರುತ್ತದೆ. ನಿರಂತರವಾಗಿ ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಮತ್ತು ಹಸಿ ಸಲಾಡ್ ಅಧಿಕ ಪ್ರಮಾಣದಲ್ಲಿ ತಿನ್ನುವುದು ಪದೇ ಪದೇ ಶೌಚಾಲಯಕ್ಕೆ ಹೋಗಲು ಕಾರಣವಾಗಬಹುದು. ಹೆಚ್ಚಿನ ಫೈಬರ್ ಸೇವನೆಯು ಕರುಳಿನ ಸಡಿಲ ಚಲನೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಫೈಬರ್ ಅಂಶ ಹೆಚ್ಚಿರುವುದರಿಂದ ಪದೇ ಪದೇ ಶೌಚಕ್ಕೆ ಹೋಗಬೇಕಾಗುತ್ತಿದ್ದರೆ ಆಹಾರದಲ್ಲಿ ನಾರಿನಂಶವನ್ನು ಕಡಿಮೆ ಮಾಡುವ ಮೂಲಕ ಸುಲಭವಾಗಿ ನಿಯಂತ್ರಿಸಬಹುದು. ಆದರೆ, ಮಸಾಲೆಯುಕ್ತ ಆಹಾರದಿಂದಾಗಿ ಶೌಚಾಲಯಕ್ಕೆ ಭೇಟಿ ನೀಡಬೇಕಾಗುತ್ತದೆ ಚಿಂತೆಗೆ ಕಾರಣವಾಗುತ್ತವೆ. ಏಕೆಂದರೆ, ಇದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಆಹಾರ ಅಲರ್ಜಿ : ಕೆಲವರಿಗೆ ವಿಭಿನ್ನ ಅಥವಾ ವಿಶಿಷ್ಟ ಆಹಾರಗಳ ಅಲರ್ಜಿ ಇರುತ್ತದೆ. ಅಲರ್ಜಿ ಇರುವವರು ಈ ಆಹಾರಗಳನ್ನು ಜೀರ್ಣಿಸಿಕೊಳ್ಳುವುದಿಲ್ಲ, ಇದರಿಂದಾಗಿ ಶೌಚಾಲಯಕ್ಕೆ ಹಾಗಾಗಿ ಭೇಟಿ ನೀಡಬೇಕಾದ ಅಗತ್ಯ ಉಂಟಾಗುತ್ತದೆ. ಇವುಗಳಲ್ಲಿ ಮೀನು, ಹಾಲು, ಬೀಜಗಳು, ಮೊಟ್ಟೆಗಳು ಸೇರಿವೆ.

Advertisement

ಕೆರಳುವ ಕರುಳಿನ ಸಹಲಕ್ಷಣಗಳು ( ಇರ್ರಿಟೇಬಲ್ ಬೋವೆಲ್ ಸಿಂಡ್ರೋಮ್) : ಇದೊಂದು ದೊಡ್ಡ ಕರುಳಿನ ಕಾಯಿಲೆ. ಹೊಟ್ಟೆನೋವು, ಚಡಪಡಿಕೆ ಮುಂತಾದ ಲಕ್ಷಣಗಳು ಇದರಲ್ಲಿ ಎದುರಾಗುತ್ತವೆ. ಈ ಕಾಯಿಲೆಯಲ್ಲಿ, ಆಹಾರವು ಹೊಟ್ಟೆಯನ್ನು ಪ್ರವೇಶಿಸಿದ ತಕ್ಷಣ, ಕರುಳುಗಳು ಅದನ್ನು ಸಹಿಸುವುದಿಲ್ಲ. ಆದ್ದರಿಂದ, ಕರುಳಿನ ಚಲನೆಯು ವೇಗವಾಗಿ ಹೆಚ್ಚಾಗುತ್ತದೆ ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳುವ ಮೊದಲು ಹೊರಹಾಕುತ್ತದೆ. ಇದು ಪದೇ ಪದೇ ಶೌಚಕ್ಕೆ ಹೋಗಲು ಕಾರಣವಾಗುತ್ತದೆ. ಇದು ದೀರ್ಘಕಾಲದ ಕಾಯಿಲೆಯಾಗಿದ್ದು, ಇದು ದೀರ್ಘಕಾಲದವರೆಗೆ ಮುಂದುವರಿದರೆ, ಇದು ಅನೇಕ ಪೋಷಕಾಂಶಗಳ ಕೊರತೆ ಮತ್ತು ಅದಕ್ಕೆ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು.

ಸಂಗ್ರಹ : ಡಾ.ಜಿತೇಂದ್ರ ಜೋಕಿ

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೈಸೂರು ದಸರದಲ್ಲಿ ರೈತರಿಗೆ ಗೌರವ | ಬೆಳೆ ಇಳುವರಿ ಹೆಚ್ಚು ಮಾಡಲು ಹಲವು ಕ್ರಮ – ಕೃಷಿ ಸಚಿವ ಚಲುವರಾಯಸ್ವಾಮಿ
October 6, 2024
5:35 PM
by: ದ ರೂರಲ್ ಮಿರರ್.ಕಾಂ
ಜಿಲ್ಲಾಸ್ಪತ್ರೆಗಳಲ್ಲಿ ‘ಡೇ ಕೇರ್ ಕಿಮೋ ಥೆರಫಿ’ ಕೇಂದ್ರ ಶೀಘ್ರದಲ್ಲೇ ಆರಂಭ | ಸಚಿವ ದಿನೇಶ್ ಗುಂಡೂರಾವ್
October 6, 2024
5:30 PM
by: ದ ರೂರಲ್ ಮಿರರ್.ಕಾಂ
ಬಗರ್‌ಹುಕುಂ ಅರ್ಜಿಗಳ ವಿಲೇವಾರಿಗಾಗಿ 2 ತಿಂಗಳು ಗಡುವು | ಕಂದಾಯ ಸಚಿವ ಕೃಷ್ಣ ಭೈರೇಗೌಡ
October 6, 2024
5:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 06-10-2024 | ಸಂಜೆ ಗುಡುಗು ಸಹಿತ ಮಳೆ ನಿರೀಕ್ಷೆ | ಅ.15 ರವರೆಗೆ ಮಳೆ ಸಾಧ್ಯತೆ |
October 6, 2024
2:46 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror