ಅಡುಗೆ ಎಣ್ಣೆಯನ್ನು(Cooking Oil) ಪದೇ ಪದೇ ಕಾಯಿಸುವುದರಿಂದ(repeatedly heating) ಅದರಲ್ಲಿ ಫ್ರೀ ರಾಡಿಕಲ್ಗಳು(Free radicals) ನಿರ್ಮಾಣವಾಗುತ್ತವೆ ಮತ್ತು ಅದರಲ್ಲಿನ ಉತ್ಕರ್ಷಣ ನಿರೋಧಕ ಘಟಕಗಳು(antioxidant components) ನಾಶವಾಗುತ್ತವೆ. ಇದು ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ(affects our health) ಬೀರುತ್ತದೆ. ತೈಲದ ಮರುಬಳಕೆಯು(Re-Use) ಅನೇಕ ರೋಗಗಳನ್ನು(Illness) ಆಹ್ವಾನಿಸುತ್ತದೆ. ಹಾಗಾದರೆ ತೈಲ ಮರುಬಳಕೆ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ತೈಲವು ದೈನಂದಿನ ಆಹಾರದ ನಿಯಮಿತ ಭಾಗವಾಗಿದೆ. ಬಹುತೇಕ ಎಲ್ಲಾ ಮನೆಗಳಲ್ಲಿ ಪೂರಿ, ಭಜಿ, ಹಪ್ಪಳ, ಸಂಡಿಗೆ, ಇತ್ಯಾದಿಗಳನ್ನು ಕರಿದು ತಿನ್ನುತ್ತಾರೆ. ಅದೇ ಸಮಯದಲ್ಲಿ, ಪೂರಿ, ಭಜಿ, ಹಪ್ಪಳ, ಸಂಡಿಗೆ, ಕರಿಯಲು ಬಳಸುವ ಎಣ್ಣೆಯನ್ನು ಅನೇಕ ಜನರು ಮತ್ತೊಂದು ಭಕ್ಷ್ಯ ಮಾಡಲು ಬಳಸುತ್ತಾರೆ. ಆದರೆ ಇದು ನಿಮಗೆ ತಿಳಿದಿದೆಯೇ? ಒಮ್ಮೆ ಬಳಸಿದ ಈ ಎಣ್ಣೆ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು..? ಹಾಗಾದರೆ ತಿಳಿಯಿರಿ…
ನೀವು ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡಿದರೆ, ಅದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ತೈಲವನ್ನು ನಿರಂತರವಾಗಿ ಬಿಸಿ ಮಾಡುವುದರಿಂದ ಅದರ ಉತ್ಕರ್ಷಣ ನಿರೋಧಕಗಳು ನಾಶವಾಗುತ್ತವೆ ಮತ್ತು ಅದರಲ್ಲಿ ಸ್ವತಂತ್ರ ರಾಡಿಕಲ್ಗಳು ಉತ್ಪತ್ತಿಯಾಗುತ್ತವೆ. ಇದು ಕ್ಯಾನ್ಸರ್ ಉಂಟುಮಾಡುವ ಅಂಶಗಳನ್ನು ಹೆಚ್ಚಿಸುತ್ತದೆ. ಈ ಅಂಶಗಳು ಆಹಾರದ ಮೂಲಕ ನಿಮ್ಮ ದೇಹವನ್ನು ಪ್ರವೇಶಿಸುತ್ತವೆ. ಇದು ಹೊಟ್ಟೆಯ ಕ್ಯಾನ್ಸರ್, ಪಿತ್ತಕೋಶದ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್ ಇತ್ಯಾದಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಬಳಸಿದ ತೈಲವನ್ನು ಮರುಬಳಕೆ ಮಾಡುವುದರಿಂದ ಹೃದಯದ ಸಮಸ್ಯೆಗಳೂ ಉಂಟಾಗಬಹುದು. ಒಮ್ಮೆ ಬಳಸಿದ ತೈಲವನ್ನು ಮರುಬಳಕೆ ಮಾಡುವುದರಿಂದ ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ, ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಬಳಸಿದ ಎಣ್ಣೆಯನ್ನು ಹೆಚ್ಚಿನ ಶಾಖದಲ್ಲಿ ಮತ್ತೆ ಬಿಸಿ ಮಾಡುವುದರಿಂದ ಅದರಲ್ಲಿರುವ ಕೊಬ್ಬನ್ನು ಟ್ರಾನ್ಸ್ ಕೊಬ್ಬುಗಳಾಗಿ ಪರಿವರ್ತಿಸುತ್ತದೆ. ಇದು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ.
ಅಂತಹ ಎಣ್ಣೆಯ ಬಳಕೆಯು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಬಳಸಿದ ಎಣ್ಣೆಯ ಮರುಬಳಕೆಯು, ಆಮ್ಲತೆ, ಹೊಟ್ಟೆ ಹುಣ್ಣು (ಅಲ್ಸರ್) ಉರಿಯೂತದಂತಹ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಅದೇ ಸಮಯದಲ್ಲಿ, ತೈಲದ ಮರುಬಳಕೆಯ ಕಾರಣದಿಂದಾಗಿ ಜೀರ್ಣಕ್ರಿಯೆಯು ಸಹ ತೊಂದರೆಗೊಳಗಾಗುತ್ತದೆ.
ಇದು ಅಜೀರ್ಣ, ಮಲಬದ್ಧತೆ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಸಹ ಉಂಟುಮಾಡುತ್ತದೆ. ಒಮ್ಮೆ ಬಳಸಿದ ಎಣ್ಣೆಯ ಮರುಬಳಕೆಯು ಕೊಬ್ಬಿನ ಹೆಚ್ಚಳ ಮತ್ತು ಸ್ಥೂಲಕಾಯತೆಗೆ ಕಾರಣವಾಗಬಹುದು. ಬಳಸಿದ ಎಣ್ಣೆಯ ಮರುಬಳಕೆಯಿಂದ ತಯಾರಿಸಿದ ಆಹಾರ ಸೇವನೆಯಿಂದಲೂ ಮಧುಮೇಹ ಬರಬಹುದು. ಆದ್ದರಿಂದ ಬಳಸಿದ ಎಣ್ಣೆಯ ಮರುಬಳಕೆಯನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ನೀವು ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೂ ಸಹ, ನೀವು ತೈಲವನ್ನು ಮರುಬಳಕೆ ಮಾಡುವುದನ್ನು ತಪ್ಪಿಸಬೇಕು. ಈಗಾಗಲೇ ಬಳಸಿದ ಎಣ್ಣೆಯ ಮರುಬಳಕೆಯು ಸ್ವತಂತ್ರ ರಾಡಿಕಲ್ಗಳಿಂದ ಅನಿಯಂತ್ರಿತ ರಕ್ತದೊತ್ತಡಕ್ಕೆ ಕಾರಣವಾಗಬಹುದು.
ಕನ್ನಡಕ್ಕೆ: ಡಾ ಕುಲಕರ್ಣಿ ಪಿ. ಎ.
By repeatedly heating cooking oil, free radicals are formed in it and its antioxidant components are destroyed. It adversely affects our health. Reuse of oil invites many diseases. So let’s know how oil recycling affects our health.