ನಿಮ್ಮ ಕನಸಿನ ಕೃಷಿ ಭೂಮಿಯ ವಿನ್ಯಾಸ ಮಾಡುವ ಇಚ್ಚೆ ಇದೆಯೇ..? | ಫಾರ್ಮ್ ವಿನ್ಯಾಸದ ಉದ್ದೇಶವೇನು?

July 8, 2024
12:03 PM

ಕೃಷಿ ಜಮೀನು(Farm Land) ಹೊಸದಾಗಿ ಖರೀದಿಸಿರುವ ಮತ್ತು ಕೃಷಿ ಭೂಮಿ ಹೊಂದಿರುವ ಕೃಷಿಕರಿಗೆ(Agriculturist) ತಮ್ಮ ಜಮೀನುಗಳನ್ನು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕೃಷಿ ಭೂಮಿಯನ್ನು ಆಹಾರ, ಅನಂದ, ಆರೋಗ್ಯ, ಆರ್ಥಿಕತೆ ದೃಷ್ಟಿಯಲ್ಲಿ ವಿನ್ಯಾಸ ಮಾಡಿಕೊಳ್ಳುವುದು ಇಂದಿನ ಮತ್ತು ಮುಂದಿನ ದಿನಗಳಿಗೆ ಅತ್ಯವಶ್ಯಕವಾಗಿರುತ್ತದೆ.

Advertisement
Advertisement

ಫಾರ್ಮ್ ವಿನ್ಯಾಸದ ಉದ್ದೇಶವೇನು?: ಕೃಷಿ ಭೂಮಿ ವಿನ್ಯಾಸದ ಅಂತಿಮ ಉದ್ದೇಶವು ಕೃಷಿಕರ ಜೀವನ ಮಟ್ಟವನ್ನು ಸುಧಾರಿಸುವುದು, ನಿರ್ವಹಣೆ ಸುಲಭವಾಗಿಸುವುದು, ಗರಿಷ್ಠ ಬಳಕೆಯ ಉದ್ದೇಶಗಳಿಗೆ ಕೃಷಿ ಭೂಮಿಯನ್ನು ತೆರೆದಿಡುವುದು,ನಿರ್ವಹಣಾ ವೆಚ್ಚ ಮತ್ತು ಸಂಪನ್ಮೂಲಗಳನ್ನು ಸಮರ್ಥವಾಗಿ ಕ್ರೂಢೀಕರಿಸಿಕೊಳ್ಳಲು ಇರುವ ಅವಕಾಶಗಳನ್ನು ಬಳಸಿಕೊಳ್ಳುವುದು.

ಫಾರ್ಮ್ ಲೇಔಟ್ ವಿನ್ಯಾಸ ಎಂದರೇನು?: ಜಮೀನಿನಲ್ಲಿ ವಿವಿಧ ಉದ್ದೇಶಗಳಿಗೆ, ಅನುಕೂಲತೆ ಮತ್ತು ಆರ್ಥಿಕತೆಗೆ ಅನುಗುಣವಾಗಿ ಎಲ್ಲಿ ಸ್ಥಳ ನಿಗಧಿಪಡಿಸಬೇಕು ಎಂಬುದರ ಕುರಿತು ಕೃಷಿಕರಿಗೆ ಸ್ಪಷ್ಟ ನೋಟವನ್ನು ನೀಡುತ್ತದೆ. ಉದಾಹರಣೆಗೆ : ಬೆಳೆ ಆಯೋಜನೆ ನಕ್ಷೆ, ಫಾರ್ಮ ಹೌಸ್, ನೀರಿನ ಪೈಪ್‌ಗಳು, ರಸ್ತೆಗಳು, ವಿದ್ಯುತ್ ಕಂಬಗಳು, ಕುರಿ/ಮೇಕೆ/ಕೋಳಿ ಶೆಡ್,ಬೋರ್‌ವೆಲ್ ಮತ್ತು ನೀರಿನ ಪಂಪ್, ಕಟ್ಟಡಗಳು ಇತ್ಯಾದಿ. ಬೆಳೆ ಆಯೋಜನೆ ಮುನ್ನ ಜಮೀನಿನ ವಿನ್ಯಾಸ(ಲೇಔಟ್ ಪ್ಲಾನ್) ಕಡ್ಡಾಯವಾಗಿ ಮಾಡಿಕೊಳ್ಳಿ, ವಿನ್ಯಾಸ ಮಾಡದೇ ತೋಟ ಕಟ್ಟುವ ಉತ್ಸಹದಲ್ಲಿ ರಸ್ತೆ, ಟ್ರೆಂಚ್/ಇಂಗುಗುಂಡಿ ಮಾಡದೇ ಬೆಳೆ ಆಯೋಜನೆ, ನೀರಾವರಿ ಪೈಪ್ ಲೈನ್ ಎಲ್ಲಾ ಮಾಡಿದ ನಂತರ ಪುನಃ ಬದಲಾವಣೆ ಮಾಡುವುದರಿಂದ ಅಪಾರವಾದ ಆರ್ಥಿಕ ಮತ್ತು ಸಮಯ ನಷ್ಟವಾಗುತ್ತದೆ.

  • ಜಮೀನಿನ ವಿನ್ಯಾಸ ಮಾಡಿದ ನಂತರ ನೀರಾವರಿಗೆ ಪೈಪ್ ಅಳವಡಿಸುವುದು ಮತ್ತು ಗಿಡಗಳ ಆಯೋಜನೆ ಮಾಡಬೇಕು.
  • ವಿನ್ಯಾಸ ಮಾಡುವುದರಿಂದ ಸಾಕಷ್ಟು ಅನುಕೂಲ,ವಿವಿಧ ಉದ್ದೇಶಗಳಿಗೆ ಬಳಕೆ ಮಾಡುವ ಅವಕಾಶ,ಜಮೀನಿನ ಮೌಲ್ಯ ಎಲ್ಲಾ ರೀತಿಯಿಂದಲೂ ವೃದ್ಧಿಯಾಗುತ್ತದೆ.
  • ಪ್ರತ್ಯೇಕ ಪ್ಲಟ್ ನಿರ್ಮಾಣ ಮಾಡುವುದರಿಂದ ಭೂಮಿಯನ್ನು ಬಾಡಿಗೆ ನೀಡಲು,ಮಾರಾಟ ಮತ್ತು ವಿಭಾಗ ಮಾಡಲು ಅನುಕೂಲ.
  • ಫಾರ್ಮ್ ವಿನ್ಯಾಸದಿಂದ ಆರ್ಥಿಕ ಮತ್ತು ಸುಸ್ಥಿರ ಸದೃಢತೆ ಸಾಧಿಸುವುದು ಹೇಗೆ?
  • ಸಣ್ಣ ಅಥವಾ ದೊಡ್ಡ ಕೃಷಿ ಭೂಮಿ ಹೊಂದಿರುವ ಕೃಷಿಕರಿಗೆ ಜಮೀನಿನ ನಿರ್ವಹಣೆ, ಕಾರ್ಮಿಕರ ಅಭಾವ,ಕೃಷಿಕರ ಜೀವನ ನಿರ್ವಹಣೆ, ಕಾರ್ಮಿಕರ ವೇತನ ನೀಡಲು ನಿರೀಕ್ಷಿತ ಆದಾಯವಿಲ್ಲದೇ ಇರುವುದರಿಂದ ಆರ್ಥಿಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ.
  • ಆರ್ಥಿಕವಾಗಿ ಬಲಗೊಳ್ಳಲು ಮತ್ತು ಕಾರ್ಮಿಕರಿಗೆ ಉತ್ತಮ ಸೌಲಭ್ಯ ಮತ್ತು ವೇತನ ನೀಡಲು ಕೃಷಿ ಬೆಳೆ ಬೆಳೆಯುವುದರ ಜೊತೆಗೆ ಕೃಷಿಗೆ ಪೂರಕವಾದ ಮತ್ತು ಕೃಷಿ ಭೂಮಿ ಬಳಸಿಕೊಂಡು ಸ್ಥಳೀಯವಾಗಿ ಮಾಡಬಹುದಾದ ವೃತ್ತಿ/ಉದ್ಯಮ ನೆಡೆಸುವುದು ಅನಿವಾರ್ಯ. ಉದಾಹರಣೆಗೆ : ನರ್ಸರಿ, ಬೀಜ ಉತ್ಪಾದನಾ ಕೇಂದ್ರ, ಕೃಷಿ ತರಬೇತಿ ಕೇಂದ್ರ, ಕೃಷಿ ಪ್ರವಾಸೋದ್ಯಮ, ಫಾರ್ಮ್ ಸ್ಟೇ,ಫಾರ್ಮ್ ಕಾಟೇಜ್, ಗುಡಿ ಕೈಗಾರಿಕೆ, ಧ್ಯಾನ ಕೇಂದ್ರ, ನೈಸರ್ಗಿಕ ಚಿಕೆತ್ಸೆ ಕೇಂದ್ರ, ವಿಶ್ರಾಂತಿ ತಾಣ, ಕುಟುಂಬ ಆಹಾರ ವನ, ಇತ್ಯಾದಿಗಳನ್ನು ಸ್ವಂತ ಅಥವಾ ಬಾಡಿಗೆ ಆಧಾರದಲ್ಲಿ ನಿರ್ವಹಿಸಿ ಪರಸ್ಪರ ಅನುಕೊಲ ಪಡೆಯುವುದು.
  • ಪ್ರತಿ ಕುಟುಂಬದವರು ತಮ್ಮ ಹತ್ತಿರವಿರುವ ಕೃಷಿ ಭೂಮಿಯನ್ನು ಸ್ವಂತ ಅಥವಾ ಬಾಡಿಗೆಗೆ ಹೊಂದುವುದು ಮತ್ತು ತಮ್ಮ ಕುಟುಂಬಕ್ಕೆ ಬೇಕಾದ ಆಹಾರ ಬೆಳೆದುಕೊಳ್ಳುವುದು, ವಾರಂತ್ಯದಲ್ಲಿ ಕುಟುಂಬ ಸದಸ್ಯರೊಂದಿಗೆ ಕೃಷಿ ಭೂಮಿಯಲ್ಲಿ ಕೃಷಿ ಕೆಲಸ ನಿರ್ವಹಿಸುವುದು ಮತ್ತು ಕೃಷಿ ಭೂಮಿಯಲ್ಲಿ ವಿಶ್ರಾಂತಿ ಪಡೆಯುವುದು.
  • ನಗರದ ವಾಹನ ದಟ್ಟಣೆ ತಪ್ಪಿಸಲು ಕೃಷಿ ಭೂಮಿಯಿಂದ ವರ್ಕ್ ಫ್ರಮ್ ಹೋಮ್ ರೀತಿ ವರ್ಕ್ ಫ್ರಮ್ ಫಾರ್ಮ್ ಬದಲಾವಣೆ,ಹೊಸ ಸ್ಟಾರ್ಟ್ ಅಪ್ ಸ್ಥಾಪನೆ ಇತ್ಯಾದಿ ಯೋಜನೆ ರೂಪಿಸುವುದರಿಂದ ಹಳ್ಳಿಯಿಂದ ನಗರಕ್ಕೆ ವಲಸೆ ತಪ್ಪಿಸುವುದರಿಂದ ಹಳ್ಳಿಯಲ್ಲಿ ಉದ್ಯೋಗ ಸೃಷ್ಟಿ,ಭೂ ರಹಿತ ಮತ್ತು ವೃತ್ತಿ ರಹಿತ ಯುವಕರಿಗೆ ಉದ್ಯೋಗವಾಕಾಶವಾಗುತ್ತದೆ.

ನಿಮ್ಮ ಕೃಷಿ ಭೂಮಿಯನ್ನು ವಿನ್ಯಾಸಗೊಳಿಸಲು ಸಲಹೆ ಅಗತ್ಯವಿದೆಯೇ? : ನಮ್ಮ 30 ವರ್ಷಗಳ ಪರಿಣಿತಿಯೊಂದಿಗೆ ನಿಮ್ಮ ಅನುಭವವನ್ನು ಸಂಯೋಜಿಸಿ,ನಿಮ್ಮ ಕೃಷಿ ಭೂಮಿ ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವಿನ್ಯಾಸ ಸಿದ್ದಪಡಿಸಿಕೊಡಲಾಗುವುದು.ಕೃಷಿ ಭೂಮಿ ಮತ್ತು ನೀರಾವರಿ ವಿನ್ಯಾಸ,ಮಣ್ಣಿನ ಸಿದ್ಧತೆ, ಬೆಳೆ ಆಯೋಜನೆ ಮತ್ತು ನಿರ್ವಹಣೆ, ಕೃಷಿ ಮತ್ತು ಕೃಷಿಯೇತರ ಆದಾಯ ಜೋಡಣೆಯ ಅವಕಾಶಗಳು, ಇನ್ನಿತರೇ ಕೃಷಿ ಸಂಬಂಧಿತ ವಿಚಾರಗಳ ಬಗ್ಗೆ ಸಮಾಲೋಚನೆಗಾಗಿ ಸಂಪರ್ಕಿಸಿ.  ಪ್ರಶಾಂತ್ ಜಯರಾಮ್ ಕೃಷಿಕರು ಮತ್ತು ಕೃಷಿ ಸಲಹೆಗಾರರು ಮೊಬೈಲ್ : 9342434530

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-05-2025 | ಸಾಮಾನ್ಯ ಮಳೆ ಮುಂದುವರಿಕೆ | ಮೇ.23 ರಿಂದ ಮತ್ತೆ ಉತ್ತಮ ಮಳೆ | ವಾಯುಭಾರ ಕುಸಿತದ ಪರಿಣಾಮ ಏನಾಗಬಹುದು ?
May 21, 2025
12:46 PM
by: ಸಾಯಿಶೇಖರ್ ಕರಿಕಳ
2028ರ ವೇಳೆಗೆ ಭಾರತದ ಉಪಗ್ರಹ ಸಂವಹನದ ಮಾರುಕಟ್ಟೆ 20 ಶತಕೋಟಿ  ಡಾಲರ್
May 21, 2025
11:18 AM
by: The Rural Mirror ಸುದ್ದಿಜಾಲ
ಕಬ್ಬು ಪೂರೈಸಿದ ರೈತರಿಗೆ 15 ದಿನದೊಳಗೆ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸುವಂತೆ ಮಂಡ್ಯ  ಜಿಲ್ಲಾಧಿಕಾರಿ ಸೂಚನೆ
May 21, 2025
11:11 AM
by: The Rural Mirror ಸುದ್ದಿಜಾಲ
ಗದಗದಲ್ಲಿ  ಸೂರ್ಯಕಾಂತಿ ಹುಟ್ಟುವಳಿ ಖರೀದಿಸಲು ಪ್ರತಿ ಕ್ವಿಂಟಲ್ ಗೆ 7280 ರೂಪಾಯಿ ಬೆಂಬಲ ಬೆಲೆ ನಿಗದಿ
May 21, 2025
11:07 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group